AIKMCC ಕಾರ್ಯಕರ್ತರ ಸಭೆ ಪ್ಯಾಲಿಯೇಟಿವ್ ಕೇರ್ ಘಟಕ ಆರಂಭಕ್ಕೆ ಸಲಹೆ, OPPAM ಸುರಕ್ಷಾ ಯೋಜನೆಯ ಮಹತ್ವದ ಕುರಿತು ಮಾಹಿತಿ

ಪುತ್ತೂರು: AIKMCC ಕೇಂದ್ರ ಸಮಿತಿ, ರಾಜ್ಯ ಸಮಿತಿ, ಜಿಲ್ಲಾ ಸಮಿತಿ ಹಾಗೂ ವಿವಿಧ ಏರಿಯಾ ಸಮಿತಿಗಳ ನಾಯಕರು ಮತ್ತು ಕಾರ್ಯಕರ್ತರ ಸಭೆಯು ಪುತ್ತೂರು ಮಧುರ ವಿಲ್ಲಾ , ಮರೀಲ್ ನಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಪುತ್ತೂರು ಏರಿಯಾ ಸಮಿತಿ ಅಧ್ಯಕ್ಷ ಅಬೂಬಕರ್ ಮುಲಾರ್ ವಹಿಸಿದ್ದರು. ತಾಜುದ್ದೀನ್ ಟರ್ಲಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಅಧ್ಯಕ್ಷರು ಎಲ್ಲರನ್ನು ಸ್ವಾಗತಿಸಿ, ಸಭೆಗೆ ಆಗಮಿಸಿದ ರಾಷ್ಟ್ರೀಯ, ಜಿಲ್ಲಾ ಹಾಗೂ ಏರಿಯಾ ಸಮಿತಿಗಳ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ AIKMCC ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ M. K. ನೌಶಾದ್ ಅವರು, AIKMCC ವತಿಯಿಂದ ಪಾಲ್ಲಿಟಿವ್ ಕೇರ್ ಯೂನಿಟ್ ಆರಂಭಿಸುವ ಅಗತ್ಯವನ್ನು ಪ್ರಸ್ತಾಪಿಸಿದರು. ಸಮಾಜದ ಅನಾರೋಗ್ಯ ಪೀಡಿತರು, ವಯೋವೃದ್ಧರು ಹಾಗೂ ಜೀವನದ ಅಂತಿಮ ಹಂತದಲ್ಲಿರುವ ರೋಗಿಗಳಿಗೆ ಅಗತ್ಯವಾದ ಆರೈಕೆ ಮತ್ತು ಮಾನವೀಯ ಸೇವೆ ಒದಗಿಸುವಲ್ಲಿ ಪ್ಯಾಲಿಯೇಟಿವ್ ಕೇರ್‌ನ ಮಹತ್ವವನ್ನು ವಿವರಿಸಿದರು. ಈ ಘಟಕವನ್ನು ಆರಂಭಿಸಲು ಅಗತ್ಯವಿರುವ ಸಹಕಾರವನ್ನು ನೀಡುವುದಾಗಿ ಅವರು ಭರವಸೆ ನೀಡಿದರು.

ಅವರು AIKMCC OPPAM ಸುರಕ್ಷಾ ಯೋಜನೆಯ ಉದ್ದೇಶ, ಸದಸ್ಯತ್ವದ ಮಹತ್ವ ಹಾಗೂ ಸಂಕಷ್ಟದ ಸಂದರ್ಭದಲ್ಲಿ ಸದಸ್ಯರ ಕುಟುಂಬಗಳಿಗೆ ಯೋಜನೆಯ ಮೂಲಕ ದೊರೆಯುವ ಆರ್ಥಿಕ ನೆರವಿನ ಕುರಿತು ವಿವರಿಸಿದರು. ಸದಸ್ಯತ್ವದ ಮೂಲಕ ಪರಸ್ಪರ ಸಹಕಾರ, ಸಾಮಾಜಿಕ ಭದ್ರತೆ ಮತ್ತು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವು ನೀಡುವ AIKMCCಯ ಮಾನವೀಯ ಸೇವಾ ಮನೋಭಾವವನ್ನು ಮನಮುಟ್ಟುವಂತೆ ವಿವರಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಜಿಲ್ಲಾ ಆರೋಗ್ಯ ಮೇಲ್ವಿಚಾರಕ K. ಅಬೂಬಕರ್ ಹಾಜಿ ಅವರು ಮಾತನಾಡಿ, AIKMCC ನಡೆಸುತ್ತಿರುವ ವಿವಿಧ ಸಮಾಜಮುಖಿ ಮತ್ತು ಮಾನವೀಯ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.

ಇನ್ನೋರ್ವ ಅತಿಥಿ TMC ಮಾಜಿ ಸದಸ್ಯ ಮಹಮ್ಮದ್ ರಿಯಾಜ್ K. ಅವರು ಮಾತನಾಡಿ, AIKMCCಯ ಸೇವಾ ಕಾರ್ಯಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ತಮ್ಮ ಸಹಕಾರ ಸದಾ ಇರಲಿದೆ ಎಂದು ತಿಳಿಸಿದರು.

ಬೆಂಗಳೂರು ಪಾಲ್ಲಿಟಿವ್ ಕೇರ್ ಕೋರ್ಡಿನೇಟರ್ ರಿಯಾಜ್ ಅವರು ಪ್ಯಾಲಿಯೇಟಿವ್ ಕೇರ್‌ನ ಅಗತ್ಯತೆ, ಅದರ ಕಾರ್ಯವಿಧಾನ ಹಾಗೂ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ದೊರೆಯುವ ಸೇವೆಗಳ ಕುರಿತು ಸಭೆಯಲ್ಲಿ ವಿವರವಾದ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ AIKMCC ರಾಷ್ಟ್ರೀಯ ಕೇಂದ್ರ ಸಮಿತಿಯ ಉಪಾಧ್ಯಕ್ಷ ನಾಸರ್ V. K., ಯೆಶವಂತಪುರ ಏರಿಯಾ ಸಮಿತಿ ಅಧ್ಯಕ್ಷ ಅರ್ಷಾದ್ V. C., ಪ್ರಧಾನ ಕಾರ್ಯದರ್ಶಿ ಮಹಮೂದ್ K., ಖಜಾಂಚಿ ಫೈಸಲ್ , ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಯ್ಯದ್ ಅಫ್ಹಾಂ ಅಲಿ ತಂಗಳ್ , ಜಿಲ್ಲಾ ಖಜಾಂಚಿ ಇಬ್ರಾಹಿಂ ಹಾಜಿ , ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಹನೀಫ್ ನಂದಿನಿ ಹಾಗೂ ಹನೀಫ್ ಮುಕ್ವೆ ಉಪಸ್ಥಿತರಿದ್ದರು.

ಅದೇ ರೀತಿ ಸುಳ್ಯ ಏರಿಯಾ ಸಮಿತಿ ಅಧ್ಯಕ್ಷ Er. ಖಲಂದರ್ ಎಲಿಮಲೆ , ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ , ಪುತ್ತೂರು ಏರಿಯಾ ಸಮಿತಿ ಅಧ್ಯಕ್ಷ ಅಬೂಬಕರ್ ಮುಲಾರ್ , ಪ್ರಧಾನ ಕಾರ್ಯದರ್ಶಿ ಹನೀಫ್ ಮಧುರ , ಖಜಾಂಚಿ ಅಬ್ದುಲ್ ಅಝೀಝ್ ಹಾಜಿ , ವರ್ಕಿಂಗ್ ಸೆಕ್ರೆಟರಿ ಯೂಸುಫ್ ಸಾಲ್ಮರ , ಮಾಧ್ಯಮ ಕಾರ್ಯದರ್ಶಿ ರಫೀಕ್ ಬೆಟ್ಟoಪಾಡಿ ಸೇರಿದಂತೆ ಸಮಿತಿಯ ಸದಸ್ಯರಾದ ಹನೀಫ್ ಹಾಜಿ ಉದಯ , AG ಯೂಸುಫ್ , ನಿಜಾಮ್ ಮುಕ್ವೆ , C. K. ಹಸೈನಾರ್ , ಪೈಚರ್ ಹಮೀದ್ , ಝುಬೈರ್ MD, ಸಿರಾಜ್ C. K. ಹಾಗೂ ಸಿನ್ಸಾರ್ ಮುರ ಮತ್ತು ಪತ್ರಕರ್ತರಾದ ಶೇಖ್ ಜೈನುದ್ದೀನ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಷ್ಟ್ರೀಯ, ಜಿಲ್ಲಾ ಹಾಗೂ ಏರಿಯಾ ಸಮಿತಿಗಳ ನಾಯಕರಿಗೆ ಮತ್ತು ಎಲ್ಲಾ ಕಾರ್ಯಕರ್ತರಿಗೆ ಆತಿಥ್ಯವಾಗಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.

AIKMCCಯ ಸೇವಾ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವುದು, ಸದಸ್ಯತ್ವವನ್ನು ಬಲಪಡಿಸುವುದು ಹಾಗೂ ಸಮಾಜದ ಸಂಕಷ್ಟದಲ್ಲಿರುವವರಿಗೆ ಅಗತ್ಯ ನೆರವು ಒದಗಿಸುವ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸುವ ಕುರಿತು ಸಭೆಯಲ್ಲಿ ಒತ್ತು ನೀಡಲಾಯಿತು.

ಸಭೆಯು ಸಂಘಟನೆಯ ಸೇವಾ ಮನೋಭಾವವನ್ನು ಮತ್ತಷ್ಟು ಬಲಪಡಿಸುವ ಹಾಗೂ ಮುಂದಿನ ದಿನಗಳಲ್ಲಿ ಸಮಾಜಮುಖಿ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ವಿಸ್ತರಿಸುವ ಸಂಕಲ್ಪದೊಂದಿಗೆ ನಡೆಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!