ನೂತನ ಶೈಕ್ಷಣಿಕ ವರ್ಷಾರಂಭಕ್ಕೆ ಕ್ಷಣ ಗಣನೆ…….

ಪುಟ್ಟ ಕನಸುಗಳೊಂದಿಗೆ ದಿಟ್ಟ ಹೆಜ್ಜೆಯನಿಕ್ಕುತ ವಿದ್ಯಾದೇಗುಲಕ್ಕೆ ವಿದ್ಯಾರ್ಥಿಗಳು .
ಜೂನ್ 2 ರಂದು ನೂತನ ಅಧ್ಯಯನ ವರ್ಷ ಆರಂಭ

ಅಂತೂ ಇಂತೂ ಬೇಸಿಗೆ ರಜೆ ಕಳೆದು ಮತ್ತೊಂದು ನೂತನ ಶೈಕ್ಷಣಿಕ ವರ್ಷದ ಸ್ವಾಗತದಲ್ಲಿ,ಲವಲವಿಕೆಯೊಂದಿಗೆ ವಿದ್ಯಾರ್ಥಿ ಸಮೂಹ .ಜೂನ್ 2ರಂದು ರಾಜ್ಯದ ಎಲ್ಲಾ ಶಾಲೆಗಳು ಪುನರಾರಂಭಗೊಳ್ಳಲ್ಲಿದ್ದು ಈ ಮೂಲಕ 2025-2026 ರ ಸಾಲಿನ ನೂತನ ಶೈಕ್ಷಣಿಕ ವರ್ಷಾರಂಭಕ್ಕೆ ಸಿದ್ಧತೆ ನಡೆಸಲಾಗಿದೆ.


ಭವಿಷ್ಯದ ಹತ್ತು ಹಲವಾರು ಕನಸುಗಳೊಂದಿಗೆ ಪುಟ್ಟ ಪುಟ್ಟ ಹೆಜ್ಜೆಗಳಲ್ಲೊಂದಿಗೆ ನೂತನವಾಗಿ ಶಾಲೆಗೆ ಸೇರುವ ವಿದ್ಯಾರ್ಥಿಗಳನ್ನು ಹಾಗೂ ನೂತನ ಶಾಲಾರಂಭವನ್ನು ಪ್ರವೇಶೋತ್ಸವದ ಮೂಲಕ ಸ್ವಾಗತಿಸಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿದೆ.ಪಂಚಾಯತ್ ಮಟ್ಟದಿಂದ ಪ್ರವೇಶೋತ್ಸವ ನಡೆಸಲು ತೀರ್ಮಾನಿಸಲಾಗಿದೆ.ಪ್ರತಿ ವರ್ಷ ನೂತನ ಯೋಜನೆಗಳೊಂದಿಗೆ ಪ್ರವೇಶೋತ್ಸವ ಹಾಗೂ ಶಿಕ್ಷಣ ನೀತಿಯನ್ನು ಸರಕಾರ ರೂಪಿಸುತ್ತಿದ್ದು , 2025-2026 ನೇ ಸಾಲಿನ ಶಿಕ್ಷಣ ಆರಂಭವು ವಿನೂತನ ರೀತಿಯಲ್ಲಿ ನಡೆಯಲಿದೆ.

ಜೂನ್ ೨ರಂದು ಶಾಲೆ ಆರಂಭವಾದ ನಂತರ ಮೊದಲ 15 ದಿನ ನೀತಿ ಬೋಧನೆಯ ತರಗತಿ ನಡೆಯಲಿದೆ.ಅಂದರೆ ಮೊದಲ 15 ದಿನ ಯಾವುದೇ ಪಾಠಪುಸ್ತಕದ ಪಾಠವನ್ನು ಬೋಧಿಸದೆ ನಿತ್ಯ ಜೀವನದಲ್ಲಿ ಹಾಗೂ ವಿದ್ಯಾರ್ಥಿ ಜೀವನದಲ್ಲಿ ನಾವು ಅನುಸರಿಸಬೇಕಾದ ಶಿಸ್ತು, ಕ್ರಮಗಳ ಬಗ್ಗೆ ವಿಶೇಷ ತರಗತಿ ನಡೆಸಲಾಗುವುದು .ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿ ಸಮೂಹ ಡ್ರಗ್ಸ್ ,ಗಾಂಜಾ ದಂತಹ ಅಮಲು ಪದಾರ್ಥ ಸೇವನೆ ಹಾಗೂ ಇದರಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲಾಗುವುದು.


ವಿದ್ಯಾರ್ಥಿ ಸಮೂಹದಲ್ಲಿರುವ ಪರೀಕ್ಷಾ ಭಯ,ಆತಂಕ ಇದರ ನಿವಾರಣೆ ಮತ್ತು ಆತ್ಮಹತ್ಯೆಯಂತಹ ನಿರ್ಧಾರ ಮಾಡುವ ವಿದ್ಯಾರ್ಥಿ ಸಮೂಹ ಇದನ್ನು ತಡೆಗಟ್ಟುವ ಬಗ್ಗೆ ವಿಶೇಷ ತರಗತಿ ಹಾಗೂ ಮಾರ್ಗದರ್ಶನ ನೀಡಲಾಗುವುದು.ಈ ಮೂಲಕ ವಿದ್ಯಾರ್ಥಿಗಳಿಗೆ ಮಾನಸಿಕ ಸ್ಥೆರ್ಯ ತುಂಬುವ ಬಗ್ಗೆ ವಿಶೇಷ ತರಗತಿಗಳನ್ನು ನೀಡಿ,ಉತ್ತಮ ಭವಿಷ್ಯವನ್ನು ರೂಪಿಸಿಕೊಂಡು ಆದರ್ಶವಾದ ವ್ಯಕ್ತಿ ಜೀವನದ ನಿರೂಪಣೆಗೆ ಸಿದ್ಧತೆ ಮಾಡಲಾಗುವುದು.
ಜೂನ್ 2 ರಂದು ಎಲ್ಲಾ ಶಾಲೆಗಳು ಪುನರಾರಂಭಗೊಳ್ಳಲ್ಲಿದ್ದು ,ಈಗಾಗಲೇ ಶಾಲೆಗಳಲ್ಲಿ ಸಿದ್ಧತೆ ನಡೆಯುತ್ತಿದೆ.ಈ ವರ್ಷ ಮುಂಗಾರುಮಳೆ ಶಾಲಾರಂಭಕ್ಕೆ ಮುನ್ನವೇ ಆರಂಭವಾಗಿದ್ದು ,ಸುಡು ಬಿಸಿಲಿನ ಬೇಗೆಯಿಂದ ವಿದ್ಯಾರ್ಥಿಗಳು ಪಾರಾಗಿದ್ದಾರೆ.


ಈ ಮದ್ಯೆ ದೇಶಾದ್ಯಂತ ಹರಡುತ್ತಿರುವ ಕೊರೋನಾ ಸೋಂಕು ರಾಜ್ಯದಲ್ಲೂ ಪಸರಿಸುತ್ತಿದ್ದು ಶಾಲಾರಂಭದಲ್ಲೇ ಅಲ್ಪ ಆತಂಕವನ್ನು ಉಂಟುಮಾಡಿದೆ.ಸೋಂಕು ಹರಡುವಿಕೆ ವ್ಯಾಪಕವಾದಲ್ಲಿ ಶಾಲಾರಂಭದಲ್ಲಿ ಕಟ್ಟುನಿಟ್ಟಿನ ಕ್ರಮಗಳು ಬಂದರೆ ಕೊರೋನಾ ಒಂದನೇ ಹಾಗೂ ಎರಡನೇ ಅಲೆಯಲ್ಲಿ ಆದ ಕಹಿ ನೆನಪು ಮತ್ತೆ ಮರುಕಳಿಸಬಹುದು.ಹಾಗೆ ಆಗದಿರಲಿ ಎಂಬುವುದೇ ನಮ್ಮೆಲ್ಲರ ಆಶಯವಾಗಿದೆ.
ಒಟ್ಟಿನಲ್ಲಿ ನಿತ್ಯ ವಿನೂತನ ಯೋಜನೆಯೊಂದಿಗೆ ಪುಟ್ಟ ಕನಸುಗಳೊಂದಿಗೆ ದಿಟ್ಟ ಹೆಜ್ಜೆಯನಿಕ್ಕುತ ವಿದ್ಯಾ ದೇಗುಲಕ್ಕೆ ಪ್ರವೇಶಿಸುವ ಎಲ್ಲಾ ವಿದ್ಯಾರ್ಥಿ ಸಮೂಹಗಳಿಗೆ ಶುಭಾಶಯಗಳು .

SHARE
Loading spinner

Leave a Reply

Your email address will not be published. Required fields are marked *

error: Content is protected !!