
ಮಂಜೇಶ್ವರ : ಮಂಜೇಶ್ವರ ಬ್ಲಾಕ್ ವ್ಯಾಪ್ತಿಯಲ್ಲಿ ಬಡ ಜನತೆಗೆ ಸಿಗಬೇಕಾದ ಸಿಗಬೇಕಾದ ಪಿಎಂ ಅವಾಸ್ ಯೋಜನೆಯ 17ಲಕ್ಷ ರೂ ಗಳನ್ನು ಅವ್ಯವಹಾರ ನಡೆಸಿ ದುಡ್ಡು ವಂಚನೆ ಮಾಡಿರುವುದನ್ನು ಸಮಗ್ರ ತನಿಖೆ ನಡೆಸಲು ಬಿಜೆಪಿ ಮಂಡಲ ಸಮಿತಿ ಪ್ರಧಾನ ಮಂತ್ರಿ ಕಚೇರಿಗೆ ದೂರು ನೀಡಿದೆ.. ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷರು ತಿಳಿಸಿದ್ದಾರೆ.

17ಲಕ್ಷ ರೂ ಗಳ ವಂಚನೆ ಅವ್ಯವಹಾರ ಕೇವಲ ಅಧಿಕಾರಿಗಳ ತಲೆದಂಡ ಮಾತ್ರವಲ್ಲ ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸೈಫುಲ್ಲ ತಂಗಳ್ ನೈತಿಕತೆ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಅಗ್ರಹಿಸಿದರು.

ಬಡವರ ಮನೆ ನಿರ್ಮಾಣಕ್ಕೆ ಕೇಂದ್ರ ನೀಡುವ ಹಣ ವನ್ನು ಲಪಡಾಯಿಸಿ ಮುಸ್ಲಿಂ ಲೀಗ್ ಆಡಳಿತ ದ ಬ್ಲಾಕ್ ಹಾಗೂ ಗ್ರಾಮ ಪಂಚಾಯತ್ ಗಳು ಕೊನೆಗೆ ಕೇಂದ್ರ ಸರಕಾರ ಹಣ ನೀಡಿಲ್ಲ ಎಂದು ಸುಳ್ಳು ಹೇಳಿ ಬಡವರ ಮನೆ ನಿರ್ಮಾಣಕ್ಕೂ ಅಡ್ಡಿ ಮಾಡುತ್ತಿದೆ ಇದು ಮುಸ್ಲಿಂ ಲೀಗ್ ಆಡಳಿತದಲ್ಲಿ ಅಜೆಂಡಾ ದ ಭಾಗವೇ ಎಂದು ಬಿಜೆಪಿ ಪ್ರಶ್ನೆಸಿದೆ….

ಪಿಎಂ ಅವಾಸ್ ಯೋಜನೆಯ ಎಲ್ಲಾ ಮೊತ್ತವನ್ನು ಬ್ಲಾಕ್ ಪಂಚಾಯತ್ ಕೂಡಲೇ ಬಿಡುಗಡೆ ಗೊಳಿಸಬೇಕು ಮತ್ತು ಬ್ಲಾಕ್ ಪಂಚಾಯತ್ ಆಡಳಿತ ಸಮಿತಿ ಮತ್ತು ಅಧ್ಯಕ್ಷರು ರಾಜೀನಾಮೆ ನೀಡಿ ಮರ್ಯಾದೆ ಉಳಿಸಿಕೊಳ್ಳಿ ಎಂದು ಬಿಜೆಪಿ ಎಚ್ಚರಿಸಿದೆ…

