ಕಾಸರಗೋಡು ನಗರಸಭೆ ಉದ್ಯೋಗಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕಾಸರಗೋಡು ನಗರಸಭೆಯ ಉದ್ಯೋಗಿ ರಮ್ಯಾ (40) ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನೀಲೇಶ್ವರದ ತಟ್ಟಾಚೇರಿಯಲ್ಲಿ ನಡೆದಿದೆ.

ಕೋಯಿಕ್ಕೋಡ್ ಫರೋಕ್ ನಗರಸಭೆಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಜಿತ್ ಅವರ ಪತ್ನಿಯಾಗಿದ್ದ ರಮ್ಯಾ, ಮನೆಯಲ್ಲಿ ಕಿರಿಯ ಮಗುವಿನೊಂದಿಗೆ ವಾಸವಾಗಿದ್ದರು.

ಬೆಳಿಗ್ಗೆ ಮಗು ಟ್ಯೂಷನ್‌ಗೆ ತೆರಳಿದ್ದು, ತರಗತಿ ಮುಗಿಸಿ ಮನೆಗೆ ಮರಳಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಇದರಿಂದ ಆತಂಕಗೊಂಡ ಮಗು ಅಕ್ಕಪಕ್ಕದವರ ತಿಳಿಸಿದೆ.

ಸ್ಥಳೀಯರು ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದಾಗ ರಮ್ಯಾ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಮಾಹಿತಿ ತಿಳಿದು ನೀಲೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!