ಬಡ ಕುಟುಂಬಗಳಿಗೆ ಆಸರೆಯಾಗಲು ಐರನ್ ಟೆಂಪಲ್ ಸಂಕಲ್ಪ; ಅ. 25ರಂದು ದೇಹದಾರ್ಢ್ಯ ಸ್ಪರ್ಧೆ

ಆಲಂಕಾರು: ಗ್ರಾಮೀಣ ಭಾಗದ ಯುವಕರ ಬೆಂಬಲ ಹಾಗೂ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಐರನ್ ಟೆಂಪಲ್ ಸಂಸ್ಥೆಯು ಬಡ ಕುಟುಂಬಗಳಿಗೆ ಆಸರೆಯಾಗುವ ಸಂಕಲ್ಪದೊಂದಿಗೆ ಸಮಾಜಮುಖಿ ಸೇವಾ ಕಾರ್ಯಗಳಿಗೆ ಮುಂದಾಗಿದೆ. ಸಂಸ್ಥೆಯನ್ನು ಸೇವಾ ಟ್ರಸ್ಟ್ ಆಗಿ ನೋಂದಾಯಿಸಿ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವು ನೀಡುವ ಉದ್ದೇಶ ಹೊಂದಿದೆ. ಈ ಹಿನ್ನೆಲೆಯಲ್ಲಿ ಅ. 25ರಂದು ಆಲಂಕಾರಿನ ದೀನದಯಾಳು ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

2025ರ ಅ. 5ರಂದು ಆರಂಭಗೊಂಡ ಐರನ್ ಟೆಂಪಲ್ ಸಂಸ್ಥೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ವಿಜೇತರಿಗೆ ₹1 ಲಕ್ಷ ಪ್ರಥಮ ಬಹುಮಾನ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಒಟ್ಟು ₹3.50 ಲಕ್ಷಕ್ಕೂ ಅಧಿಕ ಮೊತ್ತದ ಬಹುಮಾನಗಳನ್ನು ಟ್ರೋಫಿ ಮತ್ತು ಪದಕಗಳೊಂದಿಗೆ ವಿತರಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಹೆಚ್ಚಿನ ಬಹುಮಾನ ಮೊತ್ತದೊಂದಿಗೆ ಆಯೋಜಿಸಲಾಗುತ್ತಿರುವ ಈ ಸ್ಪರ್ಧೆಯಲ್ಲಿ ದೇಹದಾರ್ಢ್ಯ ಪಟುಗಳು ಭಾಗವಹಿಸಲಿದ್ದಾರೆ.

ಬಡ ಕುಟುಂಬಕ್ಕೆ ಮನೆ ನಿರ್ಮಾಣದ ಭರವಸೆ

ಐರನ್ ಟೆಂಪಲ್ ಸಂಸ್ಥೆಯು ಈಗಾಗಲೇ ಆಲಂಕಾರಿನ ಬಡ ಕುಟುಂಬವೊಂದನ್ನು ಗುರುತಿಸಿದ್ದು, ಸಾರ್ವಜನಿಕರ ಸಹಕಾರದೊಂದಿಗೆ ಆ ಕುಟುಂಬಕ್ಕೆ ಸುಸಜ್ಜಿತ ಮನೆಯನ್ನು ನಿರ್ಮಿಸಿಕೊಡುವ ಭರವಸೆ ನೀಡಿದೆ. ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುವುದು, ಅಗತ್ಯವಿರುವವರಿಗೆ ಆಸರೆಯಾಗುವುದು ಹಾಗೂ ಗ್ರಾಮೀಣ ಭಾಗದಲ್ಲಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಸೇವಾ ಯೋಜನೆಗಳನ್ನು ಹಮ್ಮಿಕೊಳ್ಳಲು ಸಂಸ್ಥೆ ಯೋಜಿಸಿದೆ.

ದೇಹದಾರ್ಢ್ಯ ಸ್ಪರ್ಧೆಯ ಮೂಲಕ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಸಮಾಜಸೇವೆಗೆ ಸಂಪನ್ಮೂಲ ಕ್ರೋಢೀಕರಿಸುವ ಆಶಯವನ್ನೂ ಸಂಸ್ಥೆ ಹೊಂದಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಾರ್ವಜನಿಕರು, ಕ್ರೀಡಾಭಿಮಾನಿಗಳು ಹಾಗೂ ದಾನಿಗಳು ತನು, ಮನ ಮತ್ತು ಧನದ ಮೂಲಕ ಸಹಕಾರ ನೀಡಬೇಕು ಎಂದು ಐರನ್ ಟೆಂಪಲ್ ಸಂಸ್ಥೆಯು ವಿನಯಪೂರ್ವಕವಾಗಿ ಮನವಿ ಮಾಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!