ಇರಾನ್ ವಿರುದ್ಧದ ಯುದ್ಧ ಶೀಘ್ರದಲ್ಲೇ ಅಂತ್ಯ – ಜಗತ್ತು ಮತ್ತಷ್ಟು ಶಾಂತಿಯುತವಾಗಲಿದೆ: ಡೊನಾಲ್ಡ್ ಟ್ರಂಪ್!

ವಾಷಿಂಗ್ಟನ್: ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧ ಶೀಘ್ರದಲ್ಲೇ ಅಂತ್ಯಗೊಳ್ಳಲಿದ್ದು, ಆ ಬಳಿಕ ಜಗತ್ತು ಹೆಚ್ಚು ಸುರಕ್ಷಿತ ಮತ್ತು ಶಾಂತಿಯುತವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ವೆಟರನ್ಸ್ ಡೇ (ಸೇನಾ ಯೋಧರ ಸ್ಮರಣಾ ದಿನ) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುದ್ಧದ ಅಂತ್ಯದ ಬಳಿಕ ಎಲ್ಲರಿಗೂ ಹೆಚ್ಚಿನ ಶಾಂತಿ ಮತ್ತು ಭದ್ರತೆ ದೊರೆಯಲಿದೆ ಎಂದು ಹೇಳಿದ್ದಾರೆ.

“ಈ ಯುದ್ಧ ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ. ಯುದ್ಧ ಮುಗಿದ ಬಳಿಕ ಜಗತ್ತು ಇನ್ನಷ್ಟು ಸುರಕ್ಷಿತ ತಾಣವಾಗಲಿದೆ. ಎಲ್ಲರಿಗೂ ಹೆಚ್ಚು ಶಾಂತಿ ಲಭಿಸಲಿದೆ. ಪ್ರಸ್ತುತ ನಾವು ಎದುರಿಸುತ್ತಿರುವ ಅಪಾಯಗಳಿಲ್ಲದ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಲಿದೆ” ಎಂದು ಟ್ರಂಪ್ ತಿಳಿಸಿದ್ದಾರೆ.

ವಾಷಿಂಗ್ಟನ್ ಹೊರವಲಯದಲ್ಲಿರುವ ಆರ್ಲಿಂಗ್ಟನ್ ರಾಷ್ಟ್ರೀಯ ಸ್ಮಶಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ಅಮೆರಿಕದ ಸೈನಿಕರ ಧೈರ್ಯ, ಶೌರ್ಯ ಮತ್ತು ಯುದ್ಧ ಕೌಶಲ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!