ರಾಷ್ಟ್ರೀಯ ಹೆದ್ದಾರಿಯ ಗುಂಡಿಗಳ ಅವ್ಯವಸ್ಥೆ ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಜನಾಕ್ರೋಶ ಪ್ರತಿಭಟನೆ
ಮಂಗಳೂರು, ರಾಷ್ಟ್ರೀಯ ಹೆದ್ದಾರಿಯಲ್ಲಿನ ಗುಂಡಿಗಳ ಅವ್ಯವಸ್ಥೆಯಿಂದ ಅಪಘಾತ ನಡೆದು ಸಾವು ನೋವುಗಳು ಸಂಭವಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ನಂತೂರು ವೃತ್ತದಲ್ಲಿ ಭಾರತೀಯ ಹೆದ್ದಾರಿ ಪ್ರಾಧಿಕಾರ ಮತ್ತು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯ ಭಾಗವಾಗಿ, ಕಾಂಗ್ರೆಸ್ ನಾಯಕರು ವಾಹನ ಅಪಘಾತದಲ್ಲಿ ಮರಣಿಸಿದವರ ಪ್ರತೀಕವಾಗಿ ಪ್ರತಿಕೃತಿ ಮೃತದೇಹವನ್ನು ಹೊತ್ತುಕೊಂಡು ಪಂಪ್‌ವೆಲ್‌ನಲ್ಲಿರುವ ಎನ್‌ಎಚ್‌ಎಐ ಕಚೇರಿಗೆ ಮೆರವಣಿಗೆ ನಡೆಸಿದರು. ಅಲ್ಲಿ ಅವರು ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ನಂತರ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. NHAI ಮತ್ತು BJP ಯ ನಿರ್ಲಕ್ಷ್ಯದಿಂದಾಗಿ…