ಕಾಸರಗೋಡು ಈಸ್ಟ್ ಯೂನಿಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಈಸ್ಟ್ ಫೋಕಸ್ ಸ್ವಾಶ್ರಯ ಸಂಘವು ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ನೀಲೇಶ್ವರಂ ಯೂನಿಟ್ ಸದಸ್ಯ ರಜಿತ್ ಅಝಿತ್ತಲ ಅವರ ಚಿಕಿತ್ಸಾ ನಿಧಿಗೆ ಧನಸಹಾಯ ನೀಡಿತು.

ಸ್ವಾಶ್ರಯ ಸಂಘದ ಯೂನಿಟ್ ಅಧ್ಯಕ್ಷ ದಿನೇಶ್ ಇನ್‌ಸೈಟ್ ಅವರು ಸಹಾಯಧನವನ್ನು ಜಿಲ್ಲಾ ಸಂಯೋಜಕ ಎನ್.ಎ. ಭರತನ್ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸ್ವಾಶ್ರಯ ಸಂಘದ ಯೂನಿಟ್ ಕಾರ್ಯದರ್ಶಿ ವಾಮನ್ ಕುಮಾರ್, ಸಂಘದ ಸದಸ್ಯ ವಿ.ಎನ್. ರಾಜೇಂದ್ರನ್ ಹಾಗೂ ಕಾಸರಗೋಡು ವಲಯದ ಮನು ಎಲ್ಲೋರ ಉಪಸ್ಥಿತರಿದ್ದರು.

