ಅಂಚೆ ಕಚೇರಿ ನೇಮಕಾತಿ, ಅರ್ಜಿದಾರರ ಸಮಸ್ಯೆಗಳನ್ನು ಬಗೆಹರಿಸಬೇಕು : ಯೂತ್ ಕಾಂಗ್ರೆಸ್

ಮಂಜೇಶ್ವರ : ಅಂಚೆ ಕಚೇರಿಯ ನೇಮಕಾತಿ ಸಂಬಂಧಿಸಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಭಾಷಾ ಅಲ್ಪಸಂಖ್ಯಾತ ಉದ್ಯೋಗರ್ಥಿಗಳು ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಕನ್ನಡ ಮಾಧ್ಯಮ ಕಲಿತ ಉದ್ಯೋಗಾರ್ಥಿಗಳು ಅರ್ಜಿ ಸಲ್ಲಿಸುವಾಗ ಭಾಷೆ ಮಲಯಾಳಂನ ಬದಲು ಕಲಿತ ಭಾಷೆಯಾದ ಕನ್ನಡ ಆಯ್ಕೆ ಮಾಡುವಾಗ ರಾಜ್ಯ ಕೇರಳದ ಬದಲು ಕರ್ನಾಟಕ ರಾಜ್ಯ ಎಂದು ತೋರಿಸುತ್ತದೆ,

ಇದು ಕನ್ನಡ ಉದ್ಯೋಗಾರ್ಥಿಗಳ ಒಂದು ಸಮಸ್ಯೆ ಮಾತ್ರವಲ್ಲದೆ ಕೇರಳದ ಕಾಸರಗೋಡಿನ ಗಡಿ ಪ್ರದೇಶದ ಕನ್ನಡಿಗರು ಅಂಚೆ ಕಚೇರಿಯಲ್ಲಿ ಉದ್ಯೋಗ ಪಡೆಯುವುದಕ್ಕೆ ವಂಚಿತರಾಗಿದ್ದಾರೆ. ಅಂಚೆ ಇಲಾಖೆಯ ಆನ್ ಲೈನ್ ವೆಬ್ ಸೈಟ್ ನಲ್ಲಿ ಬದಲಾವಣೆ ಅನಿವಾರ್ಯವೆಂದು ಯೂತ್ ಕಾಂಗ್ರೆಸ್ ಮಂಜೇಶ್ವರ ನಿಯೋಜಕ ಮಂಡಲ ಸಮಿತಿಯು ಸಂಬಂಧ ಪಟ್ಟವರು ಈ ಸಮಸ್ಯೆ ಪರಿಹರಿಸಬೇಕೆಂದು ಅಗ್ರಹಿಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!