ಮಂಜೇಶ್ವರ :ಹೊಸಂಗಡಿ ಓಂ ಶಾಂತಿ ಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಮೋಹಿನಿ ಟೀಚರ್ ವಂದಿಸಿದರು. ಶ್ರೀಮತಿ ಕೃಷ್ಣವೇಣಿ ಟೀಚರ್ ಅವರು ಶಿಕ್ಷಕರನ್ನು ಶಾಲು ಹೊದಿಸಿ ಗೌರವಿಸಿದರು. ಸಭೆಯಲ್ಲಿ ಶ್ರೀಮತಿ ತನುಜಾ ಟೀಚರ್, ಶ್ರೀ ಗಣೇಶ್ ನಾಯಕ್ ಟೀಚರ್ ಹಾಗೂ ಶ್ರೀ ಚಂದ್ರಹಾಸ ಟೀಚರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಹ್ಮಕುಮಾರಿ ವಿಜಯಲಕ್ಷ್ಮಿ ಅಕ್ಕನವರು, “ಮೌಲ್ಯಗಳೇ ಸುಸಂಸ್ಕೃತ ಜೀವನದ ಅಡಿಪಾಯ. ಜೀವನದಲ್ಲಿ ಉಂಟಾಗುವ ದುಃಖ, ಅಶಾಂತಿ, ಒತ್ತಡ ಹಾಗೂ ರೋಗಗಳಿಗೆ ಆಧ್ಯಾತ್ಮಿಕತೆಯ ಕೊರತೆಯೂ ಒಂದು ಪ್ರಮುಖ ಕಾರಣವಾಗಿದೆ. ವಿಟಮಿನ್ ‘ಎ’ ಎಂದರೆ ಆಧ್ಯಾತ್ಮಿಕತೆ” ಎಂದು ತಿಳಿಸಿದರು.
ರಾಜಯೋಗ ಧ್ಯಾನದ ಮೂಲಕ ಜೀವನದ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ, ನೆಮ್ಮದಿ ಹಾಗೂ ಸಂತೋಷದಿಂದ ಜೀವನ ನಡೆಸುವಂತೆ ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಶಿಕ್ಷಕ ವೃಂದದವರನ್ನು ಶಾಲು ಹೊದಿಸಿ ಈಶ್ವರಿಯ ಕಾಣಿಕೆ ನೀಡಿ ಗೌರವಿಸಲಾಯಿತು. ಶ್ರೀಕೃಷ್ಣ ಹಾಗೂ ರಾಧೆಯ ಪುಟಾಣಿ ವೇಷಧಾರಿಗಳಿಗೆ ಮಂಗಳಾ ಅಕ್ಕನವರು, ದೀಪ ಅಕ್ಕನವರು ಹಾಗೂ ಪ್ರೇಮಾ ಅಕ್ಕನವರು ಕಾಣಿಕೆ ನೀಡಿ ಪ್ರೋತ್ಸಾಹಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಈಶ್ವರಿಯ ಪ್ರಸಾದ ವಿತರಿಸಲಾಯಿತು.


