ಕಾಸರಗೋಡು:ಶಿವಶಕ್ತಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್, ವಿವೇಕಾನಂದ ನಗರ ಮುಚ್ಚೇರಿ, ನವದುರ್ಗಾ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಬೀರಂಗೋಳ್, ಅಂಬಾ ಭವಾನಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಅಂಜಿಕಾನಗರ, ವಿವೇಕಾನಂದ ಸಂಘ ಕುಂಟಾರು ಹಾಗೂ ಕೇಸರಿ ಫ್ರೆಂಡ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಕುಂಟಾರು ಇವರ ಸಹಯೋಗದಲ್ಲಿ ಶ್ರೀ ಮರವಂತೆ ಇವೆಂಟ್ಸ್ ವತಿಯಿಂದ ‘ಕೃಷಿ ಹಬ್ಬ ಹಾಗೂ ಆಹಾರ ಮೇಳ’ವನ್ನು ಆಗಸ್ಟ್ 7, 8 ಮತ್ತು 9ರಂದು ಮುಳ್ಳೇರಿಯದ ಗಣೇಶ್ ಕಲಾ ಮಂದಿರದಲ್ಲಿ ಆಯೋಜಿಸಲಾಗಿದೆ.

ಕೃಷಿಯ ಮಹತ್ವವನ್ನು ಜನರಿಗೆ ಪರಿಚಯಿಸುವ ಹಾಗೂ ಸ್ಥಳೀಯ ಕೃಷಿ ಉತ್ಪನ್ನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸಿರುವ ಈ ಮೇಳದಲ್ಲಿ ಕೃಷಿ, ಆಹಾರ ಮತ್ತು ಗೃಹ ಉತ್ಪನ್ನಗಳಿಗೆ ಸಂಬಂಧಿಸಿದ ವಿವಿಧ ಮಳಿಗೆಗಳು ಸಾರ್ವಜನಿಕರ ಗಮನ ಸೆಳೆಯಲಿವೆ.
ಮೇಳದಲ್ಲಿ ಕೃಷಿ ಸಲಕರಣೆಗಳು, ವಿವಿಧ ಆಹಾರ ಮಳಿಗೆಗಳು, ತರಕಾರಿ ಬೀಜಗಳು, ಹೂವಿನ ಕಸಿ ಗಿಡಗಳು, ಆಯುರ್ವೇದಿಕ್ ಉತ್ಪನ್ನಗಳು, ಗೃಹ ತಯಾರಿತ ಆಹಾರ ಮತ್ತು ಇತರ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಇರಲಿದೆ.

ಇದರೊಂದಿಗೆ ಕಾರ್ಯಕ್ರಮದ ಪ್ರಚಾರದ ಅಂಗವಾಗಿ ಆಯೋಜಕರು ವಿಶೇಷ ಸ್ಪರ್ಧೆಯನ್ನೂ ಘೋಷಿಸಿದ್ದು, ಕಾರ್ಯಕ್ರಮದ ಪೋಸ್ಟರ್ ಅನ್ನು ವಾಟ್ಸಾಪ್ ಸ್ಟೇಟಸ್, ಇನ್‌ಸ್ಟಾಗ್ರಾಂ ಅಥವಾ ಫೇಸ್‌ಬುಕ್‌ನಲ್ಲಿ ಹಂಚಿ ಅತಿ ಹೆಚ್ಚು ವೀಕ್ಷಣೆ ಪಡೆದವರು ಅದರ ಸ್ಕ್ರೀನ್‌ಶಾಟ್ ಅನ್ನು 9482189216 ಸಂಖ್ಯೆಗೆ ಕಳುಹಿಸಬಹುದು. ಅತಿ ಹೆಚ್ಚು ವೀಕ್ಷಣೆ ಪಡೆದ ಸ್ಪರ್ಧಿಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೃಷಿ ಹಬ್ಬ ಹಾಗೂ ಆಹಾರ ಮೇಳವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.


