ಮೇ.೧೦ ಕೆಮ್ಮಾಯಿಯಲ್ಲಿ ಆರ್.ಕೆ ಸ್ಪೋಟ್ಸ್ ಮತ್ತು ಆರ್ಟ್ಸ್ ಕ್ಲಬ್‌ನಿಂದ ಉಚಿತ ಪುಸ್ತಕ ವಿತರಣೆ

ಪುತ್ತೂರು:ಆರ್‌ಕೆ ಸ್ಪೋರ್ಟ್ಸ್ ಮತ್ತು ಆರ್ಟ್ಸ್ ಕ್ಲಬ್ ಪುತ್ತೂರು ಇದರ ವತಿಯಿಂದ ವಿದ್ಯೆಯ ಹಾಡಿಗೆ ಪ್ರೇರಣೆಯ ಕೈ ಹಿಡಿತ ಎಂಬ ಧ್ಯೇಯ ವಾಕ್ಯದಲ್ಲಿ ೨೦೦ ವಿದ್ಯಾರ್ಥಿಗಳ:ಇಗೆ ಉಚಿತ ನೋಟ್ ಪುಸ್ತಕಗಳ ವಿತರಣಾ ಕಾರ್ಯಕ್ರಮವು ಮೇ.೧೦ರಂದು ಬೆಳಿಗ್ಗೆ ಕೆಮ್ಮಾಯಿ ಜಂಕ್ಷನ್‌ನಲ್ಲಿ ನಡೆಯಲಿದೆ ಎಂದು ಆಶೀರ್ ಕೆಮ್ಮಾಯಿ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.ಕ್ರೀಡೆ, ಕಲೆ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಉತ್ತೇಜನ ನೀಡುವ ನಿಟ್ಟಿನಲ್ಲಿ ಸ್ಥಾಪನೆಗೊಂಡ ಆರ್‌ಕೆ ಸ್ಪೋರ್ಟ್ಸ್ ಮತ್ತು ಆರ್ಟ್ಸ್ ಕ್ಲಬ್ ಶಾಲಾ ಕಾಲೇಜು ಪ್ರಾರಂಭವಾಗುವ ಮುನ್ನ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ವಿದ್ಯಾಭ್ಯಾಸಕ್ಕಾಗಿ ಅನುಕೂಲವಾಗಿರುವ ನೋಟ್ ಪುಸ್ತಕ, ಪೆನ್ನು ಇತ್ಯಾದಿಗಳನ್ನು ನೀಡುತ್ತಾ ಬಂದಿರುತ್ತೇವೆ.

ಪುಸ್ತಕದ ಕೊರತೆಯಿಂದಾಗಿ ವಿದ್ಯಾಭ್ಯಾಸಕ್ಕೆ ಕುಂಠಿತಗೊಳಿಸಬಾರದು ಎಂಬ ಉದ್ದೇಶದಿಂದ ಪ್ರಾರಂಭಗೊಂಡ ಪುಸ್ತಕ ವಿತರಣೆಯು ಆರಂಭದಲ್ಲಿ ೫೦ ವಿದ್ಯಾರ್ಥಿಗಳಿಗೆ ನಂತರದಲ್ಲಿ ೧೦೦ ವಿದ್ಯಾರ್ಥಿಗಳಿಗೆ ವಿತರಿಸಲಾಗಿದ್ದು ಈ ವರ್ಷ ೨೫೦-೩೦೦ ವಿದ್ಯಾರ್ಥಿಗಳಿಗೆ ವಿತರಿಸುವ ಯೋಜನೆಯಿದೆ. ಪೋಷ್ಟರ್ ಬಿಡುಗಡೆ ಮಾಡುವ ಮೂಲಕ ಕರ್ನಾಟಕ ವಿಧಾನ ಸಭಾ ಅಧ್ಯಕ್ಷ ಯು.ಟಿ ಖಾದರ್ ಅವರ ಮೂಲಕ ಅಧಿಕೃತವಾಗಿ ಕ್ಲಬ್ ಉದ್ಘಾಟನೆಗೊಂಡಿದೆ
ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ, ನಗರ ಸಭಾ ಮಾಜಿ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಮಾಜಿ ಸದಸ್ಯ ಸುಂದರ ಪೂಜಾರಿ ಬಡಾವು, ಮಂಗಳೂರು ಉತ್ತರದ ಮಾಜಿ ಶಾಸಕ ಮೋಯ್ದಿನ್ ಬಾವಾ, ಎನ್‌ಎಸ್‌ವೈನ ಯು.ಟಿ ಫರೀದ್ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಕ್ಲಬ್‌ನ ಜುನೈಫ್ ಕೋಲ್ಪೆ, ರಫೀಕ್ ಕೆಮ್ಮಾಯಿ, ನೌಫಲ್ ಕೆಮ್ಮಾಯಿ, ಇಸ್ಮಾಲ್ ಕೆಮ್ಮಾಯಿ ಹಾಗೂ ಹಸೈನಾರ್ ಕೆಮ್ಮಾಯಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!