ಮಂಜೇಶ್ವರ ಶ್ರೀ ಶನೈಶ್ಚರ ಮಂದಿರದಲ್ಲಿ ದೀಪೋತ್ಸವ, ರಥೋತ್ಸವ ಹಾಗೂ ದೈವದ ಕೋಲ

ಮಂಜೇಶ್ವರ: ತಾರೀಕು 22 /01 /2026 ಗುರುವಾರದಂದು ಬ್ರಹ್ಮಶ್ರೀ ಬಡಾಜೆ ಗೋಪಾಲ ಕೃಷ್ಣ ತಂತ್ರಿ ಯವರ ನೇತೃತ್ವದಲ್ಲಿ ಶ್ರೀ ಶನೈಶ್ಚರ ದೇವರ ವರ್ಷಾವಧಿ ಬಲಿ ಉತ್ಸವ .ಕಲ್ಲುರ್ಟಿ ದೈವ ಮತ್ತು ರಾಜ ಗುಳಿಗ ಕೋಲ ವು ವಿಜೃಂಭಣೆಯಿಂದ ಜರುಗಲಿರುವುದು.

ಅಂದು ಸಾಯಂಕಾಲ ಬೆಂಗಳೂರಿನ ಸೇವಾಕರ್ತರಾದ ಶ್ರೀ ಎನ್. ಕೆ ರಾಜ ಶಂಕರ್ ರವರಿಂದ ಶ್ರೀ ದೇವರಿಗೆ ಸಹಸ್ರ ದೀಪೋತ್ಸವ ನಡೆಯಲಿರುವುದು . ಶ್ರೀ ಆದಿಶಕ್ತಿ ಕುಣಿತಾ ಭಜನಾ ತಂಡ ಶನೈಶ್ಚರ ಮಂಜೇಶ್ವರ ತಂಡದಿಂದ ಕುಣಿತ ಭಜನೆಯು ನಡೆಯಲಿದೆ.

ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಮ್ಮ ಕಲಾವಿದೆರ್ ಬೆದ್ರ ತಂಡದ ಉಮೇಶ್ ಮಿಜಾರ್ ಬಳಗದವದಿಂದ ಬಲೇ ತೆಲಿಪಾಲೆ ಕಲಾವಿದರಿಂದ ತೆಲಿಕೆದ ಗೊಂಚಿಲ್ ನೋನ್ ಸ್ಟಾಪ್ ಕಾಮಿಡಿ ಸಾರಿ ಡಾನ್ಸ್ ,ಮಿಮಿಕ್ರಿ,ಸಿಂಗಿಂಗ್ ಕಾರ್ಯಕ್ರಮ ನಡೆಯಲಿದೆ.ತಾರೀಕು 22 ಗುರುವಾರದಂದು ಬೆಳಗ್ಗೆ ಪ್ರಾತಃ ಪೂಜೆ ನವಕ ಪ್ರಧಾನ ,ನಾವಕಾಭಿಷೇಕ ,ನೀರ ಬಲಿ ಉತ್ಸವ ,ದರ್ಶನ ಬಲಿ ,ಬೆಳ್ಳಿ ರಥೋತ್ಸವ , ಕಲ್ಲ ಪೂಜೆ , ಶ್ರೀ ದೇವರಿಗೆ ಮಹಾ ಪೂಜೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಶ್ರೀ ದೇವರಿಗೆ ಶ್ರೀ ರಂಗ ಪೂಜೆ ,ಶ್ರೀ ದೇವರ ಬಲಿ ಉತ್ಸವ , ರಥಾರೋಹಣ , ಶ್ರೀ ಶಸ್ತವೇಶ್ವರ ದೇವಸ್ಥಾನದವರೆಗೆ ರಥೋತ್ಸವ ನಡೆಯಲಿದೆ. ರಾತ್ರಿ ವಸಂತ ಕಟ್ಟೆ ಪೂಜೆ, ದರ್ಶನ ಬಲಿ ,ಬಟ್ಟಲು ಕಾಣಿಕೆ ,ಪ್ರಸನ್ನ ಪೂಜೆ ಹಾಗೂ ಪ್ರಸಾದ ವಿತರಣೆ ಇರುತ್ತದೆ.
ದೈವದ ಕೊಳವು ರಾತ್ರಿ 10 30 ಕ್ಕೆ ಸರಿಯಾಗಿ ಲ್ಲುರ್ಟಿ ದೈವ ಮತ್ತು ರಾಜಗುಳಿಗ ದೈವದ ಕೋಲ ಜರುಗಲಿರುವುದು.

SHARE
Loading spinner

Leave a Reply

Your email address will not be published. Required fields are marked *

error: Content is protected !!