ಮಾರ್ಗದೀಪ ಸಾಂಸ್ಕೃತಿಕ ಸಮಿತಿ ದುಬೈ ವತಿಯಿಂದ ನಡೆದ ಹನ್ನೊಂದನೇ ವರ್ಷದ ಗಣೇಶೋತ್ಸವ.

ದುಬೈ : ಮಾರ್ಗದೀಪ ಸಾಂಸ್ಕೃತಿಕ ಸಮಿತಿ ದುಬೈ ಇದರ ವತಿಯಿಂದ ನಡೆದ 11ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಆಗಸ್ಟ್ 31ರಂದು ಆದಿತ್ಯವಾರ ಇಂಡಿಯನ್ ಅಸೋಸಿಯೇಷನ್ ಹಾಲ್ ಅಜ್ಮಾನ್ ನಲ್ಲಿ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು. ಪುರೋಹಿತರಾದ ಸಂತೂರ್ ಶ್ರೀ ಲಕ್ಷ್ಮಿಕಾಂತ್ ಭಟ್ ಹಾಗೂ ಶ್ರೀ ರಾಜೇಶ್ ಅಡಿಗರವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳನ್ನು ನಡೆಸಿದರು.ಬೆಳಿಗ್ಗೆ ಗಣಹೋಮದೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಮಧ್ಯಾಹ್ನ ಮಹಾಪೂಜೆ ಮಹಾ ಅನ್ನದಾನದಲ್ಲಿ ಸಹಸ್ರ ಭಕ್ತಾದಿಗಳು ಪಾಲ್ಗೊಂಡು ಸಂಜೆ ವಿಸರ್ಜನಾ ಮೆರವಣಿಗೆ ನಡೆಯಿತು. ನಡೆದ ಸಭಾ…

Read More

7ರಂದು ನಗರದಲ್ಲಿ ಫಾತಿಮಾ ರಲಿಯಾ ಅವರ ‘ಕೀಮೋ’ ಪುಸ್ತಕ ಬಿಡುಗಡೆ.

ಭಾನುವಾರ  ಸಂಜೆ‌ ನಾಲ್ಕು ಗಂಟೆಗೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ರಾಬರ್ಟ್‌ ಸಿಕ್ವೇರಾ ಸಭಾಂಗಣದಲ್ಲಿ ಫಾತಿಮಾ ರಲಿಯಾ ಅವರ ಅನುಭವ ಕಥನ ‘ಕೀಮೋ’ ಬಿಡುಗಡೆಯಾಗಲಿದೆ.  ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಪುಸ್ತಕ ಬಿಡುಗಡೆ ಮಾಡಲಿದ್ದು, ಪುಸ್ತಕದ ಕುರಿತು ರಮ್ಯ ಕೆ.ಜಿ. ಮೂರ್ನಾಡು ಮತ್ತು ಶರೀಫ್ ಹಿಮಮಿ ಶುಟ್ಟಿಕೊಪ್ಪ ಮಾತನಾಡಲಿದ್ದಾರೆ‌. ಈ ಪುಸ್ತಕವನ್ನು ‘ಜೀರುಂಡೆ ಪುಸ್ತಕ’ ಪ್ರಕಟಿಸಿದ್ದು ಇದು ಫಾತಿಮಾ ರಲಿಯಾರ ನಾಲ್ಕನೇ ಕೃತಿಯಾಗಿದೆ. ‘ಜೀರುಂಡೆ ಪುಸ್ತಕ’ದ ಎಲ್ಲಾ ಕೃತಿಗಳು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ ಎಂದು ಪ್ರಕಟಣೆ…

Read More

ಧ್ಯಾನಯೋಗದಿಂದ ಜೀವನದ ಸವಾಲುಗಳನ್ನು ದೂರ ಮಾಡಬಹುದು

ಮಂಗಳೂರು: ಜೀವನದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಧ್ಯಾನಯೋಗದ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೇ ಹಿನ್ನೆಲೆಯಲ್ಲಿ “ಉತ್ತಮ ಜೀವನ ನಿರ್ವಹಣೆಗಾಗಿ ಹಿಮಾಲಯದ ಧ್ಯಾನಯೋಗ” ಎಂಬ ವಿಷಯದ ಕುರಿತು ಪರಮ ವಂದನೀಯ ಗುರುಮಾ ಅವರಿಂದ ವಿಶೇಷ ಪ್ರವಚನ ಮಂಗಳೂರಿನಲ್ಲಿ ನಡೆಯಲಿದೆ ಎಂದು ಆಯೋಜಕರಾದ ಚಂದ್ರಶೇಖರ ತಿಳಿಸಿದರು . ನಗರದ ಪತ್ರಿಕಾಭವನದಲ್ಲಿ ಮಾತಾಡಿದ ಅವರು, ಸೆಪ್ಟೆಂಬರ್ 9, 2025 ರಂದು ಸಂಜೆ 5 ಗಂಟೆಗೆ ಮಣ್ಣಗುಡ್ಡೆಯ ಸಂಘನಿಕೇತನ ಸಭಾಂಗಣದಲ್ಲಿ ಈ ಕಾರ್ಯಕ್ರಮ ಆಯೋಜನೆಯಾಗಲಿದ್ದು, ಎಲ್ಲಾ ವಯಸ್ಸಿನ ಜನರಿಗೆ ಮುಕ್ತವಾಗಿದೆ ಎಂದರು….

Read More

ಧರ್ಮಸ್ಥಳ ಪ್ರಕರಣ: ದೂರುದಾರ ಚಿನ್ನಯ್ಯ ಮತ್ತೆ ಎಸ್.ಐ.ಟಿ ಕಸ್ಟಡಿಗೆ

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಬಂಧಿತನಾಗಿರುವ ʻಬುರುಡೆʼ ಚಿನ್ನಯ್ಯನನ್ನ ಮತ್ತೆ 4 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಿ ಕೋರ್ಟ್‌ ಆದೇಶಿಸಿದೆ. ಸೆ.6ರಂದು ಚಿನ್ನಯ್ಯನನ್ನ ಕೋರ್ಟ್‌ಗೆ ಹಾಜರುಪಡಿಸುವಂತೆ ಬೆಳ್ತಂಗಡಿ ನ್ಯಾಯಾಲಯ ಆದೇಶಿಸಿದೆ. 12 ದಿನಗಳ ಎಸ್‌ಐಟಿ ಕಸ್ಟಡಿ ಇಂದು ಅಂತ್ಯಗೊಂಡಿದ್ದ ಹಿನ್ನೆಲೆ ಚಿನ್ನಯ್ಯನನ್ನ (Chinnayya) ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಬೆಳ್ತಂಗಡಿ ತಾಲೂಕು ನ್ಯಾಯಾಲಯದ ಹೆಚ್ಚುವರಿ ವ್ಯಾವಹಾರಿಕ ಮತ್ತು ಪ್ರಥಮ ದರ್ಜೆ ನ್ಯಾಯಾಧೀಶರಾದ ವಿಜಯಾನಂದ.ಟಿ ಅವರ ಎದುರು ಹಾಜರುಪಡಿಸಲಾಗಿತ್ತು. ತನಿಖಾಧಿಕಾರಿ ಎಸ್ಪಿ ಜಿತೇಂದ್ರ ಕುಮಾರ್‌ ದಯಾಮ,…

Read More

ನಾರಾವಿ ಗ್ರಾಮ ಪಂಚಾಯತಿಗೆ ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರ ಭೇಟಿ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮ ಪಂಚಾಯತಿಗೆ ವಿಧಾನ ಪರಿಷತ್ತಿನ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಅವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಪ್ರಗತಿಯ ಬಗ್ಗೆ ಚರ್ಚಿಸಿ ಪರಿಶೀಲಿಸಿದರು. ಕೇಂದ್ರ ಸರ್ಕಾರದ MGNREGA, ಪ್ರಧಾನ ಮಂತ್ರಿ ಆವಾಸ್ ಯೋಜನೆ, 15ನೇ ಹಣಕಾಸು ಅನುದಾನ, ಸ್ವಚ್ಛ ಭಾರತ ಮಿಷನ್ (SBM)…

Read More

ಸೆಪ್ಟೆಂಬರ್ – 5 ರಂದು ಪ್ರವಾದಿ ಮುಹಮ್ಮದ್(ಸ.ಅ) ಪೈಗಂಬರರ ಜನ್ಮದಿನವಾದ ಈದ್ ಮೀಲಾದ್ ಹಬ್ಬ ಆಚರಣೆ

ಮಂಗಳೂರು: ಈ ತಿಂಗಳ ೫ ನೇ ತಾರೀಖಿನಂದು ಪ್ರವಾದಿ ಮುಹಮ್ಮದ್(ಸ.ಅ) ಪೈಗಂಬರರ ಜನ್ಮದಿನವಾದ ಈದ್ ಮೀಲಾದ್ ಹಬ್ಬದ ಆಚರಣೆ ನಡೆಯಲಿದೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷರಾದ ಬಿ ಜಿ ಹನೀಫ್ ಹಾಜಿ ತಿಳಿಸಿದರು. ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ವರ್ಷಂಪ್ರತೀ ನಡೆಸಿಕೊಂಡು ಬರುವಂತೆ. ಈ ವರ್ಷವೂ ಕೂಡ ಉಳ್ಳಾಲ ಜುಮ್ಮಾ ಮಸ್ಟಿದ್ ಮತ್ತು ಹಝ್ರತ್ ಸಯ್ಯದ್ ಮದನಿ ದರ್ಗಾದ ವತಿಯಿಂದ 27 ಮೊಹಲ್ಲಾಗಳ ಮತ್ತು 32 ಮದ್ರಸಗಳ ವಿದ್ಯಾರ್ಥಿಗಳು ಹಾಗೂ ಉಳ್ಳಾಲ ಮೊಹಲ್ಲಾ…

Read More

ಸೆಪ್ಟೆಂಬರ್ 27ರಂದು ಪಿ.ಎ. ಪುಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ ‘ಕನ್‌ವರ್ಜೆನ್ಸ್‌ 2025’ ಕಾರ್ಯಕ್ರಮ

ಮಂಗಳೂರು: ಪಿ.ಎ.ಪ್ರಥಮ ದರ್ಜೆ ಕಾಲೇಜು ಮತ್ತು ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಅಂಡ್ ರಿಸರ್ಚ್, ಪಿ.ಎ. ಕಾಲೇಜು ಆಫ್ ಎಂಜಿನಿಯರಿಂಗ್, ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ)ಇವರ ಸಹಯೋಗದೊಂದಿಗೆ ಸುಸ್ಥಿರ ಭವಿಷ್ಯದ ಕೃತಕ ಬುದ್ಧಿಮತ್ತೆಯ ಅಂತಾರಾಷ್ಟ್ರೀಯ ಸಮ್ಮೇಳನವಾದ ‘ಕನ್‌ವರ್ಜೆನ್ಸ್‌ 2025’ ಕಾರ್ಯಕ್ರಮವು ನಡುಪದವಿನ ಪಿ.ಎ. ಪುಥಮ ದರ್ಜೆ ಕಾಲೇಜಿನಲ್ಲಿ ಸೆಪ್ಟೆಂಬರ್ 27ರಂದು ನಡೆಯಲಿದೆ ಎಂದು ಪಿ.ಎ.ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ ಸರ್ಫ್ರಾಜ್ ಜೆ ಹಾಸಿಂ ತಿಳಿಸಿದರು . ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ,…

Read More

ಏರ್ ಪೋರ್ಟ್ ‌ನಲ್ಲಿ ಚಿನ್ನ ಕಳ್ಳತನ – 4 ಮಂದಿ ಸಿಬ್ಬಂದಿ ಸೇರಿ ಐವರನ್ನು ಬಂಧಿಸಿದ ಬಜ್ಪೆ ಪೊಲೀಸರು

ಮಂಗಳೂರು: ಮಂಗಳೂರು ಏರ್ ಪೋರ್ಟ್ ‌ನಲ್ಲಿ ಪ್ರಯಾಣಿಕರೊಬ್ಬರ ಟ್ರೋಲಿ ಬ್ಯಾಗ್ ತೆರೆದು 4.5 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಕಳ್ಳತನ ಪ್ರಕರಣದಲ್ಲಿ 4 ಮಂದಿ ಸಿಬ್ಬಂದಿ ಸೇರಿ ಐವರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಲೋಡಿಂಗ್ – ಅನ್ ಲೋಡಿಂಗ್ ಮಾಡುವ ಸಾಟ್ಸ್ ನೌಕರರಾದ ನಿತಿನ್, ಮೂಡುಪೆರಾರದ ನಿವಾಸಿಗಳಾದ ಸದಾನಂದ, ರಾಜೇಶ್, ಬಜ್ಪೆ ನಿವಾಸಿ ಪ್ರವೀಣ್ ಫೆರ್ನಾಂಡಿಸ್ ಮತ್ತು ಚಿನ್ನಾಭರಣ ಪಡೆದುಕೊಂಡು ಚಿನ್ನದ ಗಟ್ಟಿಯಾಗಿಸಿದ್ದ ಬಜ್ಪೆ ಮೂಡುಪೆರಾರ ನಿವಾಸಿ ರವಿರಾಜ್…

Read More

ಮಂಗಳೂರು ತಾಲೂಕು ಪಂಚಾಯತ್ ತ್ರೈಮಾಸಿಕ ಕೆಡಿಸಿ ಸಭೆ

ಮಂಗಳೂರು : ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ ಮತ್ತು ಮಲೇರಿಯಾದ ನಿಯಂತ್ರಣಕ್ಕಾಗಿ ಸೊಳ್ಳೆ ಉತ್ಪತ್ತಿಯ ವಾಸದ ಮನೆಗಳಿಗೂ ರಾಜ್ಯ ಆರೋಗ್ಯ ಇಲಾಖೆಯು ದಂಡ ಪ್ರಯೋಗಕ್ಕೆ ಸುತ್ತೋಲೆ ಹೊರಡಿಸಿದೆ. ಜಿಲ್ಲಾಧಿಕಾರಿ ನೇತೃತ್ವದ ಸಭೆಯ ಬಳಿಕ ಈ ಬಗ್ಗೆ ನಿರ್ಧಾರವಾಗಲಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಸುಜಯ್ ಭಂಡಾರಿ ತಿಳಿಸಿದ್ದಾರೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಮಂಗಳೂರು ತಾಪಂನ ಸಭಾಂಗಣದಲ್ಲಿ ಪ್ರಥಮ ತ್ರೈಮಾಸಿಕ ಸಭೆಯಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನ ಡೆಂಗ್ಯೂ ಹಾಗೂ…

Read More

ಆಟೋ ಚಾಲಕನ ಸುಳ್ಳು ಆರೋಪ . ಕಟ್ಟು ಕಥೆಯ ಹಿಂದಿನ ರಹಸ್ಯ ಬಿಚ್ಚಿಟ್ಟ ಪೊಲೀಸರು.

ಆಟೋ ಚಾಲಕನ ಮೇಲೆ ರವಿವಾರ ರಾತ್ರಿ ಮಂಗಳೂರಿನ ಫಳ್ನೀರ್ ನಲ್ಲಿ ತಂಡವೊಂದು ಹಲ್ಲೆ ನಡೆಸಿದೆ ಎಂಬುದು ಸುಳ್ಳು. ಇದು ಆಟೊ ಚಾಲಕನೇ ಸೃಷ್ಟಿಸಿದ ಕಟ್ಟು ಕಥೆ ಎಂಬ ವಿಚಾರ ಪೊಲೀಸರು ನಡೆಸಿದ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಪ್ರಕಟಣೆಯಲ್ಲಿಂದು ತಿಳಿಸಿದ್ದಾರೆ. ರಿಕ್ಷಾ ಚಾಲಕ ಬಶೀರ್ ಎಂಬುವವರು ಪೊಲೀಸರಿಗೆ ಮಾಹಿತಿ ನೀಡುತ್ತೇನೆ ಎಂಬ ಆರೋಪದಲ್ಲಿ ಅಪರಿಚಿತ ತಂಡವೊಂದು ತನ್ನ ಹಲ್ಲೆ ನಡೆಸಿರುವುದಾಗಿ ಪೊಲೀಸ್ ದೂರು ನೀಡಿದ್ದರು.ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದಾಗ…

Read More
error: Content is protected !!