ಯೂಟ್ಯೂಬರ್ ಸಮೀರ್ ಎಂ.ಡಿ ದಾಖಲೆಗಳ ಸಮೇತ ಪೊಲೀಸರ ಮುಂದೆ ಹಾಜರು.

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಎಂ.ಡಿ ಸಮೀರ್ ಹಲವು ದಾಖಲೆಗಳ ಸಮೇತ ಪೊಲೀಸ್ ವಿಚಾರಣೆಗೆ ಹಾಜರಾಗಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಗೆ ಬ್ಯಾಗ್ ಹಿಡಿದುಕೊಂಡು ವಕೀಲರ ಜೊತೆ ಸಮೀರ್ ಹಾಜರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಇಂದು ಸಮೀರ್ ವಿಚಾರಣೆ ಎದುರಿಸಲಿದ್ದು, ಹಲವು ದಾಖಲೆಗಳನ್ನು ನೀಡಲಿದ್ದಾರೆ. ಎಐ ವಿಡಿಯೋ ಮೂಲಕ ಗಲಭೆಗೆ ಪ್ರಚೋದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆಗೆ ಹಾಜರಾಗುವಂತೆ ಯೂಟ್ಯೂಬರ್ ಸಮೀರ್ ಗೆ ಬೆಳ್ತಂಗಡಿ ಪೊಲೀಸರು ಸೂಚನೆ ನೀಡಿದ್ದರು. ಅಲ್ಲದೇ ಪ್ರಕರಣಕ್ಕೆ…

Read More

ಧರ್ಮಸ್ಥಳ ಪ್ರಕರಣದಲ್ಲಿ : ‘ಎಸ್‌ಐಟಿ ತನಿಖೆ ನಡೆಸುವಾಗಲೇ ಎನ್‌ಐಎ ತನಿಖೆ ಅಸಾಧ್ಯ ‘- ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಪೂರ್ಣ ಮಾಡಲು ಸಮಯ ನಿಗದಿ ಆಗಿಲ್ಲ . ಎಸ್‌ಐಟಿ ತನಿಖೆ ಪ್ರಕ್ರಿಯೆ ನಡೆಯುವಾಗಲೇ ಎನ್‌ಐಎ ತನಿಖೆ ಅಸಾಧ್ಯ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, “ತನಿಖೆ ತ್ವರಿತವಾಗಿ ಆಗಬೇಕು ಎಂದು ಹೇಳಿದ್ರೆ ಎಸ್‌ಐಟಿ ಅವರಿಗೆ ಅವರದ್ದೇ ಆದ ತೀರ್ಮಾನ ಇರುತ್ತದೆ. ಎಸ್‌ಐಟಿ ಅವರು ತನಿಖೆ ಮಾಡುತ್ತಿದ್ದಾರೆ. ತನಿಖೆ ಮುಗಿಯೋವರೆಗೂ ಅವರು ಯಾವ ವಿಚಾರಗಳನ್ನು ಹೇಳುವ ಹಾಗೇ ಇಲ್ಲ. ತನಿಖೆ ತ್ವರಿತವಾಗಿ ಆಗಲಿ ಅಂತ ಹೇಳಬಹುದು….

Read More

ದಸರಾ ಹಬ್ಬದ ಪ್ರಯುಕ್ತ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು -ಶಾಸಕ ವೇದವ್ಯಾಸ ಕಾಮತ್

ಮುಂಬರುವ ಪ್ರಸಿದ್ದ ಮಂಗಳೂರು ದಸರಾ ಹಬ್ಬವು ಸುವ್ಯವಸ್ಥಿತವಾಗಿ ನಡೆಯುವಂತಾಗಲು ಸಕಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಶಾಸಕ ವೇದವ್ಯಾಸ ಕಾಮತ್ ರವರು ಸೂಚನೆ ನೀಡಿದರು. ದಸರ ಮೆರವಣಿಗೆ ಸಾಗುವ ರಸ್ತೆಗಳ ಕಾಮಗಾರಿಗಳನ್ನು ವಿಶೇಷ ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು. ಕುದ್ರೋಳಿ ದೇವಸ್ಥಾನದಿಂದ ಲೇಡಿಹಿಲ್, ಲಾಲ್‌ ಭಾಗ್, ಪಿ.ವಿ.ಎಸ್ ಸರ್ಕಲ್, ವೆನ್‌ಲಾಕ್ ಆಸ್ಪತ್ರೆ, ಮೋಹಿನಿ ವಿಲಾಸ್, ನ್ಯೂಚಿತ್ರ ಟಾಕೀಸ್, ಅಳಕೆ, ಮೊದಲಾದ ರಸ್ತೆಗಳ ದಾರಿ ದೀಪ ಸರಿಪಡಿಸುವುದು, ರಸ್ತೆ ವಿಭಜಕಗಳನ್ನು ಶುಚಿಗೊಳಿಸುವುದು, ರಸ್ತೆಗಳ ಹೊಂಡ ಮುಚ್ಚುವುದು, ಕಸ,…

Read More

ಸುಜಾತಾ ಭಟ್‌ಗೆ ಬಿಗ್ ರಿಲೀಫ್ ….. !?

ಮಂಗಳೂರು: ಪ್ರಸ್ತುತ ವಿವಾದದ ಸುಳಿಯಲ್ಲಿ ಸಿಲುಕಿದ್ದ ಸಾಮಾಜಿಕ ಕಾರ್ಯಕರ್ತೆ ಸುಜಾತಾ ಭಟ್ ಗೆ ತಾತ್ಕಾಲಿಕವಾಗಿ ಕಾನೂನು ಕ್ರಮದಿಂದ ಬಿಗ್ ರಿಲೀಫ್ ಸಿಕ್ಕಿದೆ . ಅವರ ವಿರುದ್ಧದ ಕಠಿಣ ಕ್ರಮಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಆದರೆ, ವಿಚಾರಣೆಗೆ ಹಾಜರಾಗುವುದು ಅನಿವಾರ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿಯ ಪ್ರಕಾರ, ಸುಜಾತಾ ಭಟ್ ವಿರುದ್ಧ ದಾಖಲಾಗಿದ್ದ ಕೆಲವೊಂದು ದೂರಿನ ಪರಿಶೀಲನೆ ನಡೆದಿದೆ. ಪ್ರಥಮ ದೃಷ್ಟಿಯಿಂದ ಗಂಭೀರ ಕಾನೂನು ಉಲ್ಲಂಘನೆಯ ಲಕ್ಷಣಗಳು ಪತ್ತೆಯಾಗದ ಹಿನ್ನೆಲೆಯಲ್ಲಿ, ತಕ್ಷಣದ ಬಂಧನ ಅಥವಾ ಬಂಧನಾತ್ಮಕ ಕ್ರಮ ಕೈಗೊಳ್ಳುವುದನ್ನು ತಪ್ಪಿಸಲಾಗಿದೆ….

Read More

ತಲಪಾಡಿ ಅಪಘಾತಕ್ಕೆ ಬ್ರೇಕ್ ವೈಫಲ್ಯ ಕಾರಣವಲ್ಲ, ಚಾಲಕನ ಅತೀಯಾದ ವೇಗವೇ ಕಾರಣ ; ಕರ್ನಾಟಕ ಸಾರಿಗೆ ಸ್ಪಷಣೆ

ತಲಪಾಡಿ ಟೋಲ್‌ಗೇಟ್ ಸಮೀಪ ಸಂಭವಿಸಿದ ಬಸ್ ಅಪಘಾತಕ್ಕೆ ಸಂಬಂಧಿಸಿದಂತೆ ಕೆಲವೊಂದು ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ‘ಬ್ರೇಕ್ ವೈಫಲ್ಯ’ ಎಂಬ ವದಂತಿಗಳು ಹರಡುತ್ತಿದ್ದರೂ, ಕೆಎಸ್‌ಆರ್‌ಟಿಸಿ ಈ ಅಪಘಾತಕ್ಕೆ ಬಸ್‌ನ ತಾಂತ್ರಿಕ ದೋಷ ಅಥವಾ ಬ್ರೇಕ್ ವೈಫಲ್ಯ ಕಾರಣವಲ್ಲ ಎಂದು ಸ್ಪಷ್ಟಪಡಿಸಿದೆ. ಇಲಾಖೆಯ ತಾಂತ್ರಿಕ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ಬಸ್ ಸಂಪೂರ್ಣವಾಗಿ ಫಿಟ್ ಆಗಿತ್ತು ಹಾಗೂ ಇತ್ತೀಚೆಗೆ ಎಫ್‌ಸಿ ನವೀಕರಣವೂ ಮಾಡಿಕೊಂಡಿತ್ತು ಎಂಬುದು ದೃಢವಾಗಿದೆ. ಬಸ್ ಚಾಲಕನ ಅಜಾಗರೂಕ, ನಿರ್ಲಕ್ಷ್ಯಪೂರ್ಣ ಹಾಗೂ ಅತಿವೇಗದ ಚಾಲನೆಯೇ ಈ ದುರ್ಘಟನೆಗೆ…

Read More

ಎಸ್‌ಸಿಡಿಸಿಸಿ ಬ್ಯಾಂಕ್ ಗೆ ಸತತ ನಾಲ್ಕನೇ ಬಾರಿ ಅಟಲ್ ಪಿಂಚಣಿ ಯೋಜನೆಯ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ.

ಮಂಗಳೂರು : ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಅಟಲ್ ಪಿಂಚಣಿ ಯೋಜನೆಯನ್ನು ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ( ಎಸ್ ಸಿಡಿಸಿಸಿ ಬ್ಯಾಂಕ್) 2024-25ನೇ ಸಾಲಿನಲ್ಲೂ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾಗಿದ್ದು, ಈ ಪ್ರಶಸ್ತಿಯನ್ನು ಬ್ಯಾಂಕ್ ಸತತ ನಾಲ್ಕನೇ ಬಾರಿಗೆ ಮುಡಿಗೇರಿಸಿಕೊಂಡಿದೆ.ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ 2024-25ನೇ ಸಾಲಿಗೆ ಎಸ್ ಸಿಡಿಸಿಸಿ ಬ್ಯಾಂಕ್ ಚಂದಾದಾರರ ದಾಖಲಾತಿಯಲ್ಲಿ 3179 ಚಂದಾದಾರರನ್ನು ನೋಂದಾಯಿಸುವ ಮೂಲಕ ಗುರಿ ಮೀರಿದ ಸಾಧನೆ ಮಾಡಿದೆ. ಬ್ಯಾಂಕಿನ…

Read More

ಮಂಗಳೂರು ವಿಶ್ವವಿದ್ಯಾನಿಲಯ ಶುಲ್ಕ ಏರಿಕೆ – ವಿದ್ಯಾರ್ಥಿ ಸಮೂಹದಲ್ಲಿ ಆತಂಕ.

ಮಂಗಳೂರು ವಿವಿ 2025–26ನೇ ಶೈಕ್ಷಣಿಕ ಸಾಲಿನ ಪದವಿಪೂರ್ವ (ಯುಜಿ) ಮತ್ತು ಸ್ನಾತಕೋತ್ತರ (ಪಿಜಿ) ಕೋರ್ಸ್‌ಗಳ ಶುಲ್ಕವನ್ನು ಶೇಕಡಾ 5 ರಿಂದ 10 ರಷ್ಟು ಹೆಚ್ಚಿಸುವುದಾಗಿ ನಿರ್ಧರಿಸಿದೆ .ಈ ಹಿಂದಿನ ಶೈಕ್ಷಣಿಕ ವರ್ಷದಲ್ಲೂ ವಿವಿ ಎಲ್ಲಾ ವಿಷಯಗಳ ಪ್ರವೇಶ ಶುಲ್ಕವನ್ನು ಹೆಚ್ಚಿಸಿ ವಿದ್ಯಾರ್ಥಿಗಳ ಕೆಂಗಣಿಗೆ ಕಾರಣವಾಗಿತ್ತು . ವಿದ್ಯಾರ್ಥಿ ವಲಯಗಳಿಂದ ತೀವ್ರ ಆಕ್ಷೇಪಣೆಗಳು ಮತ್ತು ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಆದರೂ ವಿವಿ ಪಟ್ಟು ಹಿಡಿದು ಶುಲ್ಕವನ್ನು ಏರಿಸಿತ್ತು . ಇದೀಗ ಮತ್ತೊಮ್ಮೆ ಶುಲ್ಕವನ್ನು ಏರಿಸಿದೆ ಇದಕ್ಕೆ ವಿಶ್ವವಿದ್ಯಾಲಯ ಸಿಂಡಿಕೇಟ್ ಅನುಮೋದನೆ…

Read More

ಸಂಸ್ಕಾರಯುತ ಸಮಾಜ ನಿರ್ಮಾಣ: ನಳಿನ್ ಕುಮಾರ್ ಕಟೀಲ್.ಬಂಟ್ಸ್ ಹಾಸ್ಟೇಲ್ ನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ.

ಮಂಗಳೂರು: ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಗಣೇಶೋತ್ಸವ ಪೂರಕವಾಗಿದ್ದು, ಆಡಂಬರವಿಲ್ಲದೆ ಇಲ್ಲಿ ಕೇವಲ ದೇವರ ಸಂಕೀರ್ತನೆಯ ಭಜನೆಯ ಮೂಲಕ ಗಣಪತಿಯ ಶೋಭಾಯಾತ್ರೆ ಸಾಗುವುದು ಎಲ್ಲರಿಗೂ ಮಾದರಿಯಾಗಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ನಡೆಯುತ್ತಿರುವ 19ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಾಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.ಶಾಸಕ ವೇದವ್ಯಾಸ ಕಾಮತ್…

Read More

ತಲಪಾಡಿ : ಸಂಚಾರಕ್ಕೆ ಯೋಗ್ಯವಲ್ಲದ KSRTC BUS .ಆರು ಮಂದಿಯ ಸಾವಿಗೆ ಕಾರಣ.

ಗುರುವಾರ ಚಾಲಕನ ಅಜಾಗರೂಕತೆ ಹಾಗೂ ಬಸ್‌ನ ಸವೆದ ಚಕ್ರದಿಂದ ತಲಪಾಡಿಯಲ್ಲಿ ಉಂಟಾದ ಭೀಕರ ಅಪಘಾತದಲ್ಲಿ ಆರು ಮಂದಿ ದುರ್ಮರಣಕ್ಕೀಡಾದ ಘಟನೆ ರಾಜ್ಯಾದ್ಯಂತ ಶೋಕ ಮತ್ತು ಆಕ್ರೋಶಕ್ಕೆ ಕಾರಣವಾಯಿತು. ಈ ಘಟನೆಗೆ ಪ್ರತಿಕ್ರಿಯೆ ನೀಡಿದ ಊರವರು ಇಂದು ಬೆಳಿಗ್ಗೆ ಗಡಿ ಪ್ರದೇಶದಲ್ಲಿರುವ ಮುಖ್ಯ ರಸ್ತೆಯಲ್ಲಿ ಸಾರಿಗೆ ಬಸ್‌ಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರು ಮುಖ್ಯವಾಗಿ ಸವೆದ ಚಕ್ರಗಳುಳ್ಳ ಹಾಗೂ ಸಾರಿ ಹೋಗಿರುವ ಬಸ್‌ಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಲುಪಿದ ಪೊಲೀಸರು ಹಾಗೂ ಮೋಟಾರು…

Read More

ತುಳುಭಾಷೆಯ 150ನೇ ಚಿತ್ರ “ನೆತ್ತೆರೆಕೆರೆ” ಬೆಳ್ಳಿ ತೆರೆಗೆ

ಮಂಗಳೂರು: “ವಿಭಿನ್ನ ಪರಿಕಲ್ಪನೆಯ * ತುಳುವಲ್ಲಿ ಬರುತ್ತಿದೆ. ನಿರ್ದೇಶಕ ಸ್ವರಾಜ್ ಶೆಟ್ಟಿಯ ಹಲವು ದಿನಗಳ ಕನಸು ‘ನೆತ್ತರೆಕೆರೆ’ ಮೂಲಕ ತುಳುಭಾಷೆಯ 150ನೇ ಚಿತ್ರ ಯಶಸ್ವಿಯಾಗಲಿ“ ಎಂದು ಹಿರಿಯ ರಂಗಭೂಮಿ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಹೇಳಿದರು.ಅವರು ಮಂಗಳೂರಿನ ಬಿಗ್ ಸಿನಿಮಾಸ್ ‌ನಲ್ಲಿ ಅಸ್ತ್ರ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ಲಂಚುಲಾಲ್ ಕೆ.ಎಸ್. ನಿರ್ಮಾಣದ ಸ್ವರಾಜ್ ಶೆಟ್ಟಿ ನಿರ್ದೇಶನದ “ನೆತ್ತರಕೆರೆ”ತುಳು ಚಿತ್ರವನ್ನು ದೀಪ ಬೆಳಗಿಸುವ ಮೂಲಕ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಮಾತನಾಡಿ, “ಇದುವರೆಗೆ ತುಳುವಲ್ಲಿ…

Read More
error: Content is protected !!