ಮೆರ್ಲದ ಸತ್ಯೋಲೆ ಸುಗಿಪು. ಭಕ್ತಿಗೀತೆ ನಾಳೆ ಬಿಡುಗಡೆ.

ಉಪ್ಪಳ. ಸರ್ವ ಶಕ್ತಿ ಸ್ವರೂಪಿಣಿ ತಾಯಿ ಕಾಳಿ ಚಾಮುಂಡಿ ದೈವದ ಕುರಿತಾದ ಭಕ್ತಿ ಪ್ರಧಾನವಾದ ಭಕ್ತಿ ಗೀತೆ ” ಮೆರ್ಲದ ಸತ್ಯೋಲೆ ಸುಗಿಪು” ಇದರ ಧ್ವನಿಸುರುಳಿಯ ವಿಡಿಯೋ ಬಿಡುಗಡೆ ನಾಳೆ ರಾತ್ರಿ 7:30 ಕ್ಕೆ ನಡೆಯಲಿದೆ.

ಉಪ್ಪಳ ಮುಳಿಂಜ ಮಹಾನಗರದ ಮುಳಿಂಜ ಫ್ರೆಂಡ್ಸ್ ಕ್ಲಬ್ ನ 17 ನೆ ವಾರ್ಷಿಕೋತ್ಸವ ಹಾಗೂ ಮೊಸರು ಕುಡಿಕೆ ಉತ್ಸವದ ಸಮಾರಂಭದ ವೇದಿಕೆಯಲ್ಲಿ ವಿಡಿಯೋ ಲೋಕಾರ್ಪಣೆಯಾಗಲಿದೆ.ಶ್ರೀ ಅಭಿಷೇಕ್ ಹೊಸಂಗಡಿ ನಿರ್ಮಾಣಕ್ಕೆ ಶ್ರೀ ಸುರೇಶ್ ಕುಮಾರ್ ಮಂಗಲ್ಪಾಡಿ ಯವರ ಸಾಹಿತ್ಯಕ್ಕೆ ಬಹುಭಾಷಾ ಗಾಯಕರಾದ ಶ್ರೀ ಪವನ್ ಕುಮಾರ್ ಹೊಸಂಗಡಿ ಕಂಠ ದಾನ ಮಾಡಿದ್ದಾರೆ.

ಶ್ರೀ ಶ್ರೀನಿವಾಸ ಕರಿಬೈಲ್ ಅವರ ಮೂಲ ಪ್ರೇರಣೆಯೊಂದಿಗೆ ಮೂಡಿಬಂದ ಈ ಹಾಡಿಗೆ ಶ್ರೀ ಹಿಮಕರ ಆಚಾರ್ಯ ಹೊಸಂಗಡಿ ಶ್ರೀ ಹೇಮಂತ್ ಕಡಂಬಾರ್ ವಿಡಿಯೋ ಸಂಕಲನ ಮಾಡಿದ್ದು, ಶ್ರೀ ಫಿರೋಜ್ ಕಾಸರಗೋಡು ಧ್ವನಿ ಸಂಕಲನ ಮಾಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!