ಮಂಗಳೂರು:ಜೈನ ಧರ್ಮದ ಮಹಾನ್ ತೀರ್ಥಂಕರರಾದ ಭಗವಾನ್ ಶ್ರೀ ಮಹಾವೀರರ 2625ನೇ ಜನ್ಮ ಕಲ್ಯಾಣೋತ್ಸವವನ್ನು ಮಂಗಳೂರಿನ ಬಜಿಲಕೇರಿ ಶ್ರೀ ಆದೀಶ್ವರ ಸ್ವಾಮಿ ಜೈನ ಬಸದಿಯಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು.ನಗರದ ಬಸ್ತಿ ಹಿತ್ಲು ಪ್ರದೇಶದಲ್ಲಿರುವ ಬಸದಿ ಮಂದಿರದಲ್ಲಿ ಸೋಮವಾರ ನಡೆದ ಈ ಕಾರ್ಯಕ್ರಮದಲ್ಲಿ ಬಹು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಬಸದಿಯಲ್ಲಿ ಮುಂಜಾನೆಯಿಂದಲೇ ಧಾರ್ಮಿಕ ಕಾರ್ಯಕ್ರಮ ಆಚರಣೆಯ ಭಾಗವಾಗಿ ವಿಶೇಷ ಪೂಜೆ, ಅಭಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಶಾಂತಿನಾಥ ಸ್ವಾಮಿಗೆ ಕ್ಷೀರಾಭಿಷೇಕ, ಅಗ್ರೋದಕ ಮೆರವಣಿಗೆ ಭಗವಾನ್ ಶ್ರೀ ಮಹಾವೀರ ಸ್ವಾಮಿಯ ಜನ್ಮ ಕಲ್ಯಾಣ, ದ್ರವ್ಯಾಭಿಷೇಕಗಳು ಬಾಲಕ ನಾಮಕರಣೋತ್ಸವ ವಿಧಿವಿಧಾನಗಳು ನಡೆದವು . ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಗಳಾದ ದರ್ಶನ್ ಹೆಚ್ ವಿ , ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ್ ಕಾಮತ್ , ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣದ ಅಧ್ಯಕ್ಷೆ ಲಾವಣ್ಯ ಬಲ್ಲಾಳ್ , ಮಂಗಳೂರು ಜೈನ ಸೊಸೈಟಿಯ ಗೌರವಾಧ್ಯಕ್ಷ ಸುರೇಶ್ ಬಲ್ಲಾಳ್ , ಜೈನ್ ಸೊಸೈಟಿಯ ಅಧ್ಯಕ್ಷ ಪುಷ್ಪರಾಜ್ ಜೈನ್ ಸಹಿತ ಅನೇಕ ಮಂದಿ ಗಣ್ಯರು ಶ್ರೀ ದೇವರ ದರ್ಶನವನ್ನು ಪಡೆದರು .
ಇದೇ ಸಂದರ್ಭದಲ್ಲಿ ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ. ಹಾಗೂ ಜೈನ ಸೊಸೈಟಿ ಮಂಗಳೂರು ವತಿಯಿಂದ ಭಗವಾನ್ ಮಹಾವೀರ ಜಯಂತಿ ಆಚರಣೆ ಕಾರ್ಯಕ್ರಮ ಶ್ರೀ ಕ್ಷೇತ್ರದ ಪರಿಸರದಲ್ಲಿ ನಡೆಯಿತು .ಈ ಸಂದರ್ಭದಲ್ಲಿ ಮಹಾವೀರರ ತತ್ವಗಳು—ಅಹಿಂಸೆ, ಸತ್ಯ ಮತ್ತು ಸರಳ ಜೀವನದ ಸಂದೇಶಗಳನ್ನು ಭಕ್ತರಿಗೆ ನೀಡಲಾಯಿತು. ಮಹಾವೀರ ಜಯಂತಿ ಆಚರಣೆ ಮಂಗಳೂರಿನಲ್ಲಿ ಭಕ್ತಿ ಮತ್ತು ಸಂಭ್ರಮದ ವಾತಾವರಣದಲ್ಲಿ ನೆರವೇರಿತು.
ಶ್ರೀ ಸನ್ನಿಧಿಯಲ್ಲಿ ಆದಿನಾಥ ಸ್ವಾಮಿ ,ಶಾಂತಿನಾಥ , ಮಹಾವೀರ ಸ್ವಾಮಿ , ಮಲ್ಲಿನಾಥ ಸ್ವಾಮಿ ,ಸರಸ್ವತಿ ದೇವಿ , ಪದ್ಮಾವತಿ ದೇವಿ ,
ಕ್ಷೇತ್ರಪಾಲ , ನಾಗದೇವರು , ಬ್ರಹ್ಮ ದೇವರು ಗಳಿಗೆ ವಿಶೇಷ ಪೂಜೆ ನಡೆಯಿತು .