ಮಂಜೇಶ್ವರ: ಭಾರೀ ಪ್ರಮಾಣದ ಎಂಡಿಎಂಎ ಸಹಿತ ಮೂವರು ಯುವಕರ ಬಂಧನ

​ಮಂಜೇಶ್ವರ: ಪೊಲೀಸರು ನಡೆಸಿದ ದಿಢೀರ್ ದಾಳಿಯಲ್ಲಿ ಭಾರೀ ಪ್ರಮಾಣದ ಮಾರಕ ಮಾದಕ ವಸ್ತುವಾದ ಎಂಡಿಎಂಎ ಯೊಂದಿಗೆ ಮೂವರು ಯುವಕರನ್ನು ಬಂಧಿಸಲಾಗಿದೆ.

​ಬಟ್ಟಿಪದವಿನ ಅಲ್ಫತಾಹ್ ಕಾಟೇಜ್‌ನಲ್ಲಿ ನಡೆಸಿದ ದಾಳಿಯಲ್ಲಿ 182.120 ಗ್ರಾಂ ಎಂಡಿಎಂಎ ಹಾಗೂ ನಾಲ್ಕು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

​ಉದ್ಯಾವರ ಬಟ್ಟಿಪದವು ಅಲ್ಫತಾಹ್ ಕಾಟೇಜ್ ನಿವಾಸಿ ಹಾಗೂ ಉದ್ಯಾವರ ಕುಂಡು ಕೊಳಕೆ ಯಾಸೀನ್ ಮಂಜಿಲ್ ನಿವಾಸಿ ಮೊಹಮ್ಮದ್ ಶಿಹಾಬ್ (33), ದಕ್ಷಿಣ ಕನ್ನಡ ಜಿಲ್ಲೆಯ ಗಂಜಿಮಠ ಎಂ. ಮಲ ಕ್ರಾಸ್ ರೋಡ್‌ನ ಮರ್ಹಬಾ ಹೌಸ್‌ನ ಮೊಹಮ್ಮದ್ ಸಫುವಾನ್ (23) ಮತ್ತು ಮೂಡುಬಿದಿರೆ ಕೈಕಂಬ ಗುರುಪುರ ಫಾತಿಮಾ ಅಪಾರ್ಟ್‌ಮೆಂಟ್‌ನ ಮೊಹಮ್ಮದ್ ರಸಲ್ ಅಲಿ (21) ಬಂಧಿತ ಆರೋಪಿಗಳು.

​ರಹಸ್ಯ ಮಾಹಿತಿಯ ಆಧಾರದ ಮೇಲೆ ಮಂಜೇಶ್ವರ ಎಸ್‌ಐ ಜಿಯೋ ಸಪಾನಂದನ್ ಹಾಗೂ ಅವರ ತಂಡ ಈ ಕಾಟೇಜ್‌ ಮೇಲೆ ದಾಳಿ ನಡೆಸಿದೆ.

​ಬಂಧಿತ ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದ್ದು, ಸುದೀರ್ಘ ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣದ ತನಿಖಾ ಉಸ್ತುವಾರಿಯನ್ನು ಮಂಜೇಶ್ವರ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ವಿ. ವಿಷ್ಣುಪ್ರಸಾದ್ ವಹಿಸಿಕೊಂಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!