ಕೋಟ್ಯಂತರ ಮೌಲ್ಯದ ಮಾದಕ ವಸ್ತು ಪತ್ತೆ.ನೀಲೇಶ್ವರದ ಯುವಕನ ಬಂಧನ

ಕಾಸರಗೋಡು/ಎರ್ನಾಕುಳಂ : ಇಲ್ಲಿಯ ನೆಡುಂಬಾಶ್ಶೇರಿಯಲ್ಲಿ ಬಾಡಿಗೆ ಕೊಠಡಿಯಲ್ಲಿದ್ದ ಯುವಕನೊಬ್ಬನಿಂದ ಸುಮಾರು ಐದು ಕೋಟಿ ರೂಪಾಯಿ ಮೌಲ್ಯದ ಎರಡೂವರೆ ಕಿಲೋ ಚರಸ್ ವಶಪಡಿಸಿಕೊಳ್ಳಲಾಗಿದೆ.

ಬುಧವಾರ ನೆಡುಂಬಾಶ್ಶೇರಿ ಪೊಲೀಸರು ಮತ್ತು ಡ್ಯಾನ್ಸಾಫ್ ತಂಡ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ನೀಲೇಶ್ವರ ಚಿರಪುರತ್ ನಿವಾಸಿ ವೆಳ್ಳಿಕ್ಕೋತ್ ಮುಹಮ್ಮದ್ ಸಿರಾಜುದ್ದೀನ್ (25) ಎಂಬಾತನನ್ನು ಬಂಧಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಹೋಟೆಲ್ ಕೊಠಡಿ ಪರಿಶೀಲಿಸಿದಾಗ ಮಾದಕ ದ್ರವ್ಯ ಪತ್ತೆಯಾಗಿದೆ. ದೆಹಲಿಯಿಂದ ಈ ಮಾದಕ ವಸ್ತುವನ್ನು ಖರೀದಿಸಿದ್ದ ಆರೋಪಿ, ವಿಮಾನದಲ್ಲಿ ಮಂಗಳೂರಿಗೆ ಬಂದು, ಅಲ್ಲಿಂದ ರೈಲಿನಲ್ಲಿ ತ್ರಿಶೂರಿಗೆ ಪ್ರಯಾಣಿಸಿದ್ದಾನೆ.

ಬಳಿಕ ಟ್ಯಾಕ್ಸಿ ಮೂಲಕ ನೆಡುಂಬಾಶ್ಶೇರಿ ತಲುಪಿ ಹೋಟೆಲ್‌ನಲ್ಲಿ ತಂಗಿದ್ದಾಗಿ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!