ಕಾಸರಗೋಡು : ಕೂಡ್ಲು ಭಗವತಿನಗರದಲ್ಲಿ ಭಾನುವಾರ ಮಧ್ಯಾಹ್ನ ಕಟ್ಟಡ ತೆರವುಗೊಳಿಸುವ ಸಂದರ್ಭದಲ್ಲಿ ಕಾಂಕ್ರೀಟ್ ಚಾವಣಿ ಕುಸಿದು ಬಿದ್ದು ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.

ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಗೋಡ್ ಮೂಲದ ವೈಶಾಖ್ ಚಂದ್ರ (35) ಸಾವನ್ನಪ್ಪಿದ ದುರ್ದೈವಿ.
ಉದ್ಯೋಗ ನಿಮಿತ್ತ ಹಾಗೂ ಸಂಬಂಧಿಕರ ಹಳೆ ಮನೆಯನ್ನು ಕೆಡವಲು ನೆರವಾಗಲು ಇವರು ಪಾಲಕ್ಕಾಡ್‌ನಿಂದ ಕಾಸರಗೋಡಿಗೆ ಬಂದಿದ್ದರು.

ಕಾಮಗಾರಿ ನಡೆಸುತ್ತಿದ್ದ ವೇಳೆ ತಡೆಗೋಡೆ ಹಾಗೂ ಮೇಲ್ಛಾವಣಿ ಏಕಾಏಕಿ ಕುಸಿದು ಬಿದ್ದ ಪರಿಣಾಮ ವೈಶಾಖ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಥಳದಲ್ಲಿದ್ದವರು ತಕ್ಷಣವೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವು ಸಂಭವಿಸಿದೆ.
ಕಟ್ಟಡ ತೆರವು ಕಾರ್ಯದ ವೇಳೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

