ಮಿಥುನ್ ರೈ ಸಾರಥ್ಯದಲ್ಲಿ ನಮ್ಮ ಟಿವಿಯ ಸಹಯೋಗದಲ್ಲಿ “ಪಿಲಿನಲಿಕೆ-10” ಅಕ್ಟೋಬರ್ 1 ರಂದು

ಮಂಗಳೂರು :ಪಿಲಿನಲಿಕೆ ಪ್ರತಿಷ್ಠಾನ(ರಿ.) ಮಂಗಳೂರು ಇದರ ಅಧ್ಯಕ್ಷರಾದ ಮಿಥುನ್ ರೈ ಸಾರಥ್ಯದಲ್ಲಿ ನಮ್ಮ ಟಿವಿಯ ಸಹಯೋಗದಲ್ಲಿ “ಪಿಲಿನಲಿಕೆ-10” ಮಂಗಳೂರಿನ ಮಂಗಳಾ ಕ್ರೀಡಾಂಗಣದ ಬಳಿಯ ಕರಾವಳಿ ಉತ್ಸವ ಮೈದಾನದಲ್ಲಿ ಅಕ್ಟೋಬರ್ 1 ಬುಧವಾರ ಬೆಳಿಗ್ಗೆ 10.00 ಗಂಟೆಯಿಂದ ನಡೆಯಲಿರುವುದು ಎಂದು ಮಿಥುನ್ ರೈ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ತುಳುನಾಡಿನ ಅದ್ಭುತ ಕಲಾ ಪರಂಪರೆ ಮತ್ತು ಇಂದು ಇಡೀ ವಿಶ್ವದ ಗಮನವನ್ನು ಸೆಳೆದಿರುವ ಹುಲಿವೇಷ ಕುಣಿತದ ಮೂಲ ಸ್ವರೂಪವನ್ನು ಉಳಿಸುವ, ಅದನ್ನು…

Read More

ಹಟ್ಟಿಯಿಂದ ದನವನ್ನು ಕದ್ದು ದನದ ಮಾಲಕನ ತೋಟದಲ್ಲೇ ಅದನ್ನು ಕೊಂದ ಕಟುಕರನ್ನು ಬಂಧಿಸಿದ ಪೊಲೀಸರು

ಹಟ್ಟಿಯಿಂದ ದನವನ್ನು ಕದ್ದುಕೊಂಡು ಹೋಗಿ ದನದ ಮಾಲಕನ ತೋಟದಲ್ಲೇ ಅದನ್ನು ಕೊಂದು ಅದರ ಕರುಳು ಸಹಿತ ಹೊಟ್ಟೆಯೊಳಗಿನ ತ್ಯಾಜ್ಯವನ್ನು ಅಲ್ಲೇ ಬಿಸಾಡಿದ ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಇರ್ಷಾದ್ (34), ಮಹಮ್ಮದ್ ಮನ್ಸೂರ್ (48), ಅಬ್ದುಲ್ ಅಝೀಮ್ (18) ಎಂದು ಗುರುತಿಸಲಾಗಿದೆ. ಅವರು ಸೆ.4ರಂದು ನಸುಕಿನ ವೇಳೆ ಪೆರ್ನೆಯ ಕಡಂಬು ನಿವಾಸಿ ದೇಜಪ್ಪ ಮೂಲ್ಯರ ಹಟ್ಟಿಯಿಂದ ದನವನ್ನು ಕದ್ದು, ದೇಜಪ್ಪ ಮೂಲ್ಯರ ಜಾಗದಲ್ಲೇ ಅದನ್ನು ಕೊಂದು ಅದರ ಹೊಟ್ಟೆಯೊಳಗಿನ ಕರುಳು ಸೇರಿದಂತೆ…

Read More

ಅಕ್ರಮ ಕಸಾಯಿಖಾನೆ ಮೇಲೆ ದಾಳಿಯಿಂದ 9 ಜಾನುವಾರಿನ ತಲೆಗಳ ವಶ.

ಬೆಳ್ತಂಗಡಿ: ಅಕ್ರಮವಾಗಿ ಜಾನುವಾರುಗಳನ್ನು ಹತ್ಯೆ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದ ಹಿನ್ನಲೆ ಬೆಳ್ತಂಗಡಿ ಇನ್‌ಸ್ಪೆಕ್ಟರ್ ಸುಬ್ಬಾಪುರ್ ಮಠ್ ಅವರಿಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಅಕ್ರಮ ಕಸಾಯಿಖಾನೆ ಮೇಲೆ ದಾಳಿ ನಡೆಸಿ, ಒಂಬತ್ತು ಜಾನುವಾರುಗಳ ತಲೆಯನ್ನು ವಶಪಡಿಸಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಎಂಬಲ್ಲಿ ಮೊಹಮ್ಮದ್ ರಫೀಕ್ ಅಲಿಯಾಸ್ ಅಪ್ಪಿ ಎಂಬಾತನ ಮನೆ ಮೇಲೆ ಈ ದಾಳಿ ನಡೆದಿದೆ. ಕಳವು ಮಾಡಿದ ಜಾನುವಾರುಗಳನ್ನು ಇಲ್ಲಿಗೆ ತಂದು ಅಕ್ರಮವಾಗಿ ಹತ್ಯೆ ಮಾಡಲಾಗುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು….

Read More

ಮಂಗಳೂರಿನ ಪುರಭವನದಲ್ಲಿ ಇಷ್ಕೆ ರಸೂಲ್ ಕಾರ್ಯಕ್ರಮ ಹಾಗೂ ಗ್ರಾಂಡ್ ಮೀಲಾದ್ ಜಾಥಾ ಸೆಪ್ಟೆಂಬರ್ 09 ರಂದು.

ಮಂಗಳೂರು: ಸಮಸ್ತ ಕರ್ನಾಟಕ ಮಶಾವರ, ಎಸ್.ವೈ.ಎಸ್, ಎಸೈ.ಎಸ್.ಎಸ್.ಎಫ್ , ಸಮಸ್ತ ಜಂಇಯ್ಯತುಲ್ ಮುಅಲ್ಲಿಮೀನ್, ಮದರಸ ಮೇನೇಜೆಂಟ್, ಜಂಇಯ್ಯತುಲ್ ಖುತ್ಬಾ , ಜಂಇಯ್ಯತುಲ್ ಮುದ್ರಾಸಿನ್ , ಸಮಸ್ತ ಬಾಲ ವೇದಿ ಸಂಯುಕ್ತ ಆಶ್ರಯದಲ್ಲಿ ಇಷ್ಕೆ ರಸೂಲ್ ಕಾರ್ಯಕ್ರಮ ಹಾಗೂ ಗ್ರಾಂಡ್ ಮೀಲಾದ್ ಜಾಥಾವು ಸೆಪ್ಟೆಂಬರ್ 09 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ ಎಂದು ಇಷ್ಕೆ ರಸೂಲ್ ಮೀಲಾದ್ ಸ್ವಾಗತ ಸಮಿತಿಯ ಸಂಚಾಲಕರಾದ ಯು ಕೆ ಅಬ್ದುಲ್ ಅಝೀಝ್ ದಾರಿಮಿ ತಿಳಿಸಿದರು . ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ…

Read More

ಹನಿಟ್ರ್ಯಾಪ್‌ ಜಾಲವನ್ನು ಬೇಧಿಸಿದ ಕುಂದಾಪುರ ಪೊಲೀಸರು.

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಹನಿಟ್ರ್ಯಾಪ್ ಪ್ರಕರಣವೊಂದು ನಡೆದ ಬಗ್ಗೆ ವರದಿಯಾಗಿದ್ದು, ಹನಿಟ್ರ್ಯಾಪ್‌ ಜಾಲವನ್ನು ಬೇಧಿಸಿದ ಕುಂದಾಪುರ ಪೊಲೀಸರು ಮಹಿಳೆ ಸಹಿತ ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ನಾವುಂದ ಬಡಾಕೆರೆಯ ಸವದ್ ಯಾನೆ ಅಚ್ಚು (28), ಗುಲ್ವಾಡಿ ಗಾಂಧೀ ಕಟ್ಟೆಯ ಸೈಪುಲ್ಲಾ(38), ಹ0ಗಳೂರು ಗ್ರಾಮದ ಮೊಹಮ್ಮದ್ ನಾಸೀರ್ ಶರೀಫ್(36), ಕುಂಭಾಶಿ ಮೂಡುಗೋಪಾಡಿ ಜನತಾ ಕಾಲೋನಿಯ ಅಬ್ದುಲ್ ಸತ್ತಾರ್(23), ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಾಗೋಡಿಯ ಅಬ್ದುಲ್ ಅಝೀಝ್(26), ಕುಂದಾಪುರ ಎಂ.ಕೋಡಿಯ ಆಸ್ಮಾ(43) ಬಂಧಿತ ಆರೋಪಿಗಳು. ಆರೋಪಿಗಳಿಂದ…

Read More

ಕೂಡಲೇ ರಸ್ತೆಯ ಹೊಂಡಗಳನ್ನು ದುರಸ್ತಿಗೊಳಿಸಿ:- ಶಾಸಕ ಕಾಮತ್ ಸೂಚನೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ನಗರದ ಹಲವೆಡೆ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಕಸದ ಸಮಸ್ಯೆ ವಿಪರೀತವಾಗಿರುವುದು, ಬೀದಿ ದೀಪ, ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ರವರು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಹೊಂಡಗಳಿಂದಾಗಿ ವಾಹನಗಳು ಅಪಘಾತಕ್ಕೀಡಾಗಿ ಸಾರ್ವಜನಿಕರು ತೊಂದರೆ ಅನುಭವಿಸಿರುವ ಪ್ರಕರಣಗಳು ನಡೆದಿದೆ. ವಿಪರೀತ ಮಳೆಯಿದ್ದರೂ ತಾತ್ಕಾಲಿಕವಾಗಿಯಾದರೂ ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕು. ನಗರದಲ್ಲಿ ಕಸದ ಸಮಸ್ಯೆ ವಿಪರೀತವಾಗಿದ್ದು, ಗಾಂಧಿನಗರದ ಶಾಲೆಯ ಹತ್ತಿರ, ಮರೋಳಿಯ ಬಸ್…

Read More

ಬದ್ರಿಯಾ ಜುಮಾ ಮಸ್ಜಿದ್ ಬಜಾಲ್ ನಂತೂರುನಲ್ಲಿ-ಈದ್ ಮೀಲಾದುನ್ನೆಬಿ ಸಡಗರ.

ಬದ್ರಿಯಾ ಜುಮಾ ಮಸ್ಜಿದ್ ಬಜಾಲ್ ನಂತೂರು ಮಂಗಳೂರು ಇದರ ಅದೀನದಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ. ಅ) ತಂಗಳ್ ರವರ 1500ನೇ ಈದ್ ಮೀಲಾದುನ್ನೆಬಿ ಸಡಗರ ಸಂಭ್ರಮದಿಂದ ದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಮಾಅತ್ ಅಧ್ಯಕ್ಷರಾದ ಅಬ್ದುಲ್ ರವೂಫ್ ರವರು ಧ್ವಜಾರೋಹಣ ಗೈದು ಪ್ರಸ್ತುತ ರ್ಯಾಲಿಗೆ ಚಾಲನೆ ನೀಡಿದರು.ಕಾರ್ಯಕ್ರಮನ್ನು ಜಮಾಅತ್ ಖತೀಬರಾದ ಅಬ್ದುಲ್ ನಾಸಿರ್ ಸಅದಿಯವರು ದುಆ ಮಾಡಿ ಉದ್ಘಾಟನೆ ಮಾಡಿದರು.ತನ್ನ ಭಾಷಣದಲ್ಲಿ ಈ ಮೀಲಾದ್ ರ್ಯಾಲಿ ಶಾಂತಿ ಸಮಾಧಾನ ಸೌಹಾರ್ದತೆಯನ್ನು ಸಾರುವುದಾಗಿದೆ.ಪರಸ್ಪರ ಸೌಹಾರ್ದತೆಯೊಂದಿಗೆ ಬಾಳೋಣ…

Read More

ಮಂಗಳೂರಿನ ಬಂಟ್ಸ್ ಹಾಸ್ಟೆಲ್ ವೃತ್ತ ಗುಂಡಿಮಯ.

ಮಂಗಳೂರಿನ ಪ್ರತಿಷ್ಠಿತ ವೃತ್ತಗಳಲ್ಲಿ ಒಂದಾದ ಬಂಟ್ಸ್ ಹಾಸ್ಟೆಲ್ ವೃತ್ತದ ಆಸುಪಾಸಿನ ಮಾರ್ಗವು ಗುಂಡಿಗಳಿಂದ ತುಂಬಿದ್ದು ದುರಸ್ತಿ ಮರೀಚಿಕೆಯಾಗಿದೆ. ದಿನ ನಿತ್ಯವೂ ಈ ಮಾರ್ಗವಾಗಿ ಸಂಚಾರ ನಡೆಸುವ ವಾಹನಗಳು ಗು0ಡಿಗೆ ಬಿದ್ದು ಏಳುತ್ತಿವೆ. ಮಳೆ‌ ಬಂದರೆ ವಾಹನಗಳು ದೌಡಾಯಿಸುವಾಗ ಹೊಂಡದ ನೀರು ಪಾದಚಾರಿಗಳಿಗೆ ಕೆಸರು ನೀರಿನ ಅಭಿಷೇಕ ಮಾಡುತ್ತದೆ. ಮಾರ್ಗದ ತಿರುವಿನಲ್ಲಿ ಉಂಟಾದ ಗುಂಡಿಯಂತೂ‌ ಅಪಾಯಕ್ಕೆ ಆಸ್ಪದವನ್ನು ನೀಡುತ್ತಿದೆ. ಚರಂಡಿಗೆ ಹೊದಿಸಲಾದ ಸ್ಲಾಬ್ ನ ಸಿಮೆಂಟ್ ಎದ್ದು‌ ಹೋಗಿದ್ದು ಕಬ್ಬಿಣದ ಕಂಬಿ ಹೊರಗೆ ಬಂದಿದೆ. ಅದರ ದುರಸ್ತಿ ಕಾರ್ಯಗಳು…

Read More

ಮಕ್ಕಳನ್ನು ಸಮಾಜ, ದೇಶದ ಸಂಪತ್ತನ್ನಾಗಿ ರೂಪಿಸಿ: ಖಾದರ್

ಮಂಗಳೂರು: ವಿದ್ಯಾರ್ಥಿಗಳು ದೇಶದ ಪರಂಪರೆ ಉಳಿಸಿಕೊಂಡು ಹೋಗುವಂತೆ ಮಾಡುವಲ್ಲಿ ಶಿಕ್ಷಕರ ಶ್ರಮ ಅಗತ್ಯ. ಮಕ್ಕಳನ್ನು ತಂದೆ, ತಾಯಂದಿರ ಮಾತ್ರವಲ್ಲದೆ ಸಮಾಜ, ದೇಶದ ಸಂಪತ್ತನ್ನಾಗಿ ರೂಪಿಸಬೇಕಿದೆ ಎಂದು ವಿದಾನಸಭಾಧ್ಯಕ್ಷ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಶಾಲಾ ಶಿಕ್ಷಣ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಗಳೂರು ದಕ್ಷಿಣ ವಲಯ ಶಿಕ್ಷಕರ ದಿನಾಚರಣೆ ಸಮಿತಿ ಹಾಗೂ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಜಪ್ಪಿನಮೊಗರು ಪ್ರೆಸ್ಟೀಜ್ ಶಾಲಾ ಸಭಾಂಗಣದಲ್ಲಿ ನಡೆದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ…

Read More

ಮ . ನ . ಪಾ ದಲ್ಲಿ ಕನ್ನಡ ಬಾರದ ಅನ್ಯ ಭಾಷೆಯ ಅಧಿಕಾರಿಯ ನೇಮಕ: ಕನ್ನಡ ಪರ ಸಂಘಟನೆಗಳು ಕಿಡಿ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕನ್ನಡ ಓದಲು ಬರೆಯಲು ಬಾರದ ಅಧಿಕಾರಿ ಕಾನೂನು ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಕನ್ನಡಪರ ಸಂಘಟನೆಗಳು ಕಿಡಿಕಾರಿವೆ. ಕೇರಳ ಮೂಲದ ಮಹಿಳೆಯು ಕೇರಳದ ಮಲಯಾಳಂ ಮಾಧ್ಯಮದಲ್ಲಿ ವಿಧ್ಯಾಭ್ಯಾಸವನ್ನು ಮಾಡಿರುವುದು ಕನ್ನಡ, ತುಳು ಭಾಷೆ ಬಾರದಿರುವುದು ಜನಸಾಮಾನ್ಯರಿಗೆ ವ್ಯವಹರಿಸಲು ಸಮಸ್ಯೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದರ ಹಿಂದೆ ರಾಜಕೀಯ ಒತ್ತಡ ಇದೆ ಎನ್ನುವುದು ಕನ್ನಡ ಸಂಘಗಳ ಆಕ್ರೋಶವಾಗಿದೆ. ಕೆ.ಸಿ.ಎಸ್.ಆರ್ ನಿಯಮಗಳು 1974ರಲ್ಲಿ ಸರಕಾರಿ SSLC/10ನೇ ತರಗತಿಯಲ್ಲಿ ಕನ್ನಡ ಭಾಷೆ…

Read More
error: Content is protected !!