ಕಾಸರಗೋಡು :ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಹಿಂಬದಿ ಚಕ್ರ ಸ್ಫೋಟ; 70 ಪ್ರಯಾಣಿಕರು ಪಾರು
ಕಾಸರಗೋಡು : ನೀಲೇಶ್ವರದಿಂದ ಹೊಸದುರ್ಗಕ್ಕೆ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಭೀಕರ ಅವಘಡ ಸಂಭವಿಸಿದೆ. ಬಸ್ ಹೊಸದುರ್ಗ ಸೌತ್ ತಲುಪುತ್ತಿದ್ದಂತೆ ಹಿಂಭಾಗದ ಚಕ್ರ ಭಾರೀ ಶಬ್ದದೊಂದಿಗೆ ದಿಢೀರ್ ಸ್ಫೋಟಗೊಂಡಿದೆ. ಇದರ ತೀವ್ರತೆಗೆ ಬಸ್‌ನ ಅಡಿಭಾಗದ ಪ್ಲಾಟ್‌ಫಾರ್ಮ್ ಕಿತ್ತುಬಂದಿದ್ದು, ಹಿಂಭಾಗದ ಸೀಟಿನಲ್ಲಿದ್ದ ನೀಲೇಶ್ವರ ನಿವಾಸಿ ಎಂ.ಕೆ. ಕುಂಞಾಯಿಷ (39) ಅವರ ಕಾಲಿಗೆ ತೀವ್ರ ಪೆಟ್ಟಾಗಿದೆ. ಅಡಿಭಾಗದಲ್ಲಿ ಕಾಲು ಸಿಲುಕಿ ಎಡಕಾಲಿನ ಮೂಳೆ ಮುರಿದಿದ್ದು, ತಕ್ಷಣವೇ ಅವರನ್ನು ಹೊಸದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದಾಗ ಬಸ್‌ನಲ್ಲಿ ಸುಮಾರು 70 ಪ್ರಯಾಣಿಕರಿದ್ದು,…
