ಮಂಜೇಶ್ವರ : ಪತ್ನಿ ಮತ್ತು ಪುತ್ರಿಯ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಪತಿ ವಿರುದ್ಧ ಕುಂಬಳೆ ಪೊಲೀಸರು ನರಹತ್ಯಾಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಂಬಳೆ ಪರಿಸರದ ಎಡನಾಡು ಪೆರ್ಣೆ ಸೌಪರ್ಣಿಕಾ ನಿಲಯದ ಆಶಾ ಕುಮಾರಿ ಕೆ.ಎಸ್ (39), ಮಗಳು ನಕ್ಷಿತಾ (8) ಎಂಬಿವರನ್ನು ಹಲ್ಲೆಗೈದು ಗಾಯಗೊಳಿಸಿದ ದೂರಿನಂತೆ ಆಶಾ ಕುಮಾರಿಯ ಪತಿ ಕಣ್ಣೂರು ಚೆರುತ್ತಾಳಂ ಕಡನ್ನಪ್ಪಳ್ಳಿ ವಲಿಯಾಂಕೋಡ್ ಕುಲಾಪುರಂ ಕೂಲಿಯಾಡನ್ ವೀಟಿಲ್ ಸುರೇಶ್ (44) ಎಂಬಾತನ ವಿರುದ್ಧ ಈ ಪ್ರಕರಣ ದಾಖಲಾಗಿದೆ.
ಈ ತಿಂಗಳ 12ರಂದು ಸಂಜೆ ಮನೆಯಲ್ಲಿ ಸಂಬಂಧಿಯೊಬ್ಬರ ಮನೆಗೆ ಬರುತ್ತಿರುವುದನ್ನು ಪ್ರಶ್ನಿಸಿ ಆರೋಪಿ ತನ್ನ ಮೇಲೆ ಹಲ್ಲೆ ನಡೆಸಿ, ಸ್ಟೇರ್ ಕೇಸ್‌ಗೆ ತಲೆ ಬಡಿದು, ಕತ್ತಿಯಿಂದ ಬೀಸಿದನೆಂದೂ ಮಾತ್ರವಲ್ಲ ಪುತ್ರಿಯ ಮೇಲೆಯೂ ಹಲ್ಲೆ ನಡೆಸಿ ಹೊರಗೆ ದೂಡಿ ಹಾಕಿದನೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆಶಾ ಕುಮಾರಿ ಆರೋಪಿಸಿದ್ದಾರೆ.
Anyone remember playing Fish Prawn Crab as a kid? Happy to see it’s online now! fishprawncrab1 seems like a fun place to relive those memories and maybe win some cash. Check out fishprawncrab1!