ಕಾರ್ಕಳದ ಮಹಿಳಾ ಒಕ್ಕೂಟದಲ್ಲಿ ಮಹಿಳಾ ನಿರ್ಣಾಯಕ್ಕೆ ಬೆಲೆ ಇಲ್ಲ : ಶ್ರೀಮತಿ ರಮಿತಾ ಸೂರ್ಯವಂಶಿ

ಕಾರ್ಕಳ ತಾಲೂಕಿನ ಎಲ್ಲಾ ಮಹಿಳಾ ಸಂಘಟನೆಯ ಮಹಿಳೆಯರನ್ನು ಒಟ್ಟು ಸೇರಿಸಿ ನಡೆಯುತ್ತಿರುವ ಮಹಿಳಾ ಒಕ್ಕೂಟದಲ್ಲಿ ಮಹಿಳೆಯರ ಅಭಿಪ್ರಾಯಕ್ಕೆ ಬೆಲೆ ಇಲ್ಲ ಅನ್ನೋದು ಮೇಲ್ನೋಟಕ್ಕೆ ತಿಳಿದು ಬಂದಿದೆ.


ದಿನಾಂಕ ತಾ -24-10-2026 ರ ಕಾರ್ಕಳ ಮಹಿಳಾ ಒಕ್ಕೂಟ ದ ಮಹಾಸಭೆಯನ್ನು ಆಯೋಜಿಸಲಾಗಿತ್ತು ಮಹಿಳಾ ಒಕ್ಕೂಟದ ಪ್ರಸ್ತುತ ಅಧ್ಯಕ್ಷೆ ಯಶೋಧ ಶೆಟ್ಟಿ, ಇವರು ಸುಮಾರು 10 ವರ್ಷದಿಂದ ಅಧ್ಯಕ್ಷೆ ಯಾಗಿ ಕಾರ್ಯನಿರ್ವಾಹಿಸಿದ್ದು ಮಹಿಳಾ ಒಕ್ಕೂಟದ ಬೈಲ ಪ್ರಕಾರ ಒಬ್ಬ ವ್ಯಕ್ತಿ 2 ವರ್ಷ ಅವಧಿಗೆ ಅಧ್ಯಕ್ಷೆಯಾಗಿ ಇರತಕ್ಕದ್ದು ಹಾಗೂ ಮುಂದೆ ಹೊಸಬರಿಗೆ ಅವಕಾಶ ಕೊಡುವಂಥದ್ದು ಆದರೆ ಒಕ್ಕೂಟದ ಹೊಸ ಕಟ್ಟಡದ ಕೆಲಸ ಸಂಪೂರ್ಣವಾಗಿ ಕಟ್ಟಡ ಉದ್ಘಾಟನೆ ಆಗುವ ವರೆಗೆ ಅವರನ್ನು ಅಧ್ಯಕ್ಷೆ ಯಾಗಿ ಮುಂದುವರಿಸುವದೆಂದು ನಿರ್ಣಯಿಸಿದ್ದು ಈಗ ಕಟ್ಟಡ ಉದ್ಘಾಟನೆ ಆಗಿ ಏಳು ತಿಂಗಳು ಮುಗಿದಿದ್ದು ನಿನ್ನೆ ನಡೆದ ಮಹಾಸಭೆ ಅಲ್ಲಿ ಅಧ್ಯಕ್ಷರ ಬದಲಾವಣೆ ಮಾಡುವುದೆಂದು ತೀರ್ಮಾನಿಸಲಾಗಿತ್ತು. ಆದರೆ ಪ್ರಸ್ತುತ ಅಧ್ಯಕ್ಷ ಸ್ಥಾನವನ್ನು ಯಶೋಧ ಶೆಟ್ಟಿ ಇವರು ಬಿಟ್ಟು ಕೊಡಲು ಒಪ್ಪದ ಕಾರಣ ಸಭೆಯು ರದ್ಧಾಯಿತು ಎಂದು ಮಹಿಳಾ ಒಕ್ಕೂಟದ ಸದಸ್ಯರಿಂದ ತಿಳಿದು ಬಂದಿದ್ದು, ಇದನ್ನು ಸಂಬಂಧ ಪಟ್ಟವರು ಗಮನಿಸಿ ಮಹಿಳೆಯರಿಗೆ ನ್ಯಾಯ ಒದಗಿಸಬೇಕು.


ಈಗಾಗಲೇ ಅಧ್ಯಕ್ಷರ ಮೇಲೆ ಸಾಕಷ್ಟು ದೂರು ಇಲಾಖೆ ತಲುಪಿದ್ದರು ಇಲಾಖೆ ಮೌನ ಸರಿಯಲ್ಲ, ಮಹಿಳೆಯರು ಇನ್ನೊಂದು ಮಹಿಳೆಯರಿಗೆ ಪೂರಕವಾಗಿ ಇರಬೇಕೇ ಹೊರತು ತಮ್ಮ ಸ್ವಾರ್ಥಕ್ಕೆ ಅಧಿಕಾರ ದೂರಪಯೋಗ ಸರಿಯಲ್ಲ ಎಂದು ಸಾಮಾಜಿಕ ಕಾರ್ಯಕರ್ತೆ ಮಹಿಳಾಧ್ವನಿ ಶ್ರೀಮತಿ ರಮಿತಾ ಸೂರ್ಯವಂಶಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!