ನ. 28 ರಿಂದ 30ರ ತನಕ ಭಾರತೀಯ ಸಾರ್ವಜನಿಕ ಆರೋಗ್ಯ ದಂತ ವೈದ್ಯಕೀಯ ಸಂಘದ 29ನೇ ರಾಷ್ಟ್ರೀಯ ಸಮ್ಮೇಳನ ಸಂಭ್ರಮ .. !

ಮಂಗಳೂರು: ಮಾಹೆ ಅಧೀನದ ಮಣಿಪಾಲ ದಂತ ವಿಜ್ಞಾನಗಳ ಕಾಲೇಜು ನೇತೃತ್ವದಲ್ಲಿ ಮಂಗಳೂರಿನ ಟಿಎಂಎ ಪೈ ಇಂಟ‌ರ್ ನ್ಯಾಷನಲ್ ಕನ್ವೆನ್ಗನ್ ಸೆಂಟರ್‌ನಲ್ಲಿ ನ. 28ರಿಂದ 30ರವರೆಗೆ ಭಾರತೀಯ ಸಾರ್ವಜನಿಕ ಆರೋಗ್ಯ ದಂತ ವೈದ್ಯಕೀಯ ಸಂಘದ 29ನೇ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ ಎಂದು ಸಮ್ಮೇಳನದ ಸಂಘಟನಾ ಅಧ್ಯಕ್ಷೆ ಡಾ. ರಮ್ಯಾ ಶೆಣೈ ಮಾಹಿತಿ ನೀಡಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ನವೆಂಬರ್ 28 ರಂದು ಸಂಜೆ 5 ಗಂಟೆಗೆ ಸಮ್ಮೇಳನ ಉದ್ಘಾಟನೆಗೊಳ್ಳಲಿದೆ. ಐಸಿಎಂಆರ್‌ನ ಹೆಚ್ಚುವರಿ ಮಹಾ ನಿರ್ದೇಶಕ ಡಾ. ಸಂಗಮಿತ್ರ ಪಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಾಹೆಯ ಉಪ ಕುಲಪತಿಗಳಾದ ಡಾ. ಶರತ್ ರಾವ್(ಆರೋಗ್ಯ ವಿಜ್ಞಾನ) , ಡಾ. ದಿಲಿಪ್ ಜಿ. ನಾಯಕ್ (ಮಂಗಳೂರು ಕ್ಯಾಂಪಸ್) ಪಾಲ್ಗೊಳ್ಳುವರು. ಅತ್ಯುತ್ತಮ ಬಾಯಿಯ ಆರೋಗ್ಯ:ನೀತಿಯಿಂದ ನಿಯಂತ್ರಣ’ ಎಂಬ ಧೈಯವಾಕ್ಯದಡಿ ನಡೆಯಲಿರುವ ಮೂರು ದಿನಗಳ ಸಮ್ಮೇಳನದಲ್ಲಿ 700ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು .
ನ. 27ರಂದು ಪೂರ್ವಭಾವಿ ಸಮ್ಮೇಳನ ಮಣಿಪಾಲ ದಂತ ವಿಜ್ಞಾನ ಕಾಲೇಜು, ಯೆನೆಪೋಯ ದಂತ ಕಾಲೇಜು, ಎಜೆ ದಂತ ವಿಜ್ಞಾನಗಳ ಕಾಲೇಜುಗಳಲ್ಲಿನಡೆಯಲಿದೆ. ಅನುಭವಿ ತಜ್ಞರು ವಿವಿಧ ವಿಷಯಗಳಲ್ಲಿ ತರಬೇತಿ ನೀಡಲಿದ್ದಾರೆ ಎಂದು ಅವರು ಹೇಳಿದರು.

ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಡಾ. ಪ್ರವೀಣ್ ಜೋಡಳ್ಳಿ, ವೈಜ್ಞಾನಿಕ ಸಮಿತಿ ಅಧ್ಯಕ್ಷ ಡಾ. ಮಿಥುನ್ ಪೈ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!