SIR ವಿರುದ್ಧದ ಕಾಂಗ್ರೆಸ್ ನಿಲುವು ಇಬ್ಬಂದಿತನ: ಎಂ.ಎಲ್. ಅಶ್ವಿನಿ

ಕಾಸರಗೋಡು: ಜನತೆ ಸಂಪೂರ್ಣವಾಗಿ ತಿರಸ್ಕರಿಸಿದ ನಿರಾಶೆಯೇ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಒಳಗೊಂಡ ಇಂಡಿಯಾ ಮೈತ್ರಿಕೂಟಕ್ಕಿದ್ದು, ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯು ಈ ನಿರಾಶೆಯ ಭಾಗವಾಗಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು. ಬಿಜೆಪಿ ಕಾಸರಗೋಡು ಮಂಡಲ ಸಮಿತಿಯ ವತಿಯಿಂದ ಆಯೋಜಿಸಲಾದ ಕಲ್ಲಟ್ರ ಮಾಹಿನ್ ಶಾಸಕರ ಕಚೇರಿ ಮಾರ್ಚ್ ಅನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದ ಅವಧಿಯಲ್ಲಿ ಎಂಟು ಬಾರಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಜಾರಿಗೊಳಿಸಲಾಗಿದೆ. 13.3 ಕೋಟಿ ನಾಗರಿಕರಿಗೆ ಮತದಾನದ ಹಕ್ಕು ನಷ್ಟವಾಗಿದೆ ಎಂಬ ಪ್ರಚಾರವು ಸುಳ್ಳು ಎಂದು ಚುನಾವಣಾ ಆಯೋಗದ ಅಂಕಿಅಂಶಗಳು ಸ್ಪಷ್ಟಪಡಿಸುತ್ತವೆ ಎಂದೂ ಅವರು ತಿಳಿಸಿದರು.

ತಿಂಗಳ ಮಾಮೂಲಿ (ಮಾಸಪ್ಪಡಿ) ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ ಸಾಕ್ಷ್ಯಾಧಾರಗಳ ಆಧಾರದಲ್ಲಿ ಅಂತಿಮವಾಗಿ ರಾಜ್ಯ ವಿಜಿಲೆನ್ಸ್ ಪ್ರಕರಣ ದಾಖಲಿಸಬೇಕಾಗಿ ಬಂತು ಎಂದು ಅಶ್ವಿನಿ ಬೆಟ್ಟುಮಾಡಿದರು. ಭ್ರಷ್ಟಾಚಾರ ಪ್ರಕರಣದಲ್ಲಿ ಒಂದನೇ ಆರೋಪಿಯಾಗಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆಗೆ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಮತ್ತು ಇತರ ಸಚಿವರು ಹಾಗೂ ಶಾಸಕರು ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಪ್ರತಿಭಟನೆಗೆ ಇಳಿದಿರುವುದು ವಿಪರ್ಯಾಸ ಎಂದು ಅವರು ವ್ಯಂಗ್ಯವಾಡಿದರು.

150 ದಿನ ಪೂರೈಸುವಾಗ ವಿ.ಡಿ. ಸತೀಶನ್ ಅವರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಜನತೆ ಮೌಲ್ಯಮಾಪನ ಮಾಡಿದ್ದಾರೆ. ಎಲ್‌ಡಿಎಫ್–ಯುಡಿಎಫ್ ಮೈತ್ರಿಕೂಟಗಳು ಕೇರಳದ ಹೊರಗೆ ಮಾತ್ರವಲ್ಲದೆ, ಕೇರಳದ ಒಳಗೂ ಒಳ ಒಪ್ಪಂದ ಮಾಡಿಕೊಂಡಿರುವುದರ ಸೂಚನೆಗಳು ಕಾಣಿಸುತ್ತಿವೆ ಎಂದೂ ಅಶ್ವಿನಿ ಸೇರಿಸಿದರು.ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು ಅಧ್ಯಕ್ಷತೆ ವಹಿಸಿದ್ದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್, ಜಿಲ್ಲಾ ಸೆಲ್ ಸಂಯೋಜಕ ಸುಕುಮಾರ್ ಕುದ್ರೇಪಾಡಿ, ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜ್ಞಾನಿ ಶಾನ್‌ಭಾಗ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ರೈ, ದಿವ್ಯಾ ಸಂದೀಪ್, ಖಜಾಂಚಿ ಹರೀಶ್ ಕೆ.ಆರ್., ಅನಿತಾ ಆರ್. ನಾಯ್ಕ್, ಟಿ.ವಿ. ಮುರಳಿ, ರಾಮ್ ಮೋಹನ್ ಭಾಗವಹಿಸಿದ್ದರು. ಕಾಸರಗೋಡು ನಗರಸಭೆ ಹಾಗೂ ಮಧೂರು, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್‌ಗಳ ಪದಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾರ್ಚ್‌ನಲ್ಲಿ ಪಾಲ್ಗೊಂಡರು.

SHARE
Loading spinner

Leave a Reply

Your email address will not be published. Required fields are marked *

error: Content is protected !!