ಕುಂಬಳೆ ಕೊಯ್ಪಾಡಿ ಸಮುದ್ರ ತೀರದಲ್ಲಿ ತೆರೆಗಳೊಂದಿಗೆ ತೇಲಿ ಬಂದ ಬ್ಯಾರಲ್ , ಸಮುದ್ರದಲ್ಲಿ ಹೊತ್ತಿ ಉರಿದ ಹಡಗಿನಿಂದ ಬಿದ್ದ ಕಂಟೈನರ್ ನಲ್ಲಿದ್ದ ಏಸಿಡ್ ಎಂಬ ಶಂಕೆ

ಕುಂಬಳೆ: ಇಲ್ಲಿನ ಕೊಯ್ಪಾಡಿ ಸಮುದ್ರ ತೀರದಲ್ಲಿ ತೆರೆಗಳೊಂದಿಗೆ ತೇಲಿ ಬಂದ ಬ್ಯಾರಲ್ ಗಳು ದಡಕ್ಕೆ ಅಪ್ಪಳಿಸಿದೆ. ಭಾನೂವಾರ ಸಂಜೆ 3 30ರ ವೇಳೆ ಸಮುದ್ರ ದಂಡೆಯಲ್ಲಿ ಬ್ಯಾರಲ್ ತೇಲುವುದನ್ನು ಕಂಡು ಶಂಕಿತನಾದ ಮತ್ಸ್ಯ ಕಾರ್ಮಿಕನೋರ್ವ ಕೂಡಲೇ ಕೋಸ್ಟಲ್ ಪೋಲೀಸರಿಗೆ ಮಾಹಿತಿ ನೀಡಿದನು. ಇದರಂತೆ ಪೋಲೀಸರು ಆಗಮಿಸಿ ಬ್ಯಾರಲ್ ದಡಕ್ಕೆ ತಂದು ಸಂರಕ್ಷಿಸಿದ್ದಾರೆ. ಇತ್ತೀಚೆಗೆ ಕೇರಳ ಕರಾವಳಿ ತೀರದಲ್ಲಿ ಹೊತ್ತಿ ಉರಿದ ಹಡಗಿನಿಂದ ಸಮುದ್ರ ಪಾಲಾದ ಕಂಟೈನರಿನಿಂದ ಬಿದ್ದ ಬ್ಯಾರಲ್ ಇದಾಗಿರಬೇಕೆನ್ನಲಾಗಿದೆ. ಬ್ಯಾರಲ್ ನಲ್ಲಿ ನೈಟ್ರಿಕ್ ಏಸಿಡ್ ಇರುವುದೆಂದು…

Read More

ಕೇರಳದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಬ್ರಿಟನ್ ನೌಕಾಪಡೆಯಯುದ್ಧ ವಿಮಾನ

ಕೇರಳ : ಹಾರಾಡುತ್ತಿರುವಾಗಲೇ ಇಂಧನ ಖಾಲಿಯಾದ ಹಿನ್ನೆಲೆ, ಬ್ರಿಟನ್‌ನ ನೌಕಾಪಡೆಯ ಯುದ್ಧ ವಿಮಾನ ಎಫ್-35 ಕೇರಳದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ರಾತ್ರಿ ತುರ್ತು ಭೂಸ್ಪರ್ಶ ಕಂಡಿದೆ. ಶನಿವಾರ ರಾತ್ರಿ 9.30 ರ ಸುಮಾರಿನಲ್ಲಿ ಭಾರತದ ಮೇಲೆ ಹಾರುತ್ತಿರುವಾಗ ಇಂಧನ ಖಾಲಿಯಾದ ಬಗ್ಗೆ ಪೈಲಟ್ ಮಾಹಿತಿ ರವಾನಿಸಿದ್ದಾನೆ. ತಕ್ಷಣವೇ ಬ್ರಿಟನ್ ಅಧಿಕಾರಿಗಳು ಭಾರತೀಯ ಅಧಿಕಾರಿಗಳ ಜೊತೆ ಸಂಪರ್ಕ ಸಾಧಿಸಿ ವಿಮಾನ ಇಳಿಯಲು ಅನುಮತಿ ಕೋರಿದ್ದಾರೆ. ಇದಕ್ಕೆ ಒಪ್ಪಿದ ಭಾರತದ ಅಧಿಕಾರಿಗಳು ಕೇರಳದ ತಿರುವನಂತಪುರಂ ನಿಲ್ದಾಣದಲ್ಲಿ ಇಳಿಸಲು ಅನುವು…

Read More

ಕನ್ನಡ ಭಾಷೆ ಬಳಕೆಯಾಗುತ್ತಿರುವ ಕಾಸರಗೋಡಿನಲ್ಲಿ ಕನ್ನಡ ಭಾಷೆಗೆ ಮತ್ತೆ ಕೊಡಲಿ

ಮಂಜೇಶ್ವರ : ಕನ್ನಡ ಭಾಷೆ ಬಳಕೆಯಾಗುತ್ತಿರುವ ಕಾಸರಗೋಡಿನಲ್ಲಿ ಕನ್ನಡ ಭಾಷೆಗೆ ಮತ್ತೆ ಕೊಡಲಿ ಏಟು ಬಿದ್ದಿದೆ. ಒಂದಲ್ಲ ಒಂದು ವಿಷಯದಲ್ಲಿ ಕನ್ನಡದ ಅವಗಣನೆಯಾಗುತ್ತಿರುವ ಕಾಸರಗೋಡಿನ ಶಾಲೆಗಳಲ್ಲೂ ಮಲಯಾಳೀಕರಣ ಮಾಡಲು ಮುಂದಾದಾಗ ಕನ್ನಡಿಗರ ಒಕ್ಕೊರಳಿನ ಪ್ರತಿಭಟನೆಯಿಂದ ಅದು ಸಾಕಾರಗೊಂಡಿರಲಿಲ್ಲ. ಇದೀಗ ಕಾಸರಗೋಡು ಜಿಲ್ಲೆಯನ್ನು ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳ ನಾಮಫಲಕಗಳಲ್ಲಿ ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್ ಭಾಷೆ ರಾರಾಜಿಸುತಿದ್ದರೂ ಕನ್ನಡ ಭಾಷೆಯನ್ನು ಇಲ್ಲೂ ಅವಗಣಿಸಲಾಗಿದೆ . ಇದು ಕನ್ನಡ ಭಾಷಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕೇಂದ್ರೀಯ ಭಾಷಾ ಅಲ್ಪಸಂಖ್ಯಾತ ನೀತಿಗೆ ಅನುಗುಣವಾಗಿ…

Read More

ಗರ್ಭಿಣಿ ಹಸುವನ್ನು ಮಾಂಸ ಮಾಡಿ ಕಳೆಬರವನ್ನು ಉಪೇಕ್ಷಿಸಿ ಪರಾರಿಯಾದ ಕಟುಕರಿಗೆ ತಕ್ಕ ಶಾಸ್ತಿ ನೀಡಲು ದೇವರ ಮೊರೆ ಹೋದ ಕುಟುಂಬಸ್ಥರು

ಮಂಜೇಶ್ವರ: ಕಟುಕರು ಹಟ್ಟಿಯಿಂದ ಗರ್ಭಿಣಿ ದನವನ್ನು ರಾತ್ರೋರಾತ್ರಿ ಕದ್ದೋಯ್ದು ಪರಿಸರದಲ್ಲೆ ಮಾಂಸ ಮಾಡಿ ಕಳೆಬರವನ್ನು ಸ್ಥಳದಲ್ಲೇ ಉಪೇಕ್ಷಿಸಿ ಪರಾರಿಯಾದ ಘಟನೆ ಮಂಜೇಶ್ವರ ಹೊಸಬೆಟ್ಟುವಿನಲ್ಲಿ ನಡೆದಿದೆ. ಪ್ರಕರಣ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಮನೆ ಮಂದಿ ಇದೀಗ ದನ ಕದ್ದ ಕಟುಕರಿಗೆ ತಕ್ಕ ಶಾಸ್ತಿಯಾಗಲೆಂದು ಕುಂಬ್ಳೆ ಶ್ರೀ ಗೋಪಾಲಕೃಷ್ಣ ದೇವರಲ್ಲಿ ಪ್ರಾರ್ಥಸಿದ್ದಾರೆ. ಮಂಜೇಶ್ವರ ಗ್ರಾಮ ಪಂಚಾಯತ್ ಗೊಳಪಟ್ಟ 7 ನೇ ವಾರ್ಡ್ ಹೊಸಬೆಟ್ಟುವಿನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ “ಗಿರೀಶ್ ನಿಲಯ” ನಿವಾಸಿ, ಪ್ರಗತಿಪರ ಕೃಷಿಕರೂ, ಹೈನುಗಾರಿಕೆ ವೃತ್ತಿಯಲ್ಲಿ…

Read More

ವಿಮಾನ ದುರಂತದಲ್ಲಿ ಮೃತ ಪಟ್ಟ ಪ್ರಯಾಣಿಕರಿಗೆ ಸಂತಾಪ ಸೂಚಿಸಿದ -ಗಣೇಶ್ ಪಾವೂರು

ಮಂಜೇಶ್ವರ :ಗುಜರಾತ್ನ ಅಹ್ಮದಾಬಾದ್ ನಲ್ಲಿ ನಡೆದ ಬೋಯಿಂಗ್ ವಿಮಾನ ದುರಂತದಲ್ಲಿ ಮೃತ ಪಟ್ಟ ಪ್ರಯಾಣಿಕರಿಗೆ ತೀಯಾ ವೆಲ್ಫೇರ್ ಅಸೋಸಿಯೇಷನ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಗಣೇಶ್ ಪಾವೂರು ಸಂತಾಪ ಸೂಚಿಸಿದ್ದಾರೆ. ಬದುಕಿ ಉಳಿದ ಗಾಯಲು ಬೇಗ ಗುಣ ಮುಖರಾಗಲಿ ಏಂದು ಅವರು ಹಾರೈಸಿದ್ದಾರೆ ಹಾಗೂ ಇದನ್ನು ಕೇಂದ್ರ ಸರಕಾರ ತನಿಖೆ ನಡೆಸಿ ಇದರ ಸತ್ಯಂಶವನ್ನು ಕಂಡು ಹಿಡಿಯಬೇಕು ಏಂದು ಗಣೇಶ್ ಪಾವೂರು ಅಗ್ರಹಿಸಿದ್ದಾರೆ ಈ ದುರಂತದಲ್ಲಿ ಮೃತ ಪಟ್ಟ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಅವರು ಸಂತಾಪ ಸೂಚಿಸಿದ್ದಾರೆ.

Read More

ಜನಜಾಗೃತಿಯ ಹಾದಿಯಲ್ಲಿ ದೀಪ ಜ್ಯೋತಿಯಾಗಿದ್ದ ಕುಳೂರು ಬೀಡು ಕೆ.ದಾಸಣ್ಣ ಆಳ್ವ ನಿಧನ

ಮಂಜೇಶ್ವರ: ಮೀಂಜ ಗ್ರಾಮ ಪಂಚಾಯಿತು ವ್ಯಾಪ್ತಿಯ ಕುಳೂರು ಗ್ರಾಮದ, ಸಮಾಜಸೇವೆ ಮತ್ತು ಜನಜಾಗೃತಿಯ ಹಾದಿಯಲ್ಲಿ ದೀಪದಂತೆ ಜ್ಯೋತಿ ಹರಡಿದ್ದ ಹಿರಿಯ ಸಮಾಜ ಸೇವಕ ಹಾಗೂ ಕುಳೂರು ಬೀಡಿನ ಮನೆತನದ ಹಿರಿಯ ಸದಸ್ಯ ಧಾರ್ಮಿಕ, ಕುಳೂರು ಬೀಡು ಕೆ. ದಾಸಣ್ಣ ಆಳ್ವ (93) ಇಂದು ಮುಂಜಾನೆ ನಿಧನರಾಗಿದ್ದಾರೆ. ಅಸೌಖ್ಯ ನಿಮ್ಮಿತ ಕಳೆದ ಒಂದು ವಾರದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆಗೆ ಸ್ಪಂಧಿಸದ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಮೃತರ ಅಂತ್ಯಕ್ರಿಯೆಯ ವಿಧಿ ವಿಧಾನಗಳು ಅಪರಾಹ್ನ 3.30 ಕ್ಕೆ…

Read More

ಬಿಲ್ಡಿಂಗ್ ಕಂಟ್ರಾಕ್ಟರ್ ಕಟ್ಟೆಬಜಾರ್ ನಿವಾಸಿ ವೆಂಕಟೇಶ್ ಹೃದಯಾಘಾತಕ್ಕೆ ಬಲಿ

ಮಂಜೇಶ್ವರ; ಹೊಸಂಗಡಿ ಕಟ್ಟೆಬಜಾರ್ ನಿವಾಸಿ ಬಿಲ್ಡಿಂಗ್ ಕಂಟ್ರಾಕ್ಟರ್ ಆಗಿ ಖ್ಯಾತಿ ಪಡೆದಿರುವ ವೆಂಕಟೇಶ್ (58) ಇಂದು ಬೆಳಗ್ಗಿನ ಜಾವಾ ಹೃದಯಾಘಾತದಿಂದ ನಿಧನಹೊಂದಿದ್ದಾರೆ. ನಿನ್ನೆ ರಾತ್ರಿ ಎಂದಿನಂತೆ ಊಟ ಮಾಡಿ ಮಲಗಿದ್ದು ಇಂದು ಬೆಳಗ್ಗೆ ಮಂಚದಿಂದ ಕೆಳಗೆ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ಹೊಸಂಗಡಿ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮುಂದಿನ ಚಿಕಿತ್ಸೆಗೆ ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನರಾದರು. ಇವರು ಕಟ್ಟೆಬಜಾರ್ ನಿವಾಸಿ ದಿ. ಸೀತಾರಾಮ ಮತ್ತು ದಿ. ಲೀಲಾವತಿ ಪುತ್ರನಾದ ಇವರು ಪತ್ನಿ…

Read More

ಶ್ರೀ ರಾಜ ಬೆಳ್ಚಪ್ಪಾಡ ಸೇವಾ ಟ್ರಸ್ಟ್ ನ ಏಳನೇ ವಾರ್ಷಿಕೋತ್ಸವದ ಅಂಗವಾಗಿ ಬಡಮಕ್ಕಳಿಗೆ ಕಲಿಕೋಪಕರಣ ವಿತರಣೆ

ಮಂಜೇಶ್ವರ : ಶ್ರೀ ರಾಜ ಬೆಳ್ಳಪ್ಪಾಡ ಸೇವಾ ಟ್ರಸ್ಟ್ ಉದ್ಯಾವರ ಮಾಡ ಇದರ ವತಿಯಿಂದ ಸಂಸ್ಥೆಯ 7 ನೇ ವರ್ಷದ ವಾರ್ಷಿಕೋತ್ಸವ ದ ಅಂಗವಾಗಿ ಬಡ ಶಾಲಾ ಮಕ್ಕಳ ಕಲಿಕೆಗೆ ಬೇಕಾದ ಸಾಮಾಗ್ರಿಗಳ ಕಿಟ್ ಳನ್ನು ಉದ್ಯಾವರ ಮಾಡದ ಸತ್ಯ ದೈವಗಳ ಭಂಡಾರ ಮನೆಯಲ್ಲಿ ಪ್ರಾರ್ಥನೆ ಮಾಡಲಾಯಿತು. ಬಳಿಕ ಅನ್ಯ ರಾಜ್ಯದ ವಲಸೆ ಕಾರ್ಮಿಕರ ಬಡ ಮಕ್ಕಳೇ ತುಂಬಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಲಪಾಡಿಯ ವಿದ್ಯಾರ್ಥಿಗಳಿಗೆ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮಾರ್ಗದರ್ಶಕ ರಾಜ…

Read More

ಬಾಯಾರು ಆರೋಗ್ಯ ಕೇಂದ್ರದ ಅವಗಣನೆಗೆ ಎದುರಾಗಿ ಯು ಡಿ ಎಫ್ ಬೃಹತ್ ಪ್ರತಿಭಟನೆ

ಮಂಜೇಶ್ವರ : ಬಾಯಾರು ಕುಟುಂಬ ಆರೋಗ್ಯ ಕೇಂದ್ರದ ಅವಗಣನೆಗೆ ಎದುರಾಗಿ ಯು ಡಿ ಎಫ್ ಪೈವಳಿಕೆ ಪಂಚಾಯತ್ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮಾರ್ಚ್ ಮತ್ತು ಧರಣಿ ನಡೆಸಿತು.ನೂತನ ಕಟ್ಟಡ ಚಿಕಿತ್ಸಾ ಸೌಲಭ್ಯಗಳೊಂದಿಗೆ ಆಸ್ಪತ್ರೆ ಕೂಡಲೇ ಕಾರ್ಯಾಚರಿಸಬೇಕು,ಅಗತ್ಯ ವೈದ್ಯರ ಸೇವೆ ಲಭ್ಯವಾಗಬೇಕು,ಅಗತ್ಯದ ಔಷಧಗಳ ಲಭ್ಯತೆ ಖಾತರಿಪಡಿಸಬೇಕು ಮತ್ತು ಸಂಧ್ಯಾ ಸಮಯದಲ್ಲಿ ಹೊರ ರೋಗಿಗಳ ವಿಭಾಗ ಕಾರ್ಯಾಚರಿಸಬೇಕು.ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಗ್ರಾಮಾಧಿಕಾರಿ ಕಚೇರಿ ಪರಿಸರದಿಂದ ಆರಂಭಗೊಂಡ ಮಾರ್ಚ್ ಕುಟುಂಬ ಆರೋಗ್ಯ ಕೇಂದ್ರ ಪರಿಸರದಲ್ಲಿ ಸಮಾಪ್ತಿಗೊಂಡಿತು. ನಂತರ ನಡೆದ ಪ್ರತಿಭಟನಾ…

Read More

ಪ್ರಾಣಿಪ್ರಿಯೆ ಶಶಿಕಲಾ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

ಮಂಗಳೂರು : ಮಂಗಳೂರಿನ ಹೊರವಲಯದ ಕುಂಜತ್ತಬೈಲ್ ನಲ್ಲಿ ಒಂಟಿ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಪರಿಸರವಾಸಿಗಳಿಗೆ ಅತೀವ ವೇದನೆ ತಂದಿದೆ ಮತ್ತು ನಮಗೆ ಇದು ತುಂಬಲಾರದ ನಷ್ಟವಾಗಿದೆ ಎಂದು ಸ್ಥಳೀಯರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ. 60 ರ ಹರೆಯದ ಶಶಿಕಲಾ ಶೆಟ್ಟಿ ಒಂಟಿ ಮಹಿಳೆ , ಪರಿಸರ ಪ್ರೇಮಿ ಮತ್ತು ಪ್ರಾಣಿ ಪಕ್ಷಿಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದರು.ಅದರಲ್ಲೂ ಅಸಂಖ್ಯ ಸಂಖ್ಯೆಯ ಶ್ವಾನಗಳನ್ನು ಇವರು ಸಾಕುತ್ತಿದ್ದರು.ಎಷ್ಟೊಂದು ಸಂಖ್ಯೆಯ ಶ್ವಾನಗಳು ಇವರ ಮನೆಯ ಆವರಣದಲ್ಲಿ ಇರುವುದರಿಂದ ಯಾರೊಬ್ಬರೂ ಸುಲಭವಾಗಿ ಮನೆಯೊಳಗೆ…

Read More
error: Content is protected !!