ಇನ್ನು ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಒಂದು ತಲೆಮಾರಿನ ಜನ ಸಂಪೂರ್ಣವಾಗಿ ಕಾಣೆಯಾಗುತ್ತಾರೆ

ರಾತ್ರಿ ಬೇಗ ಮಲಗುವವರು..
ಬೆಳಿಗ್ಗೆ ಬೇಗ ಏಳುವವರು…
ನಸುಕಿನಲ್ಲಿ ವಾಯುವಿಹಾರ
ಮಾಡುವವರು..
ಅಂಗಳ ಹಾಗೂ ಗಿಡಬಳ್ಳಿಗಳಿಗೆ
ನೀರುಣಿಸುವವರು…
ಮುಂಜಾನೆ ದೇವರ ಪೂಜೆಗೆ
ಹೂ ಕೊಯ್ಯುವವರು..
ಪ್ರತಿದಿನ ದೇವಸ್ಥಾನ, ಮಂದಿರಗಳಿಗೆ ಹೋಗುವವರು..
ದಾರಿಯಲ್ಲಿ ಕಂಡಾಗ ಆತ್ಮೀಯವಾಗಿ ಮುಗುಳ್ನಗುವವರು..
ಜನರ ಸುಖ ದುಃಖಗಳನ್ನು ವಿಚಾರಿಸುವವರು..
ಎರಡೂ ಕೈಗಳಿಂದ ಆತ್ಮೀಯ ವಾಗಿ ನಮಸ್ಕರಿಸುವವರು….


ಹಳೆಯ ಟೆಲಿಫೋನ್
ಬಳಸುವವರು….
ದಿನಚರಿ ಬರೆಯುವವರು…
Wrong ನಂಬರ್ ಕರೆ
ಬಂದರೂ ಸೌಜನ್ಯದಿಂದ ಒಂದೆರಡು ಮಾತುಗಳನ್ನು
ಆಡುವವರು…
ವರ್ತಮಾನ ಪತ್ರಿಕೆಯನ್ನು
ಓದುವವರು…
ವ್ರತ ನಿಯಮ ಪಾಲಿಸುವವರು.
ಸಮಾಜಕ್ಕೆ ಹೆದರುವವರು….
ಹಳೆಯ ಚೆಡ್ಡಿ, ಪಂಚೆ, ಚಪ್ಪಲಿ,
ಬನಿಯನ್ ಧರಿಸುವವರು..
ಮನೆಯಲ್ಲಿಯೇ ಅಡಿಗೆ ಮಾಡಿ ಊಟ ಮಾಡುವವರು,
ಉಪ್ಪಿನಕಾಯಿ, ಹಪ್ಪಳ, ಸಂಡಿಗೆ
ಮನೆಯಲ್ಲೇ ಮಾಡುವವರು..
ಮನೆಯಲ್ಲೇ ಮಸಾಲೆ
ರುಬ್ಬುವವರು….
ಕುಂಕುಮದ ನೀರಲ್ಲಿ ದೃಷ್ಟಿ ತೆಗೆಯುವವರು..
ಬೀದಿ ಬದಿಯ ವ್ಯಾಪಾರದವರೊಡನೆ ಚೌಕಾಸಿ ಮಾಡುವವರು… ಏಕೆಂದರೆ ಆವಾಗಿನ ಕಾಲದಲ್ಲಿ ಹಣಕ್ಕೆ ಬೆಲೆ ಇರುತ್ತಿತ್ತು.
ಮಕ್ಕಳನ್ನು ಮನೆಯಲ್ಲಿ ಬೆಳಸುವವರು,
ಮಕ್ಕಳ ಜೊತೆ ಆಟ ಆಡುವ
ತಂದೆತಾಯಿಯರು,
ಅಜ್ಜ, ಅಜ್ಜಿ ಯರ ಜೊತೆ ಆಡುವ ಮೊಮ್ಮಕ್ಕಳು, ಹಾಗೂ
ಮುತ್ತಜ್ಜ, ಮುತ್ತಜ್ಜಿಯರು, ಮೊಮ್ಮಕ್ಕಳಿಗೆ ಕಥೆ ಹೇಳುವ
ಅಜ್ಜ ಅಜ್ಜಿಯರು,ಮನೆಯಲ್ಲಿ ತಮ್ಮ – ತಂಗಿಯರಿಗೆ ಪಾಠ ಹೇಳುತ್ತಿದ್ದ ಅಣ್ಣ – ಅಕ್ಕಂದಿರು,
ಚಿಕ್ಕಪ್ಪ- ಚಿಕ್ಕಮ್ಮ,ದೊಡ್ಡಪ್ಪ – ದೊಡ್ಡಮ್ಮ,ಅಣ್ಣ – ತಮ್ಮ , ಅಕ್ಕ – ತಂಗಿ ,ಸೋದರ ಮಾವ – ಸೋದರ ಅತ್ತೆ,ಸೋದರ ಅಳಿಯ,ಸೋದರ ಸೊಸೆ, ಭಾವ,ನಾದಿನಿ,ಭಾಮೈದ , ಮೈದ, ನೆಗೆಣ್ಣಿಯರು,ಚಿಕ್ಕ ಮಾವ,ಚಿಕ್ಕ ಅತ್ತೆ,ದೊಡ್ಡ ಮಾವ,ದೊಡ್ಡ ಅತ್ತೆ,ದೊಡ್ಡ ಅಜ್ಜಿ,ದೊಡ್ಡ ಅಜ್ಜ,ಚಿಕ್ಕ ಅಜ್ಜ ,ಚಿಕ್ಕ ಅಜ್ಜಿ ಇನ್ನೂ ಅನೇಕರು ಸಮಾಜದಿಂದ ಬಳಕೆಯಿಂದ ಕಾಣೆ ಯಾಗಲಿದ್ದಾರೆ…!


ಈಗ ನಿಮಗೆ ಯಾರಿಗಾದರೂ ಮೇಲಿನ ಬಂಧು ಬಾಂಧವರು ಇದ್ದರೆ ನೀವೇ ಪುಣ್ಯವಂತರು..!
ಇಂಥವರು ಇನ್ನು ಹೆಚ್ಚು
ವರ್ಷ ನಮ್ಮೊಂದಿಗಿರುವುದಿಲ್ಲ…
ಅವರೊಂದಿಗೆ … ಅವರ ಜೊತೆಜೊತೆಗೇ ಅಮೂಲ್ಯವಾದ ಜೀವನಪಾಠಗಳೂ ಕಣ್ಮರೆ ಯಾಗುತ್ತವೆ…
ಇನ್ನೊಂದು ವಿಷಯವೇನೆಂದರೆ 1960 ನಂತರದಲ್ಲಿ ಜನಿಸಿರುವ ಅಂತ ಜನವೇ ಭಾಗ್ಯವಂತರು ಏಕೆಂದರೆ ಮೇಲಿನ ಎಲ್ಲಾ ಸಂಬಂಧಗಳನ್ನು ನೋಡಿರುವರು ಮತ್ತು ಹಿಂದಿನ ಕಾಲ ವನ್ನು ಮತ್ತು ಇಂದಿನ ಕಾಲ ವನ್ನು ಎರಡನ್ನು ನೋಡಿ ಅನುಭವಿಸಿರುವರು ಎತ್ತಿನ ಗಾಡಿಯಿಂದ ಹಿಡಿದು ಸೈಕಲ್ಲು ಬೈಕ್ ಕಾರಿನವರೆಗೆ. ರೇಡಿಯೋ ದಿಂದ ಹಿಡಿದು ಟಿವಿ, ಮೊಬೈಲ್ ಇಂಟರ್ನೆಟ್ ವರೆಗೂ. ಚಿನ್ನಿದಾಂಡು, ಕುಂಟೆ ಪಿಲ್ಲೆ, ಕಬ್ಬಡ್ಡಿ, ಮರಕೋತಿ ಕ್ರಿಕೆಟ್ ಈ ತರದ ಎಲ್ಲಾ ಆಟದಿಂದ ಜಿಮ್ ವರೆಗೂ ಬಡತನ ಮಾಧ್ಯಮ ವರ್ಗದಿಂದ ಹಾಗೂ ಉನ್ನತಿಯವರೆಗೂ ನೋಡಿರುವ ಜನಗಳು
ಸರಳ ಸುಂದರ ಬದುಕು…
ಪ್ರೇರಣೆ ತುಂಬುವ ಬದುಕು…
ನಾಟಕೀಯತೆಯಿಲ್ಲದ ಬದುಕು,
ಧರ್ಮದ ದಾರಿ ತೋರುವ ಬದುಕು, ಇತರರಿಗಾಗಿ
ಸ್ಪಂದಿಸುವ ಹಸನ್ಮುಖೀ ಬದುಕು.
ಈ ಸ್ವಭಾವದ ಒಂದು ತಲೆಮಾರಿನ ಜನರೆಲ್ಲ ಇನ್ನು ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಸಂಪೂರ್ಣ ಕಾಣೆಯಾಗುತ್ತಾರೆ. ಆದ್ದರಿಂದ ಇಂಥವರಿಂದ ಜೀವನಾನುಭವ ಕಲಿಯುವ ಮೂಲಕ ಸಂಸ್ಕ್ರತಿ ಉಳಿಸೋಣ.

❣️ಸ್ನೇಹಜೀವಿ❣️

ಸಂಗ್ರಹ – ಉದಯಮಲ್ಲಿ ಅಮ್ಮ್ಚಿ ಕೆರೆ ಬೆದ್ರಡ್ಕ ಸಿರಿಬಾಗಿಲು

SHARE
Loading spinner

Leave a Reply

Your email address will not be published. Required fields are marked *

error: Content is protected !!