ಮಂಗಳೂರು ಮ.ನ.ಪಾ ವ್ಯಾಪ್ತಿಯ ಕೊಟ್ಟಾರ ಅಡ್ಡರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 24ನೇ ದೇರೆಬೈಲ್ ದಕ್ಷಿಣ ವಾರ್ಡಿನ ಕೊಟ್ಟಾರ ಕ್ರಾಸ್ 1ನೇ ಅಡ್ಡರಸ್ತೆಯ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆಯು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ಶಾಸಕರು, ಇಲ್ಲಿನ ಸ್ಥಳೀಯರ ಹಲವು ಸಮಯಗಳ ಬೇಡಿಕೆಯನ್ನು ಪರಿಗಣಿಸಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 2022-23 ನೇ ಸಾಲಿನ ಲೋಕೋಪಯೋಗಿ ಇಲಾಖೆಯಿಂದ ವಿಶೇಷ ಅನುದಾನವನ್ನು ಮಂಜೂರು ಮಾಡಲಾಗಿತ್ತು. ಇದೀಗ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು ಶೀಘ್ರದಲ್ಲಿ ಕಾಮಗಾರಿ ಮುಗಿದು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿದೆ ಎಂದರು….

Read More

ಚುನಾವಣಾ ಆಯೋಗದಲ್ಲಿ ಬಿಜೆಪಿ ಪುಡಾರಿಗಳು ಸೇರಿಕೊಂಡಿದ್ದಾರೆಯೇ…? -ದಿನೇಶ್ ಮೂಳೂರು

2014 ರಿಂದ ಈಚೆಗೆ ದೇಶದಲ್ಲಿ ಚುನಾವಣಾ ಆಯೋಗದ ಸ್ವಾಭಿಮಾನದ ಅಸ್ತಿತ್ವವನ್ನು ಕಳೆದುಕೊಂಡಿದೆ ಎಂಬುದನ್ನು ಪ್ರತಿಯೊಂದು ವಿಧಾನಸಭಾ ಚುನಾವಣೆಗಳಲ್ಲಿ, ಲೋಕಸಭಾ ಚುನಾವಣೆಗಳಲ್ಲಿ ಕಾಣಬಹುದಾಗಿದೆ, ಇದಕ್ಕೆ ಕಾರಣ ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ಚುನಾವಣಾ ಆಯೋಗ ತಮ್ಮ ಸ್ವಾಭಿಮಾನದ ಅಸ್ತಿತ್ವವನ್ನು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಮಾರಿಕೊಂಡಿದೆ ಎಂಬುದನ್ನು ಚುನಾವಣೆಯ ಫಲಿತಾಂಶಗಳನ್ನು ನೋಡಿದಾಗ ಗೊತ್ತಾಗುತ್ತದೆ, ಕಳೆದ 10 ವರ್ಷಗಳ ಹಿಂದೆ ಇಂದಿನ ವಿರೋಧ ಪಕ್ಷದ ನಾಯಕರಾದ ಶ್ರೀಯುತ ರಾಹುಲ್ ಗಾಂಧಿಯವರು ಅನೇಕ ಸಾರ್ವಜನಿಕ ಸಮಾವೇಶಗಳಲ್ಲಿ ಹಾಗೂ ಸಂಸತ್ತಿನ ಸದನದಲ್ಲಿ…

Read More

ದೀನ ದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನಕ್ಕೆ ಚಾಲನೆ

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ದ. ಕ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಬಂಟ್ವಾಳ ಕೃಷಿ ಇಲಾಖೆ ಬಂಟ್ವಾಳ ಗ್ರಾಮ ಪಂಚಾಯತ್ ಗೋಳ್ತಾಮಜಲು ಅಶ್ರಿವಾದ ಸಂಜೀವಿನಿ ಒಕ್ಕೂಟ ಗೊಳ್ತಾಮಾಜಲ್ ಇದರ ಸಹಯೋಗದಲ್ಲಿ ಹಡಿಲು ಬಿದ್ದ ಗದ್ದೆಯ ನೆಜಿ ನಾಟಿ ಕಾರ್ಯಕ್ರಮ ಗೊಳ್ತಾಮಜಲು ಗ್ರಾಮದ ಬಲ್ಕಟ್ಟ ಕೊಗ್ಗು ಪೂಜಾರಿಯವರ ಮನೆಯಲ್ಲಿ ನಡೆಯಿತು ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಾಹನ ಅಧಿಕಾರಿ ಸಚಿನ್ ಕುಮಾರ್ ಹಾಗೂ ಜಿಲ್ಲಾ ಕೃಷಿ ಸಹಾಯಕ ನಿರ್ದೇಶಕರಾದ ಕುಮುದ ತೆ0ಗಿನ ಹೂ ಅರಳಿಸುವ ಮೂಲಕ…

Read More

ಉಡುಪಿಯ ಕೃಷ್ಣ ಮಠದ ನೂತನ ಯಾಳಿ ಲೋಕಾರ್ಪಣೆ

ಉಡುಪಿ: ಸುಮಾರು ಎಂಟು ಶತಮಾನಗಳ ಹಿಂದೆ ಆಚಾರ್ಯ ಮಧ್ವರು ಶ್ರೀಕೃಷ್ಣನಿಗಾಗಿ ಉಡುಪಿಯಲ್ಲಿ ನಿರ್ಮಿಸಿದರೆನ್ನಲಾದ ಕೃಷ್ಣಮಠದ ಪ್ರಾಚೀನ ಸೌಂದರ್ಯವನ್ನು ಆಧುನಿಕ ಬೆಳಕಿಂಡಿಯಲ್ಲಿ ಪ್ರದರ್ಶಿಸಲು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮುಂದಾಗಿದ್ದಾರೆ. ಕರಾವಳಿಯ ಮೂಲ ವಾಸ್ತುಶೈಲಿ ಮಾದರಿಯ ಕಾಷ್ಠ ಯಾಳಿ (ಸುತ್ತು ಪೌಳಿ)ಯನ್ನು ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಿಸಲಾಗಿದೆ.ಕನಕ ಗೋಪುರಕ್ಕೆ ಹೊಂದಿಕೊಂಡಿರುವ ಚಂದ್ರಶಾಲೆ ಸಹಿತ ಮಧ್ವ ಸರೋವರದವರೆಗೆ ಶ್ರೀಕೃಷ್ಣ ಆಲಯದ ಮೇಲ್ಛಾವಣಿಗೆ ಪ್ರಾಚೀನ ವಾಸ್ತುಶೈಲಿಯ ರೂಪ ನೀಡಲಾಗಿದೆ. ಆ ಮೂಲಕ ಕೃಷ್ಣಮಠದ ದಿವ್ಯ…

Read More

ಪುತ್ತೂರು ತಾಲೂಕಿನ ಕೆದಂಬಾಡಿ MRF ಘಟಕಕ್ಕೆ ಮಾನ್ಯ ವಿಧಾನ ಪರಿಷತ್ ಸದಸ್ಯ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರ ಪರಿಶೀಲನಾ ಮತ್ತು ಅಧ್ಯಯನ ತಂಡ ಭೇಟಿ

ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕುಗಳ ವ್ಯಾಪ್ತಿಯ 68 ಗ್ರಾಮ ಪಂಚಾಯತಿಗಳಿಂದ ಒಣ ಕಸವನ್ನು ಸಂಗ್ರಹಿಸುತ್ತಿರುವ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರ (MRF – Material Recovery Facility) ಪುತ್ತೂರು ತಾಲೂಕಿನ ಕೆದಂಬಾಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಗ್ರಾಮ ಪಂಚಾಯತಿಗಳಿಂದ ನಿರಂತರವಾಗಿ ಒಣ ಕಸ ಸಂಗ್ರಹಣೆ ಆಗದಿರುವುದರಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಶೀಲಿಸುವ ಹಾಗೂ ಘಟಕದ ಕಾರ್ಯವೈಖರಿಯನ್ನು ಅಧ್ಯಯನ ಮಾಡುವ ಉದ್ದೇಶದಿಂದ, ಮಾನ್ಯ ವಿಧಾನ ಪರಿಷತ್ ಸದಸ್ಯ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು MRF ಘಟಕಕ್ಕೆ ಭೇಟಿ…

Read More

ಬ್ರಹ್ಮಾವರ: ಪಿಗ್ಮಿ ಸಂಗ್ರಹಕನ ಹಣ ಕಳವು ಪ್ರಕರಣ: ಅಂತರ್ ರಾಜ್ಯ ಕಳ್ಳನ ಅಂಧರ್

ಉಡುಪಿ: ಬೈಕಿನ ಸೈಡ್ ಬಾಕ್ಸ್ ನಿಂದ ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಅಂತರ್ ರಾಜ್ಯ ಕಳ್ಳನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಂತೋಷ್‌ ಹನುಮಂತ ಕಟ್ಟಿಮನಿ (39) ಬಂಧಿತ ಆರೋಪಿ. ಈತನಿಂದ ಕಳವು ಮಾಡಿದ 32000ರೂ. ನಗದು ಹಾಗೂ ಮೊಬೈಲ್‌ನ್ನು ವಶಪಡಿಸಕೊಳ್ಳಲಾಗಿದೆ. ಸೊಸೈಟಿಯೊಂದರ ಪಿಗ್ಮಿ ಸಂಗ್ರಹಕರು ಆ.4ರಂದು ಸಂಜೆ ಬ್ರಹ್ಮಾವರ ಶಿವಳ್ಳಿ ಹೋಟೆಲ್‌ ಎದುರುಗಡೆ ಕರ್ನಾಟಕ ಬ್ಯಾಂಕ್‌ ಎಟಿಎಮ್‌ ಬಳಿ ಪಿಗ್ಮಿ ಕಲೆಕ್ಷನ್‌ ಮಾಡಿದ ನಗದನ್ನು ಬೈಕ್ ನ ಸೈಡ್‌ ಬಾಕ್ಸ್‌ನಲ್ಲಿ…

Read More

ಸಾರಿಗೆ ನೌಕರರ ಬೇಡಿಕೆಗೆ ಸ್ಪಂದಿಸಲು ಸರ್ಕಾರಕ್ಕೆ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆಗ್ರಹ

ರಾಜ್ಯ ಸಾರಿಗೆ ಇಲಾಖೆಯ ನೌಕರರು ಕಾಂಗ್ರೆಸ್ ಸರ್ಕಾರಕ್ಕೆ ತಮ್ಮ 38 ತಿಂಗಳ ಹಿಂಬಾಕಿ ಮತ್ತು ವೇತನ ಪರಿಷ್ಕರಣೆಗಾಗಿ ನ್ಯಾಯಯುತವಾದ ಬೇಡಿಕೆಯನ್ನು ಮುಂದಿಟ್ಟರೂ ಸರ್ಕಾರಕ್ಕೆ ಈಡೇರಿಸುವ ಕಾಳಜಿಯಾಗಲಿ, ಇಚ್ಛಾಶಕ್ತಿ ಯಾಗಲಿ ಇಲ್ಲ, ರಾಜ್ಯದಲ್ಲಿ ಸರ್ಕಾರ ನಿರ್ಜೀವವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷರಾದ ಸತೀಶ್ ಕುಂಪಲ ಸರ್ಕಾರವನ್ನು ಟೀಕಿಸಿದರು. ಶಕ್ತಿ ಗ್ಯಾರಂಟಿ ಯೋಜನೆಯನ್ನು ಕೊಟ್ಟಿದ್ದೇವೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾರೆ ಆದರೆ ಸಾರಿಗೆ ನೌಕರರ ಸಮಸ್ಯೆ ಗಳ ಬಗ್ಗೆ ತಲೆಕೆಡಿಸಿ ಕೊಳ್ಳುತ್ತಿಲ್ಲ ಇದೊಂದು ಹೃದಯ ಶೂನ್ಯ…

Read More

ವಿದ್ಯುತ್ ಸರಬರಾಜು ನಿಗಮಗಳ ನೌಕರರಿಗೆ ಪಿಂಚಣಿ ಹಾಗೂ ಗ್ರಾಚ್ಯುಟಿ ನೀಡಲು, ಗ್ರಾಹಕರಿಂದಲೇ ಹಣ ವಸೂಲಿ. ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ಬೃಹತ್ ಪ್ರತಿಭಟನೆ

ವಿದ್ಯುತ್ ಸರಬರಾಜು ನಿಗಮಗಳ ನೌಕರರಿಗೆ ಪಿಂಚಣಿ ಹಾಗೂ ಗ್ರಾಚ್ಯುಟಿ ನೀಡಲು, ಗ್ರಾಹಕರಿಂದಲೇ ಹಣ ವಸೂಲಿ ಮಾಡುವ ಮೂಲಕ ಹಗಲು ದರೋಡೆಗಿಳಿದಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ಮರೋಳಿ-ಜೋಡುಕಟ್ಟೆ ಬಳಿ ಇರುವ ಮೆಸ್ಕಾಂ ಕಚೇರಿ (ಕುಲಶೇಖರ ಉಪವಿಭಾಗ) ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ರವರು, ನೌಕರರ ಪಿಂಚಣಿ ಹಾಗೂ ಗ್ರಾಚುಟಿಗೆ ನಮ್ಮ ವಿರೋಧವಿಲ್ಲ, ಖಂಡಿತವಾಗಿಯೂ ಅವರಿಗೆ ನೀಡಲೇಬೇಕು. ಅದು ರಾಜ್ಯ ಸರ್ಕಾರದ…

Read More

ವಾಹನಕ್ಕೆ ಸೈಡ್ ಕೊಡುವ ವಿಚಾರಕ್ಕೆ ಆಟೋ ಚಾಲಕ ಮತ್ತು ಕಾರು ಪ್ರಯಾಣಿಕರ ಮಧ್ಯೆ ಹೊಡೆದಾಟ

ಮಂಗಳೂರು: ವಾಹನಕ್ಕೆ ಸೈಡ್ ಕೊಡುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಂಗಳೂರಿನ ರಸ್ತೆಯೊಂದರಲ್ಲಿ ನಡೆದ ಹೊಡೆದಾಟ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಟ್ರಾಫಿಕ್ ಜಾಮ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದ ಘಟನೆ ಮಂಗಳೂರಿನ ಪಂಪ್ವೆಲ್ ನಿಂದ ಕಂಕನಾಡಿ ಸಂಪರ್ಕಿಸುವ ರಸ್ತೆಯಲ್ಲಿ ನಡೆದಿದೆ. ವಾಹನಕ್ಕೆ ಸೈಡ್ ಕೊಡುವ ವಿಚಾರಕ್ಕೆ ಆಟೋ ಚಾಲಕ ಮತ್ತು ಕಾರು ಪ್ರಯಾಣಿಕರ ಮಧ್ಯೆ ಹೊಡೆದಾಟ ನಡೆದಿದೆ ಎಂದು ಹೇಳಲಾಗಿದೆ. ಈ ವೇಳೆ ಅದೇ ಮಾರ್ಗವಾಗಿ ಬಂದ ಅಂಬ್ಯುಲೆನ್ಸ್ ಗೂ ದಾರಿ ನೀಡದೆ ಗುಂಪು…

Read More

ಕಾಪು: ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಪಲ್ಟಿ; ಏಳು‌ಮೀನುಗಾರರ ರಕ್ಷಣೆ

ಉಡುಪಿ: ಮೀನುಗಾರಿಕೆಗೆ ತೆರಳಿದ್ದ ನಾಡದೋಣಿಯೊಂದು ಸಮುದ್ರದ ಅಲೆಯ ಹೊಡೆತಕ್ಕೆ ಸಿಲುಕಿ ಪಲ್ಟಿಯಾದ ಘಟನೆ ಕಾಪು ತಾಲೂಕಿನ ಲೈಟ್ ಹೌಸ್ ನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ದೋಣಿಯಲ್ಲಿದ್ದ 7 ಜನ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಟ್ರಾಲ್ ದೋಣಿ ಅಲೆಗಳ ಹೊಡೆತಕ್ಕೆ ಸಿಲುಕಿ ಮಗುಚಿ ಬಿದ್ದಿದೆ. ದೋಣಿಯಲ್ಲಿದ್ದ ಮೀನುಗಾರರನ್ನು ಸ್ಥಳೀಯ ಮೀನುಗಾರರಾದ ಪ್ರಶಾಂತ್ ಮತ್ತು ವಿನೋದ್ ರಕ್ಷಣೆ ಮಾಡಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಮತ್ತೊಂದು ದುರಂತ ತಪ್ಪಿದಂತಾಗಿದೆ.

Read More
error: Content is protected !!