ಮಂಗಳೂರು: ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವಾರ್ಷಿಕೋತ್ಸವ ಮತ್ತು ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮವು ನಗರದ ಅತ್ತಾವರ ವೈದ್ಯನಾಥ ನಗರ ಮೇನಕುಲಂಜಿ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಸಿಇಒ ಶಿವರಾಜ್ ವಹಿಸಿಕೊಂಡರು. ಸೇರಿದ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು ಮತ್ತು ನಿರ್ದೇಶಕರಾದ ಸದಾಶಿವ ಇವರು ಅತಿಥಿಗಳನ್ನು ಸ್ವಾಗತಿಸಿದರು ಕಾರ್ಯಕ್ರಮಗಳನ್ನು ಡಾ. ಶಿವಪ್ರಕಾಶ್ ಜಿಲ್ಲಾ ಶಾಸ್ತ್ರಕರು ಮತ್ತು ಅಧೀಕ್ಷಕರು ಬೆಲ್ಲ ಜಿಲ್ಲಾ ಆಸ್ಪತ್ರೆ ಮಂಗಳೂರು ಇವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಮತ್ತು ಉದ್ಘಾಟನಾ ಭಾಷಣವನ್ನು ಮಾತನಾಡುತ್ತಾ ಇಂತಹ ಮಾನವೀಯತೆಯ ಪ್ರೀತಿ ವಿಶ್ವಾಸದಿಂದ ಕೂಡಿದ ಸಂಸ್ಥೆಗಳು ಬೆಳೆಯಬೇಕು ಉಳಿಯಬೇಕು ಸಾವಿರಾರು ಅಸಾಹಾಯಕರಿಗೆ ಮತ್ತು ಜನರ ಕಣ್ಣುರಿಸಬೇಕು ಕೆಲಸ ಕಾರ್ಯಗಳ ಬಹಳ ಪುಣ್ಯದ ಕೆಲಸ ನಮ್ಮ ಜೀವನದಲ್ಲಿ ಸಿಕ್ಕಿದ ಅವಕಾಶಗಳನ್ನು ಇಂತಹ ಸಂಸ್ಥೆಗಳೊಂದಿಗೆ ಕೈಜೋಡಿಸಿ ಕೊಂಡು ಧೈರ್ಯದಿಂದ ಸೇವೆಗೆ ನಿರತರಾಗಬೇಕು ಎಂದರು ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಕೊಲ್ಲಾಡಿ ಬಾಲಕೃಷ್ಣ ರೈ ಅವರು ಸಂಸ್ಥೆಯನ್ನು ಸೃಷ್ಟಿಸಲು ನನ್ನ ಗುರುಗಳಾದ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾದ ನಿವೃತ್ತ ಜಸ್ಟಿಸ್ ಎಸ್ ಆರ್ ನಾಯಕರವರೆ ಪ್ರೇರಣೆ ಅವರ ಬೆಂಬಲದಿಂದ ನಮ್ಮ ಸಂಸ್ಥೆಯು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು. ಒಂದು ಕಡೆ ಆರ್ಥಿಕ ಮುಗ್ಗಟ್ಟು ಮತ್ತೊಂದು ಕಡೆ ಲಾಭದಾಯಕ ಲಾಭದಾಯಕವಲ್ಲದ ಕೇವಲ ಸಮಾಜ ಸೇವೆಯ ದೃಷ್ಟಿ ಮಾತ್ರ ಇರುವ ಕಾರಣಕ್ಕೆ ಕಾರಣಕ್ಕೆ ಸಂಸ್ಥೆಯ ಸದಸ್ಯರು ಉಳಿಯಲು ಬೆಲೆಯಲು ಹಿಂದೆ ಸರಿಯುತ್ತಾರೆ. ಇದರಿಂದಾಗಿ ಸಂಸ್ಥೆಯ ಬೆಳವಣಿಗೆಯ ವೇಗ ಕುಂಠಿತವಾಯಿತು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಜಿಲ್ಲಾಧ್ಯಕ್ಷರಾದ ಶ್ರೀ ಬಿ ಶೇಷಪ್ಪ ಬಂಬಿಳ ಇವರು ಸಂಸ್ಥೆಯ ಹುಟ್ಟು ಮತ್ತು ಉದ್ದೇಶಗಳನ್ನು ವಿವರಿಸಿತ್ತ ಸುಮಾರು 23 ವರ್ಷಗಳಿಂದ ಬೇರೆಬೇರೆ ಜಿಲ್ಲಾಧ್ಯಕ್ಷರಿಂದ ಬೆಳೆಯಲು ಪಟ್ಟ ಈ ಸಂಸ್ಥೆಗೆ ನನ್ನ ಕಾರ್ಯವೈಖರಿಯನ್ನು ತಿಳಿದ ಕೇಂದ್ರ ಸಮಿತಿಯು ಸುಮಾರು ಮೂರು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಮುಂದುವರಿಸುತ್ತಾ ಬಂದಿದ್ದು ನನ್ನ ಮನೋಕಾಮನೆಗಳಂತೆ ಸಮಾಜದ ವಿವಿಧ ರೀತಿಯ ಸಮಸ್ಯೆಗಳಿಗೆ ಸ್ಪಂದಿಸಲು ಸಾವಿರಾರು ಅಸಹಾಯಕರಿಗೆ ಸಹಾಯ ಮಾಡಲು ಅವಕಾಶ ದೊರೆಯಿತು ಎಂದರು ನಾವು ದುಡಿದ ಸಂಪಾದನೆಯ ಶೇಕಡವಾರುಗಳನ್ನು ಸಮಾಜಕ್ಕೆ ಲಕ್ಷಾಂತರ ರೂಪಾಯಿಗಳಂತೆ ಸುರಿಸಿ ಹಾಗೂ ನಮ್ಮ ಸಂಸ್ಥೆಯ ಸಮಾಜದಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡಿತು ಇತರ ಸಮಾಜ ಸೇವಾ ಸಂಸ್ಥೆಗಳಾದ ಮೇಕ್ ಸಮ್ ಒನ್ ಗ್ರೂಪ್ ಕಾರ್ಕಳ ಮತ್ತು ಶ್ರೀ ಉಗ್ಗಪ್ಪ ಪೂಜಾರಿ ನಾಟಿ ವೈದ್ಯರು ರಂಜಗಿರಿ ತಾವು ಇವರಿಗೆ ಸಮಾಜ ಸೇವಾ ಸಾಧಕರ ಸಾಧಕರಿಗೆ ಕೊಡಲ್ಪಡುವ ಕೊಲ್ಲಾಡಿ ಬಾಲಕೃಷ್ಣ ರೈ ಸ್ಥಾಪಕ ಅಧ್ಯಕ್ಷರು ಇವರ ಹೆಸರಿನಲ್ಲಿ ಸಾಧನಾ ಪ್ರಶಸ್ತಿಗಳನ್ನು ಮತ್ತು ಬಾಲ್ಯದಿಂದಲೇ ಭರತನಾಟ್ಯ ಜಾನಪದ ನೃತ್ಯ ಪಾಶ್ಚ್ಯಾತ್ಯ ನಿತ್ಯ ಚಿನ್ನದ ಚಿಲಿಪಿಲಿ ಚಿಗುರು ಜೂನಿಯರ್ ಮಸ್ತಿ ಆಳ್ವಾಸ್ ವಿದ್ಯಾರ್ಥಿ ಸಿರಿ ಜೆಸಿ ಇಂದ ಜೂನಿಯರ್ ಲಕ್ಷ್ಮಿ ಜೀ ಕನ್ನಡದ ಡ್ರಾಮಾ ಜೂನಿಯರ್ ಪ್ರಶಸ್ತಿ ಕರ್ನಾಟಕ ಸೀಸನ್ 2ನಲ್ಲಿ ಮಹಾನಟಿ ಚಿನ್ನದ ಕಿರೀಟ ಪಡೆದ ಕುಮಾರ ವಂಶಿ ರತ್ನಾಕರ್ ಇವರಿಗೆ ಕಲಾ ಸರಸ್ವತಿ ಸನ್ಮಾನ ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿ ಪ್ರಧಾನ ಮಾಡಿದ ನಂತರ ಪ್ರಶಸ್ತಿ ಪಡೆದ ಎಲ್ಲಾ ಸಂಸ್ಥೆಯವರು ಮತ್ತು ವ್ಯಕ್ತಿಗಳು ಸಂಸ್ಥೆಗೆ ಶುಭ ಹಾರೈಸಿದರು ವೇದಿಕೆಯಲ್ಲಿ ಶ್ರೀ ಬಿಂದುಸಾರ ಶೆಟ್ಟಿ ಅವರ ಇವರು ಮಾತನಾಡಿ ಸಂಸ್ಥೆಯ ಉದ್ದೇಶ ಮತ್ತು ಕಾರ್ಯವೈಕರಿ ವೈಕರಿಯನ್ನು ಲಾಗಿಸಿದರು ಮತ್ತು ಅನ್ಯಾಯವನ್ನು ಎದುರಿಸಿ ಶೋಷಿತ ಜನರ ಸೇವೆ ಮಾಡುತ್ತಾ ಕಣ್ಣೀರು ವರೆಸುವ ಧೈರ್ಯ ಬೇಕು ಮನಸ್ಸು ಕೂಡ ಬೇಕು ಈ ದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಶ್ರೀ ಬಿ ಶೇಷಪ್ಪ ಬಂಬಿಲ ಇವರು ಏಕಾಂಗಿಯಾಗಿಯೂ ಅನ್ಯಾಯವನ್ನು ಮೆಟ್ಟಿ ನಿಲ್ಲಲು ಆತ್ಮಸ್ಥೈರ್ಯ ಹೊಂದಿದ್ದಾರೆ ಇದು ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿದೆ ಎಂದರು.
ಸಂಸ್ಥೆಯಿಂದ ಇನ್ನಷ್ಟು ಸಮಾಜ ಸೇವೆ ನಡೆಯಲಿ ಎಂದು ಶುಭ ಹಾರೈಸಿದರು ಕೇಂದ್ರ ಸಮಿತಿಯ ನಿರ್ದೇಶಕರಾದ ವಿವೇಕ್ ಶೆಟ್ಟರ್ ಅವರು ಕಾರ್ಯಕ್ರಮದ ಬಗ್ಗೆ ಪ್ರಸನ್ ಪ್ರಶಂಶಿಸುತ್ತಾ ಎಲ್ಲಾ ಪದಾಧಿಕಾರಿಗಳಿಗೆ ನಿರ್ದೇಶಕರುಗಳಿಗೆ ಇನ್ನು ಹೆಚ್ಚಿನ ಸೇವೆಗೆ ಬದ್ಧರಾಗಿ ಮತ್ತು ಮುಂದೆ ಬರಬೇಕು ಎಂದರು ಸಮಾರಂಭದ ಅಧ್ಯಕ್ಷತೆ ವಹಿಸಿರುವ ಶ್ರೀಯುತ ಶಿವರಾಜ್ ಅಯ್ಯರ್ ಸಿಇಒ ಇವರು ಮಾತನಾಡುತ್ತಾ ಸಂಸ್ಥೆಯ ಕನಸಿನ ಮತ್ತು ದೇಹದ ಗುರಿ ಮುಟ್ಟಬೇಕಾದರೆ ಪದಾಧಿಕಾರಿಗಳು ನಿರ್ದೇಶಕರುಗಳು ಮನತುಂಬಿ ನಮ್ಮ ಸಂಸ್ಥೆ ಎಂಬ ಹೆಮ್ಮೆಯಿಂದ ಅಂತರಾಳದ ಉಮ್ಮಸ್ಸಿನಿಂದ ದುಡಿಯಬೇಕು ಇನ್ನೊಬ್ಬರ ಒತ್ತಾಯಕ್ಕೆ ಕೆಲಸ ಮಾಡಬಾರದು ಬದುಕಿನ ಹೋರಾಟದ ಜೊತೆಯಲ್ಲಿ ಅನ್ಯಾಯದ ವಿರುದ್ಧ ಹೋರಾಟವು ನಡೆಯಬೇಕು ಎಂದು ಕರೆಕೊಟ್ಟರು. ಕಾರ್ಯಕ್ರಮದ ಪ್ರಾರಂಭದಲ್ಲಿ ಕುಮಾರಿ ಪೂರ್ವಿ ಬಿ ಎಸ್ ಇವರ ಗಣೇಶ ಶ್ರುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು ದಿನೇಶ್ ಕೆ ಎಸ್ ಪದ್ಮನಾಭ ಅಲಪೆ ಸುಮನ್ ಕಂದ ದೇವರಾಜ್ ಶ್ರೀನಿವಾಸ ನಾಯಕ ಸುರೇಶ್ ಪೂಜಾರಿ ಪ್ರವೀಣ್ ಕುಮಾರ್ ಆನಂದ ಸೋಲ್ ಪ್ರವೀಣ್ ಇವರು ಹಾಜರಿದ್ದರು ನಿರ್ದೇಶಕರಾದ ಕಾರ್ಯಕ್ರಮವನ್ನು ಕುಮಾರಿ ವಾರುಣಿ ನಾಗರಾಜ್ ನಿರೂಪಿಸಿದರು ನಿರೂಪಿಸಿದರು. ಹಲವಾರು ಮಕ್ಕಳಿಂದ ಭರತನಾಟ್ಯ ನೃತ್ಯಗಳು ಹಾಡುಗಳ ಮನೋರಂಜನೆ ನಡೆಯಿತು.