ಇದು ಕೊಲೆ’ ಎಂದೇ ಸ್ಟೇಟಸ್ ಹಾಕಿದ ಗಂಟೆಯೊಳಗೆ ರಸ್ತೆ ಅಪಘಾತಕ್ಕೆ ಬಲಿಯಾದ ಯುವಕ: ವಿಧಿ ಬರೆದ ವಿಪರ್ಯಾಸ

ಕಾಸರಗೋಡು : ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿರುವ ಒಂದು ಹೃದಯವಿದ್ರಾವಕ ಹಾಗೂ ವಿಚಿತ್ರ ಕಾಕತಾಳೀಯ ಘಟನೆಯು ಎಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕುಡಿದ ಮತ್ತಿನಲ್ಲಿ ವಾಹನ ಚಾಯಿಸುವುದು ಹಾಗೂ ರಸ್ತೆ ಅಪಘಾತಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿದ ಕೆಲವೇ ಗಂಟೆಗಳಲ್ಲಿ, ಖುದ್ದು ಅದೇ ದುರಂತಕ್ಕೆ ಆ ಯುವಕನೇ ಬಲಿಯಾಗಿರುವುದು ವಿಪರ್ಯಾಸದ ಪರಮಾವಧಿಯಾಗಿದೆ.

​ಮಲಪ್ಪುರಂನ ಪಾಲಮೇಡ್ ನಿವಾಸಿ, 36 ವರ್ಷ ಪ್ರಾಯದ ಅಧ್ಯಾಪಕ ಶರಫುದ್ದೀನ್ ಎಂಬುವವರೇ ಈ ದುರ್ಘಟನೆಯಲ್ಲಿ ಮೃತಪಟ್ಟ ದುರ್ದೈವಿ.
​
​ನಿನ್ನೆ ರಾತ್ರಿ 9ರ ಸುಮಾರಿಗೆ ಶರಫುದ್ದೀನ್ ಅವರು ವಾಟ್ಸ್‌ಆ್ಯಪ್ ಅಥವಾ ಸಾಮಾಜಿಕ ಜಾಲತಾಣದಲ್ಲಿ ಕುಡಿದು ವಾಹನ ಚಾಯಿಸುವವರ ವಿರುದ್ಧ ಕಟುವಾದ ಸಂದೇಶವೊಂದನ್ನು ಸ್ಟೇಟಸ್ ಆಗಿ ಹಾಕಿದ್ದರು.
​”ಕೇರಳದಲ್ಲಿ ದಿನವೊಂದಕ್ಕೆ 15 ಮಂದಿ ವಾಹನ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. ಇದರಲ್ಲಿ ಅರ್ಧಾಂಶಕ್ಕೂ ಅಧಿಕ ಮಂದಿ ಅಪಘಾತದಿಂದ ಸಾಯೋದಲ್ಲ, ಇದು ಕೊಲೆ… ಕುಡಿದ ಅಮಲಿನಲ್ಲಿ ವಾಹನ ಚಾಯಿಸಬಾರದೆಂದು ಗೊತ್ತಿದ್ದವರೇ ಕೊಲೆಪಾತುಕರು…” ಎಂದು ಬರೆದುಕೊಂಡು ತಮ್ಮ ಆಕ್ರೋಶ ಹೊರಹಾಕಿದ್ದರು.

​ಈ ಸ್ಟೇಟಸ್ ಹಾಕಿದ ಬೇವ ಕೇವಲ ಒಂದು ಗಂಟೆಯ ಅಂದರೆ ನಿನ್ನೆ ರಾತ್ರಿ 10 ಗಂಟೆ ವೇಳೆಗೆ ಘೋರ ದುರಂತ ಸಂಭವಿಸಿದೆ. ಶರಫುದ್ದೀನ್ ಅವರು ತಮ್ಮ ಸ್ನೇಹಿತ ಹಬೀಬ್ ಜೊತೆ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದಾಗ, ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬಂದ ಕಾರೊಂದು ಇವರ ವಾಹನಕ್ಕೆ ಗುದ್ದಿದೆ. ಅಪಘಾತದ ತೀವ್ರತೆಗೆ ಶರಫುದ್ದೀನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.


​
​ಅಪಘಾತ ಎಸಗಿ ಪರಾರಿಯಾಗಲು ಯತ್ನಿಸಿದ ಕಾರು ಚಾಲಕ ಅಕ್ಬರಲಿ ಎಂಬಾತನನ್ನು ವೆಂಜರ ರಾಣಾ ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ. ಆದರೆ, ಕಾರಿನಲ್ಲಿದ್ದ ಆತನ ಇಬ್ಬರು ಸ್ನೇಹಿತರು ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

​ತಾವೇ ಖುದ್ದಾಗಿ ಎಚ್ಚರಿಸಿದ ರಸ್ತೆ ಅಪಘಾತದ ಸಾವುಗಳ ಸಾಲಿಗೆ ಕೆಲವೇ ಗಂಟೆಗಳಲ್ಲಿ ಅಧ್ಯಾಪಕ ಶರಾಫುದ್ದೀನ್ ಅವರೂ ಸೇರಿಹೋಗಿರುವುದು ಸ್ಥಳೀಯರಲ್ಲಿ ಹಾಗೂ ಅವರ ಕುಟುಂಬದಲ್ಲಿ ಮೌನ ಮಡುಗುವಂತೆ ಮಾಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!