ಹುಳಿ ಹಿಂಡುವ ವಿಷಯದಲ್ಲಿ ಹಾಲಿನ ಕಥೆ

“ಮನುಷ್ಯನಿಗೆ ಪ್ರೇರಣೆ”

ಒಂದು ಸಲ ಹಾಲು ತುಂಬಾ ಬೇಜಾರ್ ಮಾಡಿತ್ತಂತೆ, ನಾನು, ಕುಡಿಯಲು, ದೇವರ ಪೂಜೆಗೆ, ಚಾ, ಕಾಫಿಗೆ, ಇನ್ನಿತರ ಆಹಾರ ಪದಾರ್ಥ ಗಳಿಗೆ ಬೇಕು, ಆದ್ರೆ ರಾತ್ರಿಯಾಗ ಬೇಕಾದ್ರೆ ನನಗೆ ಹುಳಿ ಹಿಂಡಿ ಬಿಡ್ತಾರೆ, ಇದು ಯಾಕೆ ಹೀಗೆ ಅಂತ ದೇವರಲ್ಲಿ ಹೇಳಿ ಕೊಳ್ತದೆ.

ಅದಕ್ಕೆ ದೇವರು ನಕ್ಕು ತುಂಬಾ ನಯವಾಗಿ ಹೇಳಿದರಂತೆ….

ನೋಡು ನಿನ್ನ ಮೇಲೆ ಹುಳಿ ಹಿಂಡಿದರೆ ನೀನು ಮೊಸರು ಆಗುತ್ತಿ, ನಂತರ, ಪಣ್ಣೀರ್,ಮಜ್ಜಿಗೆ, ಬೆಣ್ಣೆ, ತುಪ್ಪ, ಆಗುತ್ತಿ….. ನಿನ್ನ ಬೆಲೆ ಜಾಸ್ತಿ ಆಗುತ್ತೆ ಹೊರತು ಕಡಿಮೆಯಾಗುವುದಿಲ್ಲ, ಲೀಟರ್ ಹಾಲಿಗೆ 50 ರೂಪಾಯಿ ಇದ್ದ ನೀನು ಹುಳಿ ಹಿಂಡಿದ ನಂತರ ತುಪ್ಪ ಆಗಿ ಸಾದಾರಣ ಲೀಟರ್ ಗೆ 800 ರೂಪಾಯಿ ಹತ್ತಿರ ಬರ್ತೀಯ,,, ಹಾಲು ಆದ್ರೆ ಒಂದು ದಿನದಲ್ಲೇ ಹಾಳಾಗುತ್ತಿ, ತುಪ್ಪ ಆದ್ರೆ ಸಾದಾರಣ 8 ತಿಂಗಳ ವರೆಗೆ ಇರುತ್ತಿ ಅಂತ ದೇವರು ಹೇಳುವಾಗ ಹಾಲು ಸಂತೋಷದಿಂದ ಒಪ್ಪಿತ್ತಂತೆ 🙏
ಇಷ್ಟೆಲ್ಲಾ ಆಗ್ಬೇಕಾದ್ರೆ ಸ್ವಲ್ಪ ಕಷ್ಟ, ಸಮಯ, ತಾಳ್ಮೆ, ಬೇಕಾಗುತ್ತದೆ.

ಅದೇ ರೀತಿ ಮನುಷ್ಯನ ಜೀವನದಲ್ಲಿ ಹುಳಿ ಹಿಂಡುವವರು ಇರಬಹುದು, ಎಲ್ಲವನ್ನೂ ಸಹಿಸಿ ನಮಗೆ ಬೆಲೆ ಸಿಗುವವರೆಗೂ ಬೆಳೆಯಬೇಕು 🙏

ವಂದನೆಗಳೊಂದಿಗೆ 🙏

❣️ಸ್ನೇಹಜೀವಿ❣️

✍️ಬರಹ :-ಉದಯಮಲ್ಲಿ ಅಮ್ಮ್ಚಿ ಕೆರೆ, ಬೆದ್ರಡ್ಕ, ಸಿರಿಬಾಗಿಲು, ಕಾಸರಗೋಡು

SHARE
Loading spinner

Leave a Reply

Your email address will not be published. Required fields are marked *

error: Content is protected !!