ಮಂಜೇಶ್ವರದ ಡಾನ್ ಬಾಸ್ಕೋ ಶಾಲೆಯಲ್ಲಿ ಡಿಬೇಟ್ ಸ್ಪರ್ಧೆ

ಮಂಜೇಶ್ವರ, ಸೆಪ್ಟೆಂಬರ್ 19: ಡಾನ್ ಬಾಸ್ಕೋ ಸೆಂಟ್ರಲ್ ಸ್ಕೂಲ್ ಮಂಜೇಶ್ವರದಲ್ಲಿ 2026ನೇ ಸಾಲಿನ ಡಿಬೇಟ್ ಸ್ಪರ್ಧೆ ಶನಿವಾರ ನಡೆಯಿತು. “AI – ಕೃತಕ ಬುದ್ಧಿಮತ್ತೆ: ಅನುಗ್ರಹವೋ ಶಾಪವೋ?” ಎಂಬ ವಿಷಯದ ಕುರಿತು ವಾದಪ್ರತಿವಾದ ನಡೆಯಿತು.

ಬೆಳಗ್ಗೆ 10 ಗಂಟೆಗೆ ವಿದ್ಯಾರ್ಥಿಗಳ ಪ್ರಾರ್ಥನಾ ನೃತ್ಯದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶಾಲಾ ಸಂಯೋಜಕಿ ಬಿಂದು ಅಲೆಕ್ಸಾಂಡರ್ ಎಂ.ಸಿ. ಆಗಿ ಕಾರ್ಯನಿರ್ವಹಿಸಿದರು. ಪ್ರಾಂಶುಪಾಲ ಫಾ. ಕೆ.ಸಿ. ಮ್ಯಾಥ್ಯೂ ಅತಿಥಿಗಳನ್ನು ಸ್ವಾಗತಿಸಿದರು. ತುಮಕೂರು ಡಾನ್ ಬಾಸ್ಕೋ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲ ಫಾ. ಜಿನ್ಸ್ ಮಡಪ್ಪಳ್ಳಿ ಎಸ್.ಡಿ.ಬಿ. ಅವರು ಮಾಡರೇಟರ್ ಆಗಿದ್ದರು.

ಪ್ರಸ್ತಾವನೆಯನ್ನು ಬೆಂಬಲಿಸಿ ಸಾನ್ವಿ ವಿ. ಉದಯವರ್, ಮರಿಯಂ ರಿದಾ, ಶಿಕ್ಷಕಿ ಲಕ್ಷ್ಮಿ ಸತ್ಯಪಾಲ್ ಹಾಗೂ ಫಾದಿಲ್ ಶೇಖ್ ವಾದ ಮಂಡಿಸಿದರು. ವಿರೋಧವಾಗಿ ದೇವದತ್ ಪಿ., ಹಿನ್ವ ಕದೀಜಾ, ಆಯಿಷಾ ಅಫಿಯಾ ಹಾಗೂ ಆನ್ ಮರಿಯಾ ರೋಬಿ ತಮ್ಮ ವಾದಗಳನ್ನು ಮಂಡಿಸಿದರು. ಶಿಕ್ಷಕಿಯರಾದ ಅಶಿಂತಾ ಮೊಂಟೆರೊ ಮತ್ತು ಹುಮಾ ಫಾತಿಮಾ ಶೇಖ್ ಪ್ರತಿಕ್ರಿಯಾ ಭಾಷಣ ಮಾಡಿದರು.

ಫಾ. ಇಮ್ಮಾನುಯೆಲ್ ಮೆವಾಡ, ಸ್ನೇಹಾಲಯದ ಫಾ. ಜೋರ್ಜಿ, ವೋರ್ಕಾಡಿ ಸೆಂಟ್ ಮೇರೀಸ್ ಶಾಲೆಯ ಸಿಸ್ಟರ್ ವಿನ್ನಿ ಹಾಗೂ ಗೋವಿಂದ ಪೈ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕಿ ಮೃದೂಲಾ ತೀರ್ಪುಗಾರರಾಗಿದ್ದರು. ನೌಫಲ್ ಮತ್ತು ಗಜಾಲ ಅಬ್ದುಲ್ ಸಲಾಂ ವೀಕ್ಷಕರಾಗಿ, ಪ್ರೀತಾ ಟೈಮ್‌ಕೀಪರ್ ಆಗಿ ಕಾರ್ಯನಿರ್ವಹಿಸಿದರು.

ತೀವ್ರ ವಾದ-ಪ್ರತಿವಾದಗಳ ಬಳಿಕ ಬಳಿಕ ಪ್ರಸ್ತಾವನೆಯನ್ನು ಬೆಂಬಲಿಸಿದ ತಂಡ 37 ಅಂಕಗಳ ಅಂತರದಲ್ಲಿ ಗೆದ್ದು ಚಾಂಪಿಯನ್ ಆಯಿತು.

10ನೇ ತರಗತಿ ವಿದ್ಯಾರ್ಥಿ ಅಲ್ಫಾಸ್ ಮಹಿನ್ ವಂದನಾರ್ಪಣೆ ಸಲ್ಲಿಸಿದರು. ಮಧ್ಯಾಹ್ನ 12.45ಕ್ಕೆ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!