ಅಭಿವೃದ್ಧಿ ಗೆ ಬಿಜೆಪಿ ಗೆಲುವು ಅವಶ್ಯಕ -ಸಲೀಲ್ ಮಾಸ್ಟರ್

ಮಿಯಪದವು : ಬಿಜೆಪಿ ಎಂದರೆ ಅಭಿವೃದ್ಧಿ, ಅಭಿವೃದ್ಧಿ ಯ ಹರಿಕಾರ ನರೇಂದ್ರ ಮೋದಿ, ಮೋದಿಯವರಿಗೆ ಶಕ್ತಿ ತುಂಬಲು ಕೇರಳದ ಗ್ರಾಮ ಗಳಲ್ಲಿ ತಾವರೆ ಅರಳಬೇಕಿದೆ ಎಂದು ಮುಸ್ಲಿಂ ಲೀಗ್ ಮಾಜಿ ನೇತಾರ ಇತ್ತೀಚಿಗೆ ಮೋದಿ ಅಭಿಮಾನಿಯಾಗಿ ಬಿಜೆಪಿ ಸೇರ್ಪಡೆ ಗೊಂಡ ಸಲೀಲ್ ಮಾಸ್ಟರ್ ಹೇಳಿದರು.


ಮೀoಜ ಬಿಜೆಪಿ ಕಾರ್ಯಕರ್ತರ ಸಮಾವೇಶ ದಲ್ಲಿ ಅವರು ಅತಿಥಿ ಯಾಗಿ ಭಾಗವಹಿಸಿದರು. ಕಾಂಗ್ರೆಸ್ ಎಂಬುವುದು ಕಾಸರಗೋಡು ಜಿಲ್ಲೆಯಲ್ಲಿ ನರಸತ್ತ ಪಕ್ಷ ಮುಸ್ಲಿಂ ಲೀಗ್ ನ ಬೆದರಿಕೆಗಳಿಗೆ ಬೆದರಿ ಕಾಂಗ್ರೆಸ್ ಇಂದು ನಾಶವಾಗಿದೆ.ಎಡರಂಗ ಹಾಗುಮುಸ್ಲಿಂ ಲೀಗ್ಒಂದೇ ನಾಣ್ಯದ ಎರಡು ಮುಖ ಗಳು, ಮುಸ್ಲಿಂ ಲೀಗ್ ತನ್ನ ಮತದಾರರನ್ನು ಬೆಳೆಯಲು ಬಿಡುವುದಿಲ್ಲ ಮುಸ್ಲಿಂ ಲೀಗ್ ಕೆಲವು ಕುಟುಂಬಗಳ ಸ್ವದಿನದಲ್ಲಿ ಕಾರ್ಯನಿರ್ವಹಿಸುವ ಪಕ್ಷ, ಮುಸ್ಲಿಂ ಲೀಗ್ ನಿರಂತರ ಗೆಲ್ಲುವ ಮಂಜೇಶ್ವರ ವಿ ಸಭಾ ವ್ಯಾಪ್ತಿ ಕೇರಳದಲ್ಲೇ ಅತ್ಯಂತ ಹಿಂದುಳಿದ ಪ್ರದೇಶ ಇಲ್ಲಿ ವಿದ್ಯಭ್ಯಾಸ, ಅರೋಗ್ಯ, ಉದ್ಯೋಗ, ಕ್ಕೆ ಈಗಲೂ ಜನತೆ ಮಂಗಳೂರನ್ನು ಅಶ್ರಯ ಪಡಬೇಕಾದ ಪರಿಸ್ಥಿತಿ.

ಮುಸ್ಲಿಂ ಜನರನ್ನು ಬೆದರಿಸಿ ತನ್ನ ವೋಟ್ ಬ್ಯಾಂಕ್ ರಾಜಕೀಯ ಮಾಡುವ ಮುಸ್ಲಿಂ ಲೀಗ್, ನಿಂದ ವಿದ್ಯಾವಂತ ಜನತೆ ಬಹೊರ ಹೋಗುತ್ತಿದ್ದಾರೆ.
ಎಂದು ಸಲೀಲ್ ಮಾಸ್ಟರ್ ಹೇಳಿದರು. ಬಿಜೆಪಿ ಯ ಗೆಲುವು ಅಭಿವೃದ್ಧಿ ಯ ಸಂಕೇತವಾಗಲಿದೆ ಎಂದು ಅವರಿಗೆ ಅಭಿಪ್ರಾಯ ಪಟ್ಟರು.

SHARE
Loading spinner

Leave a Reply

Your email address will not be published. Required fields are marked *

error: Content is protected !!