2026-27 ಶೈಕ್ಷಣಿಕ ಸಾಲು: ಬಂಟ್ವಾಳದಲ್ಲಿ ‘ದಾಖಲಾತಿ ಅಂದೋಲನ’ ಆರಂಭ — ಮೇ 15ರಿಂದ ಹಂತ ಹಂತವಾಗಿ ಅಭಿಯಾನ

ಬಂಟ್ವಾಳ: 2026-2027 ನೇ ಶೈಕ್ಷಣಿಕ ಸಾಲಿಗೆ ಮಕ್ಕಳ ದಾಖಲಾತಿಯನ್ನು ಹೆಚ್ಚಿಸಲು ಮಕ್ಕಳ ದಾಖಲಾತಿ ಜಾಗೃತಿ ಅಭಿಯಾನ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಂಟ್ವಾಳ ತಾಲೂಕು ಶಿಕ್ಷಣಾಧಿಕಾರಿ ಮಾಲತಿ ಹೇಳಿದರು.

ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ವಲಯದಲ್ಲಿ ಬ್ಲಾಕ್ ಮಟ್ಟ, ಹೋಬಳಿ ಮಟ್ಟ ಹಾಗೂ ಕ್ಲಸ್ಟರ್ ಮಟ್ಟ ಎಂಬ ಮೂರು ವಿಭಾಗದಲ್ಲಿ ದಾಖಲಾತಿಯನ್ನು ಕೈಗೊಂಡಿದ್ದು, ಮೇ.15 ರಂದು ಬ್ಲಾಕ್ ಮಟ್ಟದ, ಮೇ. 18 ರಂದು ಹೋಬಳಿ ಮಟ್ಟ ಹಾಗೂ ಮೇ. 20 ರಂದು ಕ್ಲಸ್ಟರ್ ಮಟ್ಟದಲ್ಲಿ ದಾಖಲಾತಿ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.
ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವ ಉದ್ದೇಶದಿಂದ ” ದಾಖಲಾತಿ ಅಂದೋಲನ 2026-27″ ಎಂಬ ಯೋಜನೆಯನ್ನು ಸರಕಾರ ಹಮ್ಮಿಕೊಂಡಿದ್ದು, ತಾಲೂಕಿನ ಜನತೆಯ ಸಹಕಾರ ಬೇಕು ಎಂದು ತಿಳಿಸಿದರು.

ತಾ.ಪಂ.ಇ.ಒ.ಸಚಿನ್ ಕುಮಾರ್ ಮಾತನಾಡಿ ಖಾಸಗಿ ಶಾಲೆಗಳ ಅಬ್ಬರದ ಪ್ರಚಾರದ ನಡುವೆ ಸರಕಾರಿ ಶಾಲೆಗಳು ಮೂಲೆಗುಂಪಾಗಿವೆ, ಮತ್ತು ಸರಕಾರಿ ಶಾಲೆಗಳು ಮುಚ್ಚುತ್ತಿದೆ ಎಂಬುದು ಬಹಿರಂಗಗೊಂಡ ಹಿನ್ನೆಲೆಯಲ್ಲಿ ಸರಕಾರ ಮತ್ತು ಇಲಾಖೆ ಸರಕಾರಿ ಶಾಲೆಗಳ ಶೈಕ್ಷಣಿಕ ವರ್ಷದ ಸಾಧನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಮತ್ತು ಪ್ರಚಾರ ಮಾಡುವ ಯೋಚನೆ ಮಾಡಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ತಿಳಿಸಿದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಫಾತಿಮ ಬಿ. ಬಿ.ಆರ್.ಸಿ.ಸಮನ್ವಯಧಿಕಾರಿ ವಿದ್ಯಾ ಉಪಸ್ಥಿತರಿದ್ದರು.

ದಾಖಲಾತಿಗೆ ಕೈಗೊಂಡ ಕ್ರಮಗಳು

ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ಕಳೆದ ನವೆಂಬರ್ ತಿಂಗಳಿನಿಂದಲೇ ದಾಖಲಾತಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು,
ಶಿಕ್ಷಕರು ಪೋಷಕರು ಹಾಗೂ ಎಸ್.ಡಿ.ಎಂ.ಸಿ ಸಭೆಗಳಲ್ಲಿ ದಾಖಲಾತಿ ಅಂದೋಲನದ ಕುರಿತು ಜಾಗೃತಿ ಮೂಡಿಸಿದ್ದೇವೆ.
ಶಾಲಾ ವ್ಯಾಪ್ತಿಯಲ್ಲಿನ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಒಂದನೇ ದಾಖಲಾಗುವ ವಯೋಮಾನದ ಮಕ್ಕಳ ಮಾಹಿತಿ ಪಡೆದುಕೊಳ್ಳಲಾಗಿದೆ.
ಶಿಕ್ಷಕರು/ಎಸ್.ಡಿ.ಎಂ.ಸಿ ಸದಸ್ಯರು ಮನೆ-ಮನೆ ಭೇಟಿ ನಡೆಸಿ ದಾಖಲಾತಿಗಾಗಿ ಪೋಷಕರ ಮನವೊಲಿಸುವ ಕಾರ್ಯ ಮಾಡಲಾಗಿದೆ.
ಶಾಲೆಗಳಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ Flex ಗಳು ಹಾಗೂ whatsapp ಗಳ ಮೂಲಕ ವ್ಯಾಪಕ ಪ್ರಚಾರಗಳನ್ನು ಕೈಗೊಳ್ಳಲಾಗಿದೆ.

ದಾಖಲಾತಿ ಹೆಚ್ಚಳಕ್ಕಾಗಿ ದಾನಿಗಳು ಹಾಗೂ ಎಸ್.ಡಿ.ಎಂ.ಸಿ ವತಿಯಿಂದ ಎಲ್.ಕೆ.ಜಿ ತರಗತಿಗಳನ್ನು ಪ್ರಾರಂಭಿಸಲಾಗಿದೆ.
ದಾನಿಗಳು ಹಾಗೂ ಹಳೆ ವಿದ್ಯಾರ್ಥಿಗಳ ಸಹಾಯದಿಂದ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿಗಳ ವಿತರಣೆಗಾಗಿ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ.

ತಾಲೂಕಿನ‌ ಫಿ.ಎಂ.ಶ್ರೀ ಶಾಲೆಗಳ ವಿವರ (PM-SHRI Schools):

ತಾಲೂಕಿನ‌ ವಲಯದಲ್ಲಿ 6 ಪಿ.ಎಂ.ಶ್ರೀ ಶಾಲೆಗಳು ಇವೆ. ಇವು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರ ಅಡಿಯಲ್ಲಿ ಮೇಲ್ದರ್ಜೆಗೇರಿಸಲಾದ ಮಾದರಿ ಶಾಲೆಗಳಾಗಿವೆ.

1.ಆಧುನಿಕ ಮೂಲಸೌಕರ್ಯ: ಸ್ಮಾರ್ಟ್ ತರಗತಿಗಳು, ಐಸಿಟಿ ಲ್ಯಾಬ್‌ಗಳು ಮತ್ತು ಸುಸಜ್ಜಿತ ಗ್ರಂಥಾಲಯಗಳು.

2.ವಿಜ್ಞಾನ ಮತ್ತು ತಂತ್ರಜ್ಞಾನ: ಅಧುನಿಕ ಪ್ರಯೋಗಾಲಯಗಳು ಮತ್ತು ಡಿಜಿಟಲ್ ಕಲಿಕಾ ಸಂಪನ್ಮೂಲ.

3.ಕೌಶಲ್ಯಾಧಾರಿತ ಶಿಕ್ಷಣ: ವೃತ್ತಿಪರ ಶಿಕ್ಷಣ (Vocational Education) ಮತ್ತು ಕೌಶಲ್ಯ ಅಭಿವೃದ್ಧಿ.

4.ಹಸಿರು ಶಾಲಾ ಪರಿಕಲ್ಪನೆ: ಸೌರಶಕ್ತಿ, ಮಳೆನೀರು ಕೊಯ್ದು ಮತ್ತು ಕಿಚನ್ ಗಾರ್ಡನ್.

5.ಸುರಕ್ಷಿತ ವಾತಾವರಣ: ಆತ್ಮರಕ್ಷಣೆಯ ತರಬೇತಿ ಮತ್ತು ಸಮಗ್ರ ಅಭಿವೃದ್ಧಿ.

ಕೆ.ಪಿ.ಎಸ್.ಶಾಲೆಗಳು (Karnataka Public Schools):

ಕೆ.ಪಿ.ಎಸ್ ಶಾಲೆಗಳಲ್ಲಿ LKG ಯಿಂದ 12 ನೇ ತರಗತಿವರೆಗೆ ಒಂದೇ ಆವರಣದಲ್ಲಿ ಶಿಕ್ಷಣ ನೀಡಲಾಗುತ್ತಿದೆ.
ವಲಯದಲ್ಲಿ 2 ಕೆ.ಪಿ.ಎಸ್ ಶಾಲೆಗಳಿವೆ.

  1. ಗ್ರಾಮೀಣ ಹಾಗೂ ನಗರ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ.
  2. ಸರ್ಕಾರಿ ಶಾಲೆಗಳಲ್ಲಿಯೇ ಖಾಸಗಿ ಶಾಲೆಗಳ ಮಟ್ಟದ ಶಿಕ್ಷಣ.
  3. ಒಂದೇ ಆವರಣದಲ್ಲಿ ಪ್ರಾಥಮಿಕದಿಂದ ಪಿಯುಸಿ ತನಕ ಶಿಕ್ಷಣ.
  4. ಬಡ ಮತ್ತು ಹಿಂದುಳಿದ ವರ್ಗದ ಮಕ್ಕಳಿಗೆ ಉತ್ತಮ ಅವಕಾಶ.
  5. ಡಿಜಿಟಲ್ ಶಿಕ್ಷಣ, ವಿಜ್ಞಾನ ಪ್ರಯೋಗಾಲಯ ಮತ್ತು ಗ್ರಂಥಾಲಯ ಸೌಲಭ್ಯ.
  6. ಕನ್ನಡ ಭಾಷೆ ಉತ್ತೇಜನದೊಂದಿಗೆ ಇಂಗ್ಲಿಷ್ ಜ್ಞಾನ ವೃದ್ಧಿ.

NSQF(National Skills Qualifications Framework) : ಶಾಲೆಗಳು

ಬಂಟ್ವಾಳ ವಲಯದಲ್ಲಿ 4 NSQF(National Skills Qualifications Framework) ಶಾಲೆಗಳಿವೆ.

NSQF ಶಾಲೆಗಳ ಪ್ರಮುಖ ವಿಶೇಷತೆಗಳು

  1. ಕೌಶಲ್ಯ ಆಧಾರಿತ ಶಿಕ್ಷಣ ವಿದ್ಯಾರ್ಥಿಗಳಿಗೆ ಪಾಠಗಳ ಜೊತೆಗೆ ಉದ್ಯೋಗಪರ ಕೌಶಲ್ಯಗಳನ್ನು ಕಲಿಸಲಾಗುತ್ತದೆ.
  2. ಪ್ರಾಯೋಗಿಕ ಕಲಿಕೆ ಪುಸ್ತಕದ ಜ್ಞಾನಕ್ಕಿಂತಲೂ ಕೈಯಾರೆ ಮಾಡುವ ಅಭ್ಯಾಸಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ.
  3. ಉದ್ಯೋಗ ಸಿದ್ಧತೆ ವಿದ್ಯಾರ್ಥಿಗಳು ಶಾಲಾ ಶಿಕ್ಷಣದ ಬಳಿಕ ಉದ್ಯೋಗಕ್ಕೆ ತಯಾರಾಗುವಂತೆ ತರಬೇತಿ ಪಡೆಯುತ್ತಾರೆ.
  4. ವಿಭಿನ್ನ ವೃತ್ತಿಪರ ಕೋರ್ಸ್‌ಗಳು ಉದಾಹರಣೆಗೆ:

ಐಟಿ / IT,ಆರೋಗ್ಯ ಸೇವೆ,ಕೃಷಿ,ರಿಟೇಲ್, ಎಲೆಕ್ಟ್ರಾನಿಕ್ಸ್ ,ಪ್ರವಾಸೋದ್ಯಮ.

ಉದ್ಯಮ ಜಗತ್ತಿನ ಸಂಪರ್ಕ ಕೈಗಾರಿಕೆಗಳ ಅಗತ್ಯಕ್ಕೆ ತಕ್ಕಂತೆ ಪಠ್ಯಕ್ರಮ ರೂಪಿಸಲಾಗುತ್ತದೆ.

  1. ಆತ್ಮವಿಶ್ವಾಸ ವೃದ್ಧಿ ಸಂವಹನ ಕೌಶಲ್ಯ, ತಂಡದಲ್ಲಿ ಕೆಲಸ ಮಾಡುವ ಗುಣ ಬೆಳೆಯುತ್ತದೆ.
  2. ಮುಂದಿನ ಶಿಕ್ಷಣಕ್ಕೆ ಸಹಾಯಕ ಶಾಲೆಯ ನಂತರ ಉನ್ನತ ಶಿಕ್ಷಣ ಅಥವಾ ವೃತ್ತಿಪರ ತರಬೇತಿಗೆ ಸುಲಭ ಅವಕಾಶ.
  3. ಸ್ವಯಂ ಉದ್ಯೋಗಕ್ಕೆ ಪ್ರೇರಣೆ ವಿದ್ಯಾರ್ಥಿಗಳು ಸ್ವಂತ ಉದ್ಯಮ ಆರಂಭಿಸಲು ಬೇಕಾದ ಕೌಶಲ್ಯ ಪಡೆಯುತ್ತಾರೆ.
SHARE
Loading spinner

Leave a Reply

Your email address will not be published. Required fields are marked *

error: Content is protected !!