ಶಿವಪ್ರಸಾದ್ ಶೇಟ್‌ಗೆ ತುಳುನಾಡಿನ ಸೂರ್ಯ ಚಂದ್ರರ ಶಾಲು ಹೊದಿಸಿ ಗೌರವ
ಮಂಗಳೂರು: ‘ಗಿವ್ ಬ್ಯಾಕ್ ನಾಗರಿಕ ಅಭಿಯಾನ’ದ ಬೆಂಗಳೂರು ಸ್ಥಾಪಕಾಧ್ಯಕ್ಷ ಹಾಗೂ 2021-22ನೇ ಸಾಲಿನ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಶಿವಪ್ರಸಾದ್ ಶೇಟ್ ಅವರನ್ನು ರಾಜಕೇಸರಿ ಸೇವಾ ಟ್ರಸ್ಟ್‌ನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಂತೋಷ್ ಕುಮಾರ್ ಕೊಲ್ಯ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್ ಕುಲಾಲ್ ಅವರು ತುಳುನಾಡಿನ ಸೂರ್ಯ–ಚಂದ್ರರ ಚಿತ್ತಾರದ ಶಾಲು ಹೊದಿಸಿ ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ರಾಜಕೇಸರಿ ಸೇವಾ ಟ್ರಸ್ಟ್‌ನ ವತಿಯಿಂದ ಮುಂದಿನ ದಿನಗಳಲ್ಲಿ ಕೈಗೊಳ್ಳಲಿರುವ ವಿವಿಧ ಸಾಮಾಜಿಕ ಕಾರ್ಯಗಳ ಕುರಿತು ಶಿವಪ್ರಸಾದ್ ಶೇಟ್…
