

ಕಾಸರಗೋಡು: ಐತಿಹ್ಯ ಪ್ರಸಿದ್ಧ ಚಿತ್ತಾರಿ ಕೋಟೆ ಶ್ರೀ ಎಲ್ಲಾಂಬಿಕಾ ದೇವಳದಲ್ಲಿ 2027ರ ಏಪ್ರಿಲ್ 23ರಿಂದ 28ರವರೆಗೆ ಆರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿರುವ ದ್ರವ್ಯಕಲಶ ಮಹೋತ್ಸವದ ಪ್ರಯುಕ್ತ ಅದೃಷ್ಟ ಚೀಟಿ ಬಿಡುಗಡೆ ಕಾರ್ಯಕ್ರಮ ದೇವಾಲಯದಲ್ಲಿ ನಡೆಯಿತು.

ನಾಗೇಶ್ ರಾಮಕೃಷ್ಣ ಅವರ ನೇತೃತ್ವದ ದ್ರವ್ಯಕಲಶ ಮಹೋತ್ಸವ ಆಡಳಿತ ಸಮಿತಿಯ ಪ್ರಮುಖರಾದ ಚಂದ್ರಕಾಂತ ರಾವ್ ಕುದ್ರು, ನವನೀತ್ ಮಲ್ಲವ ಮಂಗಳೂರು, ಶಿವಶಂಕರ್ ಬೆಳ್ತಂಗಡಿ, ಚಂದ್ರಶೇಖರ ಮಂಗಳೂರು, ರಮೇಶ್ ಒರವಂಗರ, ಸುಧೀರ್ ಕಾಞಂಗಾಡ್, ಪ್ರಸನ್ನ ಬಾಬು ಕುದ್ರು, ಪ್ರವೀಣ್ ಕಾಞಂಗಾಡ್, ಮಹಮಾಯಿ ಪ್ರಸಾದ್ ಕೀಕಾನ್, ಬಾಲಕೃಷ್ಣ ಮಲ್ಲಿಗೆಮಾಡು, ದೀಪ ನರೇಶ್ ಕಾಞಂಗಾಡ್ , ಗೌರಿ ಶಂಕರ ಮುಕ್ಕೂಟು ಹಾಗೂ ದೇವಾಲಯದ ಮುಖ್ಯ ಅರ್ಚಕ ಅಜಿತ್ ಕುಮಾರ್ ಬಿ.ಜಿ. ಚಿತ್ತಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶ್ರೀ ಭಗವತ್ಯೈ ರೇಣುಕಾ ಜಗದಂಬೆಯ ಅನುಗ್ರಹದೊಂದಿಗೆ ನಡೆಯಲಿರುವ ಈ ಪುಣ್ಯ ಕಾರ್ಯಕ್ಕೆ ಸಹಕರಿಸುವ ದಾನಿಗಳಿಗೆ ,ಭಕ್ತರಿಗೆ ಶ್ರೀ
ದೇವಾಲಯದ ಆಡಳಿತ ಸಮಿತಿಯು ವಿಶೇಷ ಕೃತಜ್ಞತೆಯನ್ನು ಸಲ್ಲಿಸಿದೆ.


