ಮಂಗಳೂರು: Lions Clubs Internationalನ ಲಯನ್ಸ್ ಜಿಲ್ಲೆ 317 ಡಿ, ಪ್ರಾಂತ್ಯ 2ರ “ಗ್ರಂಥ” ಪ್ರಾಂತೀಯ ಸಮ್ಮಿಲನವು ಮಾರ್ಚ್ 1 ರಂದು ಮಂಗಳೂರಿನ ಪಿಲಿಕುಳ ಸೌಟ್ಸ್ ಭವನದಲ್ಲಿ ನಡೆಯಲಿದ್ದು ಇದಕ್ಕೆ Lions Club Mangalore Ashoknagar ಹಾಗೂ ಪ್ರಾಂತ್ಯ 2ರ ಇತರ ಲಯನ್ಸ್ ಕ್ಲಬ್‌ಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು PMJF-D2 ಪ್ರಾದೇಶಿಕ ಅಧ್ಯಕ್ಷರಾದ ಲಯನ್ ಚರಣ್ ಆಳ್ವಾ ತಿಳಿಸಿದರು.
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಾರ್ಯಕ್ರಮಕ್ಕೆ ಕದ್ರಿ ದೇವಾಲಯದ ಅರ್ಚಕರಾದ ಕೃಷ್ಣ ಅಡಿಗ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಖ್ಯಾತ ವಾಗ್ಮಿ ದಾಮೋದರ ಶರ್ಮ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಜೊತೆಗೆ ಡಿಸ್ಟ್ರಿಕ್ಟ್ ಗವರ್ನರ್ ಲಯನ್ ಕುಡ್ಪಿ ಅರವಿಂದ ಶೆಣೈ ಸಹಿತ ಇತರ ಗಣ್ಯರ ಉಪಸ್ಥಿತರಿರುವರು ಎಂದರು .
ಕಾರ್ಯಕ್ರಮದಲ್ಲಿ ಈ ಬಾರಿ ಎರಡು ಶಾಶ್ವತ ಸೇವಾ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷ ಚೇತನ ಮಕ್ಕಳಿಗಾಗಿ ಸೇವಾ ಭಾರತಿಯ ಮಾಧವವನ ಕ್ಯಾಂಪಸ್‌ನಲ್ಲಿ ಆಟೋಪಕರಣಗಳ ವ್ಯವಸ್ಥೆ ಮತ್ತು ಐತಿಹಾಸಿಕ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಭವ್ಯ ಪ್ರವೇಶ ದ್ವಾರ ನಿರ್ಮಾಣ ಕಾರ್ಯ . ಪ್ರವೇಶ ದ್ವಾರದ ಉದ್ಘಾಟನೆಯನ್ನು ದೇವಸ್ಥಾನದ ಆಡಳಿತ ಟ್ರಸ್ಟಿ ಡಾ. ಎ. ಜೆ. ಶೆಟ್ಟಿ ಅದೇ ದಿನ ಬೆಳಿಗ್ಗೆ ನಡೆಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ನರೇಶ್ , ಸುನಿಲ್ ಕುಮಾರ್ , ಲೋಕೇಶ್ ಶೆಟ್ಟಿ , ಮನೋಹರ್ ಶೆಟ್ಟಿ ಸಹಿತ ಇನ್ನಿತ್ತರರು ಉಪಸ್ಥಿತರಿದ್ದರು .