ಕಾಸರಗೋಡು :ಫೆಬ್ರವರಿ 22ಭಾನುವಾರ ಬೆಳಿಗ್ಗೆ 7ರಿಂದ ರಾತ್ರಿ 10ಗಂಟೆವರೆಗೆ ನಡೆಯಲಿರುವ ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026.ರ ಆಮಂತ್ರಣ ಪತ್ರಿಕೆ 16.2.2026ಮಂಗಳವಾರ ಬೆಳಿಗ್ಗೆ ಎಡನೀರು ಶ್ರೀ ಮಠದಲ್ಲಿ, ಎಡನೀರು ಮಾಟಾಧಿಪತಿ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಗಳು ಬಿಡುಗಡೆ ಗೊಳಿಸಿ ಶುಭಾಶೀರ್ವಾದ ನೀಡಿದರು. ಭಾನುವಾರ, ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು ಸರ್ವಾಧ್ಯಕ್ಷತೆಯಲ್ಲಿ, ಡಾ. ವಾಮನ್ ರಾವ್ ಬೇಕಲ್ ಸಾರತ್ಯದ ಕನ್ನಡ ಭವನ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.
ಕನ್ನಡ ಭವನದ ಅಂಗ ಸಂಸ್ಥೆಯಾದ “ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವರ್ಷಾಚರಣೆ ಪ್ರಯುಕ್ತ ಪರಿಷತ್ತಿನ ಜಿಲ್ಲಾ ಘಟಕಗಳ ಸಹಕಾರದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ಬೆಳಿಗ್ಗೆ 7ರಿಂದ ಭಜನೆ. 8.30 ಗೆ ಸರ್ವಾಧ್ಯಕ್ಷರ ಮೆರವಣಿಗೆ, 9ಕ್ಕೆ ಉದ್ಘಾಟನೆ. ಶ್ರಿ ಶ್ರೀ ರಮೇಶ ಗುರೂಜಿ, ಗೋವಿನಾಳ ಗದಗ, ಹಾಗೂ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಜಿಗಳಿಂದ ಆಶೀರ್ವಚನ, ಸ್ವಾಮಿಜಿಗಳಿಗೆ ವಿಶೇಷ ಸಮ್ಮೇಳನ ಗೌರವ ಪ್ರದಾನ.. ಮಹಾನ್ ಕವಿ ಸಾಹಿತಿಗಳಿಗೆ “ಕವಿ ಕಾವ್ಯ ವಿಭೂಷಣ ರಾಷ್ಟ್ರೀಯ ಪ್ರಶಸ್ತಿ,. ಉಚಿತ ನೇತ್ರ ತಪಾಸಣಾ ಶಿಬಿರ, ಉಚಿತ ಸಾರ್ವಜನಿಕ ವಾಚನಾಲಯ ಲೋಕಾರ್ಪಣೆ, ಕವಿಗೋಷ್ಠಿ, ವಿಚಾರ ಸಂಕಿರಣ, ನ್ರಿತ್ಯ -ಗಾನ ವೈಭವ, ಪರಿಷತ್ತಿನ ಕಾರ್ಯಕರ್ತ, ಕವಿಗಳಿಗೆ “ಕವಿರತ್ನ ಪ್ರಶಸ್ತಿ “ಕನ್ನಡ ಭವನ ಜಿಲ್ಲಾ ಘಟಕಗಳ ಪದಾಧಿಕಾರಿ ಕನ್ನಡ ಮುಖಂಡರೀಗೆ “ಕನ್ನಡ ಪಯಸ್ವಿನಿ ಪ್ರಶಸ್ತಿ, ಪುಸ್ತಕ ಬಿಡುಗಡೆ ಮುಂತಾದ ಹತ್ತು ಹಲವು ಕಾರ್ಯಕ್ರಮ ಗಳು ಸಮ್ಮೇಳನದ ಭಾಗವಾಗಿ ನಡೆಯಲಿದೆ.
ಕಾರ್ಯಕ್ರಮ ದಲ್ಲಿ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ. ವೆಂಕಟ್ರಮಣ ಹೊಳ್ಳ ಕಾರ್ಯಕ್ರಮದ ರೂಪು ರೇಖೆ ಗಳನ್ನು ವಿವರಿಸಿದರು .ಉಪಾಧ್ಯಕ್ಷ ಶಂಕರ ಜೆ ಪಿ ನಗರ ನಿರೂಪಿಸಿದರು, ಗೌರವಾದ್ಯಕ್ಷ ಪ್ರದೀಪ್ ಬೇಕಲ್, ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ -ಸಂಧ್ಯಾರಾಣಿ ಟೀಚರ್ ಸ್ವಾಮಿಜಿಗಳಿಗೆ ಫಲ ಪುಷ್ಪ ನೀಡಿ ಶುಭಾನುಗ್ರಹ ಬೇಡಿಕೊಂಡರು. ನಿರ್ದೇಶಕ ಜಗನ್ನಾಥ್ ಶೆಟ್ಟಿ ವಂದಿಸಿದರು.