ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ (AKPA) ಕಾಸರಗೋಡು ವೆಸ್ಟ್ ಯುನಿಟ್ ನೇತೃತ್ವದಲ್ಲಿ ಕೇರಳಪಿರವಿ ದಿನಾಚರಣೆಯನ್ನು ಆಯೋಜಿಸಲಾಯಿತು. ಯುನಿಟ್ ಅಧ್ಯಕ್ಷ ವಸಂತ್ ಕೆರೆಮನೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಹಿರಿಯ ಕಲಾವಿದ ಶ್ರೀ. ಕುಲ್ಸು ಅಬ್ದುಲ್ಲಾ ಅವರನ್ನು ಸನ್ಮಾನಿಸಲಾಯಿತು.

1973 ರಿಂದ ಕಾಸರಗೋಡಿನ ಕುಲ್ಸು ಆರ್ಟ್ಸ್ ಸಂಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಕುಲ್ಸು ಅಬ್ದುಲ್ಲಾ ಅವರು ನಾಟಕ-ರಂಗಸಜ್ಜಿಕೆ ಕ್ಷೇತ್ರಗಳಲ್ಲಿ ನೀಡಿದ ಅಮೂಲ್ಯ ಕೊಡುಗೆಗಳನ್ನು ಪರಿಗಣಿಸಿ ಸನ್ಮಾನಿಸಲಾಯಿತು

ಎಕೆಪಿಎ ಕಾಸರಗೋಡು ವಲಯ ಉಪಾಧ್ಯಕ್ಷ ಸುಬ್ರಹ್ಮಣ್ಯ ಅವರು ಶಾಲು ಹೊದಿಸಿ, ಯುನಿಟ್ ಕಾರ್ಯದರ್ಶಿ ಶಾಲಿನಿ ರಾಜ್ ಸ್ಮರಣಿಕೆ ನೀಡಿದರು.
ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಶ್ರೀ ಕುಲ್ಸು ಅಬ್ದುಲ್ಲಾ ಅವರು ತಮ್ಮ ಕಲಾ ಜೀವನದ ಅನುಭವಗಳನ್ನು ಹಂಚಿಕೊಂಡರು ಮತ್ತು ಎ.ಕೆ.ಪಿ.ಎ ವೆಸ್ಟ್ ಯುನಿಟ್ ನೀಡಿದ ಪ್ರೀತಿಯ ಗೌರವಕ್ಕೆ ಸಂತೋಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎಕೆಪಿಎ ಕಾಸರಗೋಡು ಜಿಲ್ಲಾ ಜತೆ ಕಾರ್ಯದರ್ಶಿ ಮನು ಎಲ್ಲೋರ, ಜಿಲ್ಲಾ ಸಮಿತಿ ಸದಸ್ಯ ಮೈಂದಪ್ಪ ಕೆ. ಎಂ., ವಲಯ ಜತೆ ಕಾರ್ಯದರ್ಶಿ ಗಣೇಶ್ ರೈ, ಯುನಿಟ್ ಸಮಿತಿ ಸದಸ್ಯ ರತೀಶ್ ರಾಮು ಭಾಗವಹಿಸಿದರು.

