
ಕಾಸರಗೋಡು : ಆರು ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಬಳಿಕ ರಸ್ತೆ ದಾಟಲು ಸಾರ್ವಜನಿಕರು ಎದುರಿಸುತ್ತಿದ್ದ ತೀವ್ರ ಸಮಸ್ಯೆಗೆ ಕೊನೆಗೂ ಪರಿಹಾರ ಸಿಗಲಿದೆ.

ಸಾರ್ವಜನಿಕರು, ಶಾಲಾ ಮಂಡಳಿಗಳು ಹಾಗೂ ಸ್ಥಳೀಯ ಸಂಘಟನೆಗಳ ನಿರಂತರ ಮನವಿಗೆ ಸ್ಪಂದಿಸಿ, ಜನಪ್ರತಿನಿಧಿಗಳ ಸತತ ಪ್ರಯತ್ನದ ಫಲವಾಗಿ 5 ಹೊಸ ಕಾಲುದಾರಿ ಮೇಲ್ಸೇತುವೆಗಳ ನಿರ್ಮಾಣ ಕಾರ್ಯ ಆರಂಭಗೊಂಡಿದೆ.

ಹೆದ್ದಾರಿಯ ಇಕ್ಕೆಡೆಗಳಲ್ಲಿ ತಡೆಗೋಡೆ ನಿರ್ಮಿಸಿದ್ದರಿಂದ ಕುನ್ನಿಲ್, ಸಿಪಿಸಿಆರ್‌ಐ, ಅಡ್ಕತ್ತಬೈಲು, ಇಂದಿರಾನಗರ ಹಾಗೂ ನುಳ್ಳಿಪ್ಪಾಡಿ ಪ್ರದೇಶಗಳು ಇಬ್ಬಾಗಗೊಂಡು ಸಂಚಾರಕ್ಕೆ ಜನ ಪರದಾಡುವಂತಾಗಿತ್ತು.

ಸಾರ್ವಜನಿಕರ ಹಿತದೃಷ್ಟಿಯಿಂದ ಅಧಿಕಾರಿಗಳು ಈಗ ಅತ್ಯಾಧುನಿಕ ಮಾದರಿಯ ಮೇಲ್ಸೇತುವೆಗಳ ಕಾಮಗಾರಿಗೆ ಚಾಲನೆ ನೀಡಿದ್ದು, ಶೀಘ್ರದಲ್ಲೇ ಇವು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿವೆ.

