ಮೊನಾಲಿಸಾ ಇಸ್ ಇನ್ ಟ್ರಬಲ್ ಚಿತ್ರದ ನಾಯಕಿ ವಿನುತಾ ಸಿ. ನಾಯ್ಕ್ ರವರಿಗೆ ಕಲಾ ರತ್ನ ಪ್ರಶಸ್ತಿ-2026

ಇತ್ತೀಚೆಗೆ ಮೇ 15 ರಿಂದ 17 ರವರೆಗೆ ಮಂಗಳೂರಿನ ಭಾರತ್ ಸಿನಿಮಾ ಚಿತ್ರ ಮಂದಿರದಲ್ಲಿ 3 ದಿನಗಳಲ್ಲಿ ಹೌಸ್ ಫುಲ್ ಆಗಿ 8 ಪ್ರದರ್ಶನ ಕಂಡ ಕನ್ನಡದ ಕರಾವಳಿಯ ಮೊಟ್ಟಮೊದಲ ಟೆಲಿ ಮೂವಿ ಮೊನಾಲಿಸಾ ಇಸ್ ಇನ್ ಟ್ರಬಲ್ ಈ ಚಿತ್ರದ ನಾಯಕಿ ವಿನುತಾ ಸಿ. ನಾಯ್ಕ್ ಅವರಿಗೆ *ಕಲಾ ರತ್ನ ಪ್ರಶಸ್ತಿ -2026 ಲಭಿಸಿದೆ.

ಬೃಂದಾವನ್ N ಶೆಟ್ಟಿ ನಿರ್ದೇಶನದ, ನವೀನ್ ಕುಮಾರ್ ಶೆಟ್ಟಿ ನಿರ್ಮಾಣದ, ಶ್ರೇಯಸ್ ಕುಮಾರ್ ಫರಂಗಿ ಪೇಟೆ ಇವರು ವಿಭಿನ್ನವಾಗಿ, ವಿಶಿಷ್ಟವಾಗಿ ಪ್ರಸ್ತುತ ಶೈಕ್ಷಣಿಕ ವಿಷಯಕ್ಕೆ ವಿಶೇಷವಾಗಿ (ಮಕ್ಕಳು ಹಾಗೂ ಪೋಷಕರಿಗೆ) ಸಂಬಂಧಪಟ್ಟಂತೆ ವಾಸ್ತವ ಸಮಾಜಜಕ್ಕೆ ಹಿಡಿದ ಕೈಗನ್ನಡಿಯಂತೆ ಬಹಳ ಮನೋವೈಜ್ಞಾನಿಕವಾಗಿ ಚಿತ್ರಿಸಿರುವ ಇಂದಿನ ಎಲ್ಲಾ ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರೂ ನೋಡಲೇ ಬೇಕಾದ ಅಪರೂಪದ ಸಿನಿಮಾ ಮೊನಾಲಿಸಾ ಇಸ್ ಇನ್ ಟ್ರಬಲ್ ಈ ಚಿತ್ರದಲ್ಲಿ ನಟಿಸಿರುವ ಕಥಾನಾಯಕಿ ಕು ll ವಿನುತಾ ಸಿ ನಾಯ್ಕ್ ರವರು ವಿಶಿಷ್ಟ, ವಿಭಿನ್ನ ಪಾತ್ರದಲ್ಲಿ ಅಭಿನಯಿಸಿರುವ ಚೊಚ್ಚಲ ಸಿನಿಮಾ.ಇವರ ಕಲಾ ಪ್ರತಿಭೆಯನ್ನು ಗುರುತಿಸಿ ಮಂಗಳೂರಿನ ಅತ್ತಾವರದಲ್ಲಿರುವ ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕಂಪನಿಯಿಂದ ಕೊಡ ಮಾಡುವ ಪ್ರತಿಷ್ಟಿತ ಪ್ರಶಸ್ತಿ ಕಲಾ ರತ್ನ -2026 ಲಭಿಸಿದೆ.

ಇತ್ತೀಚಿಗೆ ಮಂಗಳೂರಿನ ಮ್ಯಾಕ್ಸ್ ಇನ್ಶೂರೆನ್ಸ್ ಕಂಪನಿಯ ಸಭಾಂಗಣದಲ್ಲಿ ಜರುಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಸ್ಥೆಯ ಮ್ಯಾನೇಜರ್ ಶ್ರೀಮತಿ ದಿವ್ಯಾ ಮ್ಯಾಡಮ್, ಶ್ರೀ ಪ್ರಜ್ವಲ್ ಹಾಗೂ ಅನೇಕ ಪ್ರಮುಖ ಗಣ್ಯಸಮ್ಮುಖದಲ್ಲಿ ಕಲಾ ರತ್ನ -2026 ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕು ll ವಿನುತಾ ಸಿ. ನಾಯ್ಕ್ ಅವರು ನಿಟ್ಟೆ ಡಾ ll ಎನ್. ಎಸ್. ಎ. ಎಂ. ಪ. ಪೂ. ಕಾಲೇಜಿನ ಹಿಂದಿ ಅಧ್ಯಾಪಕಾರದ ಶಿಕ್ಷಾ ರತ್ನ ಶ್ರೀ ಚಂದ್ರ ನಾಯ್ಕ್ ಹಾಗೂ ಶ್ರೀಮತಿ ವಾಣಿಶ್ರೀ ದಂಪತಿಗಳ ಪುತ್ರಿ,ನಿಟ್ಟೆ ಕಾಲೇಜಿನ ಪೂರ್ವ ವಿದ್ಯಾರ್ಥಿನಿ ಹಾಗೂ ಪ್ರಸ್ತುತ ಮಂಗಳೂರಿನ SDM ಕಾಲೇಜಿನಲ್ಲಿ ಕಾನೂನು ಪದವಿ ಅಧ್ಯಯನ ಮಾಡುತ್ತಿದ್ದಾರೆ. ಬಾಲ್ಯದಿಂದಲೇ ಭರತನಾಟ್ಯ, ಸಂಗೀತ, ನೃತ್ಯ, ಅಭಿನಯದಲ್ಲಿ ಆಸಕ್ತಿಯುಳ್ಳ
ಇವರ ಭವಿಷ್ಯ ಉಜ್ವಲವಾಗಲಿ ಸಿನಿಮಾ, ಕಲಾ ಕ್ಷೇತ್ರದಲ್ಲಿ ಉತ್ತಮವಾದ ಸಾಧನೆ ಮಾಡಲಿ ಎಂದು ಹಿರಿಯ -ಕಿರಿಯ ಅಭಿಮಾನಿಗಳು ಹಾರೈಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!