ಮಂಜೇಶ್ವರ ಉಪಜಿಲ್ಲಾ ಶಾಸ್ತ್ರೋತ್ಸವದಲ್ಲಿ ಜಿಎಲ್‌ಪಿಎಸ್ ವಾಮಂಜೂರು ಶಾಲೆಗೆ ಚಾಂಪಿಯನ್ ಪಟ್ಟ

ಮಂಜೇಶ್ವರ: 2026–27ನೇ ಸಾಲಿನ ಮಂಜೇಶ್ವರ ಉಪಜಿಲ್ಲಾ ಶಾಸ್ತ್ರೋತ್ಸವದ ವರ್ಕ್ ಎಕ್ಸ್‌ಪೀರಿಯನ್ಸ್ ಫೇರ್‌ನಲ್ಲಿ ಜಿಎಲ್‌ಪಿಎಸ್ ವಾಮಂಜೂರು ಶಾಲೆಯ ವಿದ್ಯಾರ್ಥಿಗಳು ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

ಶಾಸ್ತ್ರೋತ್ಸವದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಪ್ರದರ್ಶಿಸಿ ಗಮನ ಸೆಳೆದಿದ್ದಾರೆ. ಸ್ಪರ್ಧೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳು ಟ್ರೋಫಿ ಮತ್ತು ಪ್ರಶಸ್ತಿಗಳೊಂದಿಗೆ ಸಂಭ್ರಮಿಸಿದರು.

ಚಾಂಪಿಯನ್ ಪಟ್ಟದ ಸಂಭ್ರಮದ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಾಲ್ಗೊಂಡ ರ್ಯಾಲಿ ಹೊಸಂಗಡಿ ಪೇಟೆಯವರೆಗೆ ನಡೆಯಿತು.

ಶಾಲೆಯ ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಕರು ಹಾಗೂ ಪೋಷಕರು ಸಂತಸ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಪರಿಶ್ರಮ ಮತ್ತು ಮಾರ್ಗದರ್ಶನ ನೀಡಿದ ಶಿಕ್ಷಕರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!