ಹಿರಿಯ ಚೇತನ ಇಂದಿರಾ ರೈ ಮಾಯಿಪ್ಪಾಡಿಗುತ್ತು ನಿಧನ: ಕಂಬನಿ ಮಿಡಿದ ಬಂಧುಮಿತ್ರರು

ಮಂಜೇಶ್ವರ : ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯರಾಗಿದ್ದ, ಕಾಸರಗೋಡಿನ ಹಿರಿಯ ವ್ಯಕ್ತಿತ್ವ, ಮಾಜಿ ಸಂಸದ ಎಂ. ರಾಮಣ್ಣ ರೈ ಅವರ ಸಹೋದರಿ ಹಾಗೂ ಕುಂದ್ಲಾಜೆ ಪಂಚಾಯಿತಿಯ ಮಾಜಿ ಸದಸ್ಯೆ ಇಂದಿರಾ ರೈ ಮಾಯಿಪ್ಪಾಡಿಗುತ್ತು ಅವರು ಇಂದು ಬೆಳಿಗ್ಗೆ ಅಲ್ಪಕಾಲದ ಅನಾರೋಗ್ಯದ ಕಾರಣದಿಂದ ದೈವಾಧೀನರಾಗಿದ್ದಾರೆ.

​ಪುತ್ರಕಳ ದಿ. ರಾಘವ ರೈ ಅವರ ಧರ್ಮಪತ್ನಿಯಾಗಿದ್ದ ಇಂದಿರಾ ರೈ ಅವರು, ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೂಲಕ ಸಮಾಜದಲ್ಲಿ ಗೌರವಾನ್ವಿತ ಸ್ಥಾನವನ್ನು ಪಡೆದಿದ್ದರು.

ಮೃತರು ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಪುತ್ರರಾದ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ನಿವೃತ್ತ ಅಧ್ಯಾಪಕ ವಿಶಾಕ್ಷ ಪುತ್ರಕಳ, ಕಾಸರಗೋಡು ಸೇವಾ ಸಹಕಾರಿ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ಎಂ. ಅಶೋಕ ರೈ, ಹಾಗೂ ಪುತ್ರಿ ಜಯಶ್ರೀ ಆಳ್ವ ಅವರನ್ನು ಅವರು ಅಗಲಿದ್ದಾರೆ.
​ಅಳಿಯ ಸುರೇಂದ್ರ ಆಳ್ವ ಬಾಲುಕ್ಕೇರಿ, ಸೊಸೆಯಂದಿರಾದ ಶ್ರೀಲತಾ ಕೆ., ಚಿತ್ರಕಲಾ ಎ. ರೈ, ಪ್ರವೀಣ ಕುಮಾರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ ಇಂದಿರಾ ರೈ ಅವರ ನಿಧನಕ್ಕೆ ಗಣ್ಯರು ಹಾಗೂ ಹಿತೈಷಿಗಳು ಕಂಬನಿ ಮಿಡಿದಿದ್ದಾರೆ.

ಇಂದು ಮಧ್ಯಾಹ್ನ 3 ಗಂಟೆಯವರೆಗೆ ಕಾಸರಗೋಡಿನ ಕೋಟೆಕಣಿಯಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಬಳಿಕ ಇಂದು ಸಂಜೆ, ವಿಶಾಲಾಕ್ಷ ಪುತ್ರಕಳ ಅವರ ಕುದ್ರೆಪ್ಪಾಡಿಯಲ್ಲಿರುವ ನಿವಾಸದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!