ಉಪ್ಪಳ ಬಳಿಯ ದಡ್ಡಂಗಡಿ ಕಂಚಿಲ ನಿವಾಸಿ, (35) ರ ಹರೆಯದ ಇಲೆಕ್ಟಿಶಿಯನ್ ಶರಣ್ ರಾಜ್ ನೇಣು ಬಿಗಿದ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆ

ಮಂಜೇಶ್ವರ: ಉಪ್ಪಳ ಬಳಿಯ ದಡ್ಡಂಗಡಿ ಕಂಚಿಲ ನಿವಾಸಿ, ಟೈಲ‌ರ್ ದೂಮಣ್ಣ ಶೆಟ್ಟಿಗಾರ್ ರ ಪುತ್ರ ಇಲೆಕ್ಟಿಶಿಯನ್ ವೃತ್ತಿಯಲ್ಲಿ ತೊಡಗಿಕೊಂಡಿರುವ ಶರಣ್ ರಾಜ್ (35) ಇಂದು ಬೆಳಗ್ಗೆ ಮನೆಯೊಳಗೆ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಕೂಡಲೇ ಮನೆಯವರು ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಸ್ಥಳೀಯರು ಶರಣ್ ರಾಜ್ ರನ್ನು ಕುಣಿಕೆಯಿಂದ ಕೆಳಗಿಳಿಸಿ ಉಪ್ಪಳದ ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ಶರಣ್ ರಾಜ್ ಮೃತಪಟ್ಟಿದ್ದಾನೆ. ಇದೀಗ ಮೃತದೇಹವನ್ನು ಮಂಗಲ್ಪಾಡಿಯ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ. ನೇಣು ಬಿಗಿಯಲು…

Read More

ಧಾರಾಕಾರ ಮಳೆಗೆ ಮೀಯಪದವುನಲ್ಲಿ ಗುಡ್ಡೆ ಕುಸಿದು ಆವರಣಗೋಡೆ ಹಾನಿ,ಮನೆ ಅಪಾಯದಂಚಿನಲ್ಲಿ ಆತಂಕದ ಸ್ಥಿತಿ

ಮಂಜೇಶ್ವರ: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮೀಂಜ ಪಂಚಾಯತ್‌ನ ಮೀಯಪದವು ವಿದ್ಯಾವರ್ಧಕ ಹೈಸ್ಕೂಲ್‌ನ ಹಿಂಭಾಗದಲ್ಲಿರುವ ಕೃಷಿಕ ಬಾಬು ಎಂಬವರ ಮನೆ ಬಳಿಯಲ್ಲಿನ ಕೆಳಭಾಗದಲ್ಲಿ ಗುಡ್ಡೆ ಕುಸಿದು ಯಾವುದೇ ಕ್ಷಣದಲ್ಲಿ ಮನೆ ಧಾರಾಶಾಹಿಗೊಳ್ಳು ಭೀತಿ ಉಂಟಾಗಿದೆ. ಸೋಮವಾರದಂದು ಈ ಘಟನೆ ನಡೆದಿದೆ. ಇದರಿಂದ ಮನೆಯ ಸುತ್ತು ಕಲ್ಲಿನ ಆವರಣಗೋಡೆ ಸಂಪೂರ್ಣ ಕುಸಿದು ಹೋಗಿ ಮನೆ ಅಡಿಪಾಯ ಬಳಿ ತನಕ ತಲುಪಿದ್ದು, ಇದೀಗ ಕುಟುಂಬ ಸ್ಥಳಾಂತರಗೊಂಡಿದ್ದಾರೆ. ಇದೇ ವೇಳೆ ತೋಟದಲ್ಲಿರುವ ಬಾವಿ, ಮೋಟಾರ್ ಪಂಪು ಸಹಿತ ಅಡಿಕೆ,ತೆಂಗು,…

Read More

ಧಾರಾಕಾರ ಮಳೆಗೆ ಮೀಯಪದವುನಲ್ಲಿ ಗುಡ್ಡೆ ಕುಸಿದು ಆವರಣಗೋಡೆ ಹಾನಿ: ಮನೆ ಅಪಾಯದಂಚಿನಲ್ಲಿ ಆತಂಕದ ಸ್ಥಿತಿ

ಧಾರಾಕಾರ ಮಳೆಗೆ ಮೀಯಪದವುನಲ್ಲಿ ಗುಡ್ಡೆ ಕುಸಿದು ಆವರಣಗೋಡೆ ಹಾನಿ, ಮನೆ ಅಪಾಯದಂಚಿನಲ್ಲಿ ಆತಂಕದ ಸ್ಥಿತಿ. ಮಂಜೇಶ್ವರ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮೀಂಜ ಪಂಚಾಯತ್‌ನ ಮೀಯಪದವು ವಿದ್ಯಾವರ್ಧಕ ಹೈಸ್ಕೂಲ್‌ನ ಹಿಂಭಾಗದಲ್ಲಿರುವ ಕೃಷಿಕ ಬಾಬು ಎಂಬವರ ಮನೆ ಬಳಿಯಲ್ಲಿನ ಕೆಳಭಾಗದಲ್ಲಿ ಗುಡ್ಡೆ ಕುಸಿದು ಯಾವುದೇ ಕ್ಷಣದಲ್ಲಿ ಮನೆ ಧಾರಾಶಾಹಿಗೊಳ್ಳು ಭೀತಿ ಉಂಟಾಗಿದೆ. ಸೋಮವಾರದಂದು ಈ ಘಟನೆ ನಡೆದಿದೆ. ಇದರಿಂದ ಮನೆಯ ಸುತ್ತು ಕಲ್ಲಿನ ಆವರಣಗೋಡೆ ಸಂಪೂರ್ಣ ಕುಸಿದು ಹೋಗಿ ಮನೆ ಅಡಿಪಾಯ ಬಳಿ ತನಕ ತಲುಪಿದ್ದು,…

Read More

ಮಂಜೇಶ್ವರ ರಾಗಂ ಜಂಕ್ಷನ್‌ ಹಾಗೂ ಪರಿಸರದಲ್ಲಿ ಭಾರೀ,25 ಕ್ಕೂ ಮಿಕ್ಕ ಮನೆಗಳು ಜಲಾವೃತ,ಮನೆಯೊಳಗಿದ್ದ ದಾಖಲೆ ಪತ್ರಗಳು ವಿವಿಧ ಸಾಮಾಗ್ರಿಗಳು ಸೇರಿದಂತೆ ಲಕ್ಷಾಂತರ ಮೌಲ್ಯದ ಸೊತ್ತುಗಳು ನಾಶ

ಮಂಜೇಶ್ವರ ರಾಗಂ ಜಂಕ್ಷನ್‌ ಹಾಗೂ ಪರಿಸರದಲ್ಲಿ ಭಾರೀ ಮಳೆಯಿಂದ ಸುಮಾರು 25 ಕ್ಕೂ ಮಿಕ್ಕ ಮನೆಗಳು ಜಲಾವೃತಗೊಂಡು ಮನೆಯೊಳಗಿದ್ದ ದಾಖಲೆ ಪತ್ರಗಳು ವಿವಿಧ ಸಾಮಾಗ್ರಿಗಳು ಸೇರಿದಂತೆ ಲಕ್ಷಾಂತರ ಮೌಲ್ಯದ ಸೊತ್ತುಗಳು ನಾಶಗೊಂಡಿತ್ತು.ಮಂಜೇಶ್ವರ ಗ್ರಾಮ ಪಂಚಾಯತು ಅಧಿಕಾರಸ್ಕರ ಅನಾಸ್ತವೇ ಇದಕ್ಕೆ ಮೂಲ ಕಾರಣವಾಗಿತ್ತು.ಮಂಜೇಶ್ವರ ರೈಲ್ವೇ ಹಳಿಯ ಪರಿಸರದಲ್ಲಿರುವ ಸುರುಮ ತೋಡಿನಲ್ಲಿ ಭಾರೀ ಪ್ರಮಾಣದ ತ್ಯಾಜ್ಯಗಳು ತುಂಬಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಒಂದು ಗ್ರಾಮವೇ ನೆರೆ ಹಾನಿಗೊಳಗಾಗಿತ್ತು. ಇಷ್ಟೆಲ್ಲಾ ಆಗಿ ಕೂಡಾ ಪಂಚಾಯತು ಅಧಿಕಾರಸ್ಥರು…

Read More

ಯಶಸ್ವಿ ಕಲಾವಿದೆರ್ ಮಂಜೇಶ್ವರದ “ಮಂಗಳಾಗಿರಿ” ನಾಟಕಕ್ಕೆ ಶುಭ ಮುಹೂರ್ತ, ಪೋಸ್ಟ‌ರ್ ಬಿಡುಗಡೆ

ಯಶಸ್ವಿ ಕಲಾವಿದೆರ್ ಮಂಜೇಶ್ವರ ತಂಡದ 10 ನೇ ವರ್ಷದ ನಾಟಕ “ಮಂಗಳಾಗಿರಿ” ಯ ಶುಭ ಮುಹೂರ್ತ ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಮಂಜೇಶ್ವರ ಹೊಸಬೆಟ್ಟು ಜಮ್ಮದಮನೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಇಂದು ಬೆಳಗ್ಗೆ ನಡೆಯಿತು. ಕ್ಷೇತ್ರದ ಅರ್ಚಕರಾದ ರಾಮಚಂದ್ರ ಐತಾಳ್ ಬಡಾಜೆಯವರು ಕ್ಷೇತ್ರ ಮಾತೆಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ನೂತನ ನಾಟಕದ ಪೋಸ್ಟರ್ ನ್ನು ನಾಟಕದ ನಿರ್ದೇಶಕರಾದ ಎಂ.ಎಸ್ ರವಿ ವರ್ಕಾಡಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು “ಯಶಸ್ವಿ ಕಲಾವಿದರು” ಸಂಸ್ಥೆಯು ಹಲವು ವರ್ಷಗಳಿಂದ…

Read More

ಡಾ. ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರ ಹುಟ್ಟು ಹಬ್ಬದ ಪ್ರಯುಕ್ತ ಸಾಯಿನಿಕೇತನ ಸೇವಾಶ್ರಮ ದೈಗೋಳಿ ಆಶ್ರಮಕ್ಕೆ -ವಿಶೇಷ ಅನ್ನದಾನದ ವ್ಯವಸ್ಥೆ

ಡಾ. ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರ ಹುಟ್ಟು ಹಬ್ಬದ ಪ್ರಯುಕ್ತ ಸಾಯಿನಿಕೇತನ ಸೇವಾಶ್ರಮ ದೈಗೋಳಿ ಆಶ್ರಮಕ್ಕೆ ಡಾ. ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗ ಕೇಂದ್ರೀಯ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರ ವತಿಯಿಂದ ಇಂದು ರಾತ್ರಿ ವಿಶೇಷ ಅನ್ನದಾನದ ವ್ಯವಸ್ಥೆಯನ್ನು ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನೀಡಲಾಯಿತು. ಆಶ್ರಮ ವಾಸಿಗಳು ಈ ಸಂತಸದ ಸಂಭ್ರಮವನ್ನು ನಮ್ಮೊಂದಿಗೆ ಹರ್ಷೋಲ್ಲಾಸದಿಂದ ಹಂಚಿಕೊಂಡರು.

Read More

ಕಾಸರಗೋಡು ಜಿಲ್ಲಾ ಕುಲಾಲ ಸಂಘ (ರಿ) “ಮಂಗಲ್ಪಾಡಿ ಶಾಖೆ”ಸಹಾಯ ಹಸ್ತ

ಮಂಗಲ್ಪಾಡಿ ಶಾಖೆಯ ಮೊದಲ ಯೋಜನೆಯಾದ “ಬೆಳಕು” (ಬದುಕಿಗೊಂದು ಭರವಸೆಯ ಬೆಳಕು) ಎಂಬ ಸಮಾಜ ಕಾರ್ಯದ ಉದ್ದೇಶದಲ್ಲಿ ಸಂಕಷ್ಟದಲ್ಲಿರುವ ಆಶಕ್ತ ಕುಲಾಲ ಕುಟುಂಬಕ್ಕಾಗಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಯೋಜನೆ ಆದಿತ್ಯವಾರ ಗೌರಧ್ಯಕ್ಷರಾದ ಶ್ರೀ ವಾಸು ಕುಲಾಲ್ ಬೊಲ್ಲಾರ್ ಉಪಸ್ಥಿತಿಯಲ್ಲಿ, ಸದಸ್ಯರ ಜತೆ, ಹಿರಿಯ ವ್ಯಕ್ತಿಗಳ ಸಮ್ಮುಖದಲ್ಲಿ ಚಾಲನೆಗೊಂಡು ಮೊದಲ ಸಹಾಯರ್ಥವಾಗಿ ಕೊಂಡೆವೂರು ದಿ /ತಿಮ್ಮಪ್ಪ ಮೂಲ್ಯ ಜಯನಗರ(ಮನೆ),ಕೊಂಡೆವೂರು,ಉಪ್ಪಳ(ಅಂಚೆ), ಕಾಸರಗೋಡು. ಇವರು ಅಲ್ಪಕಾಲದ ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು.ಯಾವುದೇ ಚಿಕಿತ್ಸೆ ಫಲಕಾರಿಯಾಗದೆ ಅಗಲಿದ ಕುಟುಂಬಕ್ಕೆ ನೊಂದ ಕುಟುಂಬಕ್ಕೊಂದು ಆಸರೆಯ ಬೆಳಕು…

Read More

ಪುತ್ತೂರಿನಲ್ಲಿ 7 ತಿಂಗಳ ಗರ್ಭಿಣಿ ನೇಣಿಗೆ ಶರಣು

ಪುತ್ತೂರು: ಗರ್ಭಿಣಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ನಗರದ ಹೊರವಲಯದ ಚಿಕ್ಕಪುತ್ತೂರು ಎಂಬಲ್ಲಿ ರವಿವಾರ ತಡರಾತ್ರಿ ನಡೆದಿದೆ.ಚಿಕ್ಕಪುತ್ತೂರಿನ ನಿವಾಸಿ, ಚಿಂತನ್ ಎಂಬವರ ಪತ್ನಿ ರೇಷ್ಮಾ (28) ಆತ್ಮಹತ್ಯೆ ಮಾಡಿಕೊಂಡವರು. ರೇಷ್ಮಾ ಏಳು ತಿಂಗಳ ಗರ್ಭಿಣಿಯಾಗಿದ್ದರು. ಸುರತ್ಕಲ್ ಮೂಲದ ರೇಷ್ಮಾರನ್ನು ನಾಲ್ಕು ವರ್ಷಗಳ ಹಿಂದೆ ಚಿಕ್ಕಪುತ್ತೂರಿನ ಚಿಂತನ್ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ ಓರ್ವ ಪುತ್ರಿಯಿದ್ದಾಳೆ. ಚಿಂತನ್, ರೇಷ್ಮಾ ಮತ್ತು ಅವರ ಪುತ್ರಿ ಚಿಕ್ಕಪುತ್ತೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ….

Read More

ನಿರಂತರ ಮಳೆ ಮಂಜೇಶ್ವರದ ಬೀಚ್ ರಸ್ತೆಯಲ್ಲಿರುವ 12 ಮನೆ ಜಲಾವೃತಾ

ಮಂಜೇಶ್ವರ ∙ ಕಳೆದ ಕೆಲವು ದಿವಸಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಮಂಜೇಶ್ವರ ಚರ್ಚ್ ಬೀಚ್ ರಸ್ತೆ ಪ್ರದೇಶದಲ್ಲಿ ವ್ಯಾಪಕವಾದ ನೀರು ನಿಂತು ಪ್ರದೇಶದ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪ್ರವಾಹದ ಪರಿಣಾಮವಾಗಿ ಅಲ್ಲಿನ 12 ಮನೆಗಳಿಗೆ ಮಳೆನೀರು ನುಗ್ಗಿದೆ. ಪ್ರಾಥಮಿಕ ವರದಿಗಳ ಪ್ರಕಾರ ಈ ಪ್ರದೇಶದಲ್ಲಿ ಮಳೆನೀರು ಹರಿದು ಹೋಗಬೇಕಾದ ಚರಂಡಿಗಳನ್ನು ಮುಚ್ಚಿರುವುದು ಹಾಗೂ ಸಮೀಪದ ತೋಡಿನ ಕಟ್ಟ ಒಡೆದಿರುವುದು ಈ ರೀತಿಯಾಗಿ ನೀರು ಶೇಖರಣೆಯಾಗಿ ಪ್ರವಾಹದ ಭೀತಿಗೆ ಕಾರಣವಾಗಿರುವುದಾಗಿ ತಿಳಿದು ಬಂದಿದೆ. ಸೂಕ್ತವಾದ ನಿಕಾಶಿ…

Read More

ಮಂಜೇಶ್ವರದ ಕೊಡ್ಲಮೊಗರುವಿನಲ್ಲಿ ಮನೆಯೊಳಗೆ ಯುವಕ ನೇಣುಬಿಗಿದು ಆತ್ಮಹತ್ಯೆ ಗೈದ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ: ಕೊಡ್ಲಮೊಗರಿನಲ್ಲಿ ಮನೆಯೊಳಗೆ ಯುವಕನೊಬ್ಬ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೊಡ್ಲಮೊಗರು ಪಳ್ಳದ ಪಡ್ಪು ಬೀಡು ನಿವಾಸಿ ಶೇಖರ ಬೆಲ್ಚಾಡ ಎಂಬವರ ಪುತ್ರ ಭರತ್ (24) ಸಾವನ್ನಪ್ಪಿದ ದುರ್ದೈವಿ.ಬಾನುವಾರ ಬೆಳಿಗ್ಗೆ ಮನೆಯವರು ದೇವಸ್ಥಾನಕ್ಕೆ ತೆರಳಿ ಮರಳಿ ಬರುತ್ತಿರುವ ಮಧ್ಯೆ ಭರತ್ ಮನೆಯೊಳಗೆ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.ಸ್ಥಳೀಯರು ಸಾವಿನಲ್ಲಿ ನಿಗೂಢತೆ ಇರುವ ಶಂಕೆ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಧಾವಿಸಿ ಶವದ ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ಮರಣೋತ್ತರ ಪರೀಕ್ಷಾ ವರದಿ…

Read More
error: Content is protected !!