ಕಾಸರಗೋಡು ಪಾಂಗೋಡು : ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ “ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ -2026ಅಂಗವಾಗಿ ನಡೆಯುತ್ತಿರುವ “ಕಾಸರಗೋಡು ದಸರಾ ಸಂಕೀರ್ತನ ದಷಾಹ “ಕಾರ್ಯಕ್ರಮದಲ್ಲಿ ಭಜನೆ ಸೇವೆ ನೀಡಿದ ಭಜನಾ ತಂಡವನ್ನು ಸನ್ಮಾನಿಸಲಾಯಿತು.

ಕಾಸರಗೋಡು ದಸರಾ ಪ್ರದಾನ ಸಂಚಾಲಕರಾದ ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಪ್ರಮಾಣ ಪತ್ರ, ಸ್ಮರಣಿಕೆ ನೀಡಿ ಸನ್ಮಾನಿಸಿಸಿದರು ಕಾರ್ಯಕ್ರಮದಲ್ಲಿ ವಿಶಾಲಾಕ್ಷ ಪುತ್ರಕಳ, ಕಸ್ತೂರಿ ಪ್ರಭಾಕರ್ ಕಾರ್ಲೆ, ಅಖಿಲೇಶ್ ನಗುಮುಗಮ್, ತಾರಾನಾಥ್ ರೈ ಬದಿಯಡ್ಕ, ಜಗನ್ನಾಥ್ ಶೆಟ್ಟಿ ಪಿ. ಕೆ. ವಸಂತ್ ಕೆರೆಮನೆ ಮುಂತಾದವರಿದ್ದರು ಶ್ರೀ ದುರ್ಗಾಪರಮೇಶ್ವರಿ ಸುಬ್ರಮಣ್ಯ ಮಹಿಳಾ ಭಜನಾ ಸಂಘ ಪ್ರಮುಕೆ ಶೋಭಾ ಟೀಚರ್ ಕೂಡ್ಲು ಸನ್ಮಾನ ಸ್ವೀಕರಿಸಿ ಅಭಿನಂದಿಸಿದರು. ದಸರಾ ಸಂಚಾಲಕಿ ಸಂದ್ಯಾ ರಾಣಿ ಟೀಚರ್ ನಿರೂಪಿಸಿದರು.

