ಮಂಜೇಶ್ವರ: ವಿದ್ಯಾರ್ಥಿಗಳೇ ಮುಂದಿನ ಭವಿಷ್ಯ ಅವರೇ ದೇಶವನ್ನು ಕಟ್ಟುವವರು ಹಾಗೂ ಸುದೃಢಗೊಳಿಸುವವರು ಎಂಬ ಆಶಯದಂತೆ ಕಾಸರಗೋಡು ಜಿಲ್ಲಾಧಿಕಾರಿ ಶ್ರೀ ಅರ್ಜುನ್ ಪಾಂಡ್ಯಂನ್ IAS ಅವರು ಹಮ್ಮಿಕೊಂಡಿರುವ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ನಮಸ್ತೆ ಕಲೆಕ್ಟರ್ ಎಂಬ ಯಶಸ್ವಿ ಕಾರ್ಯಕ್ರಮದ ಅಂಗವಾಗಿ ಸರಕಾರಿ ಪ್ರೌಢಶಾಲೆ ಮೂಡಂಬೈಲು ಇಲ್ಲಿನ ವಿದ್ಯಾರ್ಥಿಗಳೊಂದಿಗೆ ಶ್ರೀಯುತ ಜಿಲ್ಲಾಧಿಕಾರಿಯವರು ಮಾತನಾಡುತ್ತಾ ವಿದ್ಯಾರ್ಥಿಗಳು ಒಂದು ಗುರಿಯನ್ನು ಇಟ್ಟುಕೊಂಡು ದೃಢ ನಿಶ್ಚಯದಿಂದ ಮುಂದೆ ಸಾಗಿದರೆ ನಮ್ಮ ಗುರಿಯನ್ನು ಸುಲಭವಾಗಿ ಸಾಧಿಸಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


ಹಾಗೂ ತಮ್ಮ ಜೀವನದ ಆಗುಹೋಗುಗಳನ್ನು ಯಾವ ರೀತಿಯಲ್ಲಿ ಮೆಟ್ಟಿನಿಂತು ಈ ಹುದ್ದೆಗೆ ಬಂದಿರುತ್ತೇನೆ ಎಂಬುದನ್ನು ತಿಳಿಸಿ ಮಕ್ಕಳಲ್ಲಿ ಒಂದು ರೀತಿಯ ಆಶಾಭಾವನೆಯನ್ನು ಹುಟ್ಟಿ ಹಾಕಿದರು. ವಿದ್ಯಾರ್ಥಿಗಳಾದ ಕುಮಾರಿ ರಂಜಿನಿ, ನಂದಿತಾ, ಫಿದಾ, ತನೀಷ, ರಾಫಿಲ್ ,ರಕ್ಷಿತ್, ಮೊದಲದವರು ಜಿಲ್ಲಾಧಿಕಾರಿಯೊಂದಿಗೆ ಸಂವಾದ ನಡೆಸಲು ನೇತೃತ್ವವಸಿದರು. ಶಾಲಾ ಸ್ಟಾಫ್ ಸೆಕ್ರೆಟರಿ ರಾಜೇಶ್ ಕೊಡ್ಲಮೊಗರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಾಗೂ ಕುಮಾರಿ ಸೀತ ಟೀಚರ್ ನಮಸ್ತೆ ಕಲೆಕ್ಟರ್ ಎಂಬ ಕಾರ್ಯಕ್ರಮದಲ್ಲಿ ಸರಕಾರಿ ಪ್ರೌಢಶಾಲೆ ಮೂಡಂಬೈಲ್ ಶಾಲೆಗೆ ಅವಕಾಶ ಮಾಡಿಕೊಟ್ಟದ್ದಕ್ಕೆ ಜಿಲ್ಲಾಧಿಕಾರಿಗೆ ಹಾಗೂ ಅಲ್ಲಿನ ಸಿಬ್ಬಂದಿ ವರ್ಗದವರಿಗೆ ಧನ್ಯವಾದವನ್ನು ಸಮರ್ಪಿಸಿದರು.


ವಿದ್ಯಾರ್ಥಿ ಯರಾದ ಮೋಕ್ಷ ,ಹರ್ಷಿಕ, ರಿಫಾ, ಅಪ್ಸಾನ, ಸಾತ್ವಿಕ, ಯಶ್ವಿನಿ, ಕೀರ್ತಿ, ಲಕ್ಷ್ಯ ಹಾಗೂ ಕೀರ್ತನ್, ಶಾಲೀಂ, ಮನೀಶ್, ಆಕಾಶ್, ಸಾನ್ವಿತ್, ಇರ್ಷಾದ್, ಬಿತೇಶ್ ಮೋಕ್ಷಿತ್ ಕಾರ್ಯಕ್ರಮ ರಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಯವರು ಪ್ರಮಾನ ಪತ್ರ ನೀಡಿದರು.


