ಕಾಸರಗೋಡು: ಕಳನಾಡಿನ ಚೆಮ್ನಾಡು ವನಿತಾ ಸರ್ವೀಸ್ ಸೊಸೈಟಿಗೆ ನಕಲಿ ಚಿನ್ನವಿಟ್ಟು 4.40 ಲಕ್ಷ ರೂ. ವಂಚಿಸಿದ್ದ ಶಾತಿರ್ ಕಳ್ಳ ಸಾಜುದ್ದೀನ್ (47) ಅಂತಿಮವಾಗಿ ಮೇಲ್ಪರಂಬ ಪೊಲೀಸರ ಅತಿಥಿಯಾಗಿದ್ದಾನೆ.

ಸುಮಾರು 48.21 ಗ್ರಾಂ ನಕಲಿ ಆಭರಣಗಳನ್ನು ಅಡವಿಟ್ಟು ನಾಪತ್ತೆಯಾಗಿದ್ದ ಈತ, ಕೇರಳ-ಕರ್ನಾಟಕದಲ್ಲಿ ತಲೆಮರೆಸಿಕೊಂಡಿದ್ದ.
ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಈ ಖತರ್ನಾಕ್ ಆಸಾಮಿ ವಿರುದ್ಧ ಸುಳ್ಯ, ಪುತ್ತೂರು ಸೇರಿದಂತೆ 9ಕ್ಕೂ ಹೆಚ್ಚು ಕಳವು ಹಾಗೂ ಹಲ್ಲೆ ಪ್ರಕರಣಗಳಿವೆ.

ಬೇರೊಂದು ಕೇಸ್‌ನಲ್ಲಿ ಜೈಲಿನಿಂದ ಹೊರಬರುತ್ತಿದ್ದಂತೆಯೇ ಎಸ್‌ಐ ಅಖಿಲ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

