ಮಂಗಳೂರು | ಜು. 9: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರ ಹುಟ್ಟುಹಬ್ಬದ ಅಂಗವಾಗಿ ರಿಷಬ್ ಶೆಟ್ಟಿ ಫ್ಯಾನ್ಸ್ ಕುಡ್ಲ ವತಿಯಿಂದ ಸಮಾಜಮುಖಿ ಕಾರ್ಯಕ್ರಮವೊಂದು ನಡೆಯಿತು.
ಕದ್ರಿ ಇವೆಂಟ್ಸ್‌ನ ಮಾಲಕರಾದ ಜಗದೀಶ್ ಕದ್ರಿ ಅವರ ಮುಂದಾಳತ್ವದಲ್ಲಿ, ಕೊಣಾಜೆ ಸಮೀಪದ ಅಸೈಗೋಳಿಯಲ್ಲಿರುವ ಅಭಯ ಆಶ್ರಮದ 90 ಮಂದಿ ಆಶ್ರಮವಾಸಿಗಳಿಗೆ ಅನ್ನದಾನದ ವ್ಯವಸ್ಥೆ ಮಾಡಲಾಯಿತು.



ರಿಷಬ್ ಶೆಟ್ಟಿ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಆಶ್ರಮವಾಸಿಗಳಿಗೆ ಊಟವನ್ನು ವಿತರಿಸಿ ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ಕಿಶೋರ್ ಡಿ.ಕೆ. ಕುಂಪಲ, ಪುರುಷೋತ್ತಮ ಕಲ್ಲಾಪು, ಅರುಣ್ ಶೆಟ್ಟಿ ಮಂಗಳಾದೇವಿ, ಕೌಶಿಕ್, ಪ್ರದೀಪ್ ಕಲ್ಲಡ್ಕ, ಸವಿತ್ ಉಚ್ಚಿಲ, ಗುರುಪ್ರಸಾದ್, ಸಂತೋಷ್ ಶೆಟ್ಟಿ ಹಾಗೂ ಸಚಿನ್ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.


