ರಾಯರು ಬೆಳ್ಳಂಬೆಳಗ್ಗೆ, ಬಿಸಿ ಕಾಫಿಯನ್ನು ಹೀರುತ್ತಾ, ತನ್ನ ಪತ್ನಿಯನ್ನು ಕರೆದು ಹೇಳುತ್ತಾರೆ, ಮಗಳು ದೊಡ್ಡವಳಾಗುತ್ತಾ, ಬರ್ತಿದ್ದಾಳೆ, ನನ್ನ ಎಲ್ಲಾ ಆಸ್ತಿಯನ್ನು, ಅವಳಿಗೆ ಬರೀಬೇಕು, ವಕೀಲರನ್ನು ಕರೆಸು ಎಂದು.
ಅದಕ್ಕೆ ಹೆಂಡತಿ ನಯವಾಗಿ ಹೇಳುತ್ತಾಳೆ, ಅದಕ್ಕೆ ಯಾಕೆ ಅವಸರ,?….. ಅವಾಗ ರಾಯರು, ಛೆ ಹಾಗಲ್ಲ, ಈಗಿನ ಮನುಷ್ಯನ ಮರಣ ಹೇಗೆ ಅಂತ ಹೇಳಲು ಆಗೋದಿಲ್ಲ..ಅದಕ್ಕೆ …
ಛೆ…. ಬಿಡ್ತು ಅನ್ನಿ ಅಂತ ಕಾಫಿ ಕಪ್ಪನ್ನು ಕೈಗೆತ್ತಿ, ಒಳನಡೆದಳು.
ಹೊರಗೆ ಕಾರಿನ ಸ್ವರ ಕೇಳಿದ ಕೂಡಲೇ ಎದ್ದು, ಹೊರಗೆ ಹೋದರು, 2 ದಿವಸ ಶಾಲಾ ಪ್ರವಾಸಕ್ಕೆ ಹೋದ ಮಗಳನ್ನು, ತಬ್ಬಿಕೊಂಡು, ಹೇಗಿತ್ತು ಪ್ರವಾಸ ಅಂದ್ರು, ಸೂಪರ್ ಪಾ ಅಂತ ಮಗಳಲ್ಲಿ ಒಂದು ಸಂತಸದ ನಗು…
ಡ್ರೈವರ್ ಬ್ಯಾಗನ್ನು ಒಳಗೆ ಕೊಂಡು ಹೋಗಿ ಕಾರನ್ನು ವಾಟರ್ ಸರ್ವೀಸ್ ಗೆ ಇಟ್ಟು, ರಾಯರೇ ನಾನು ರೆಸ್ಟ್ ತೆಗೆಯಲು ಹೋಗುತ್ತೇನೆ ಅಂತ ರೂಮ್ ಕಡೆ ಹೋದ……!
ರಾಯರಿಗೆ ಈಗ ಮಗಳದ್ದೇ ಯೋಚನೆ, ಮಗಳನ್ನ ಉತ್ತಮ ಒಬ್ಬ ವ್ಯಕ್ತಿಗೆ ಮದುವೆ ಮಾಡಿಸಿ ಚಿರನಿದ್ರೆ ಗೆ ಜಾರುವುದು..!
ಮಗಳ ಕೋಣೆಗೆ ಹೋದ ರಾಯರು, ಮೊಬೈಲ್ ನಲ್ಲೇ ತಲ್ಲೀನಳಾದ ಮಗಳನ್ನು ಕೇಳಿದರು, ಮಗಳೇ, ಮದುವೆ ಪ್ರಾಯಕ್ಕೆ ಬಂದು ನಿಂತಿದ್ದೀಯಾ, ಬಹಳ ಅದ್ದೂರಿಯಾಗಿ, ಮದುವೆ ಮಾಡಿ ಕಣ್ಣು ತುಂಬಬೇಕು, ನನ್ನ ಜೀವನದಲ್ಲಿ ಉಳಿದಿರುವ ಆಸೆ ಅದೊಂದೇ… …..! ಯಾರನ್ನದರೂ ಇಷ್ಟ ಪಟ್ಟಿದ್ರೆ ಹೇಳಮ್ಮಾ..
ಛೆ.. ಇಲ್ಲಪ್ಪಾ,,,,,! “ನೀವೇ ಸಾಕಿದಾ, ನಿನ್ನ ಮುದ್ದಿನಾ ಗಿಣಿ ಅಲ್ವಾ ನಾನೂ….. ನಿಮ್ಮ ಆಸೆಗೆ ,ತಕ್ಕಂತೆ ನೀವೂ ನೋಡಿದ ಹುಡುಗನೇ ಸಾಕು.. ಐ ಲವ್ ಯೂ ಪಾ 💞”
ರಾಯರ ಮನಸಲ್ಲಿ ಒಂದು ನೆಮ್ಮದಿ, ಅಬ್ಬಾ, ಈಗಿನ ಮಕ್ಕಳನ್ನು ಜಾಗ್ರತೆ ಮಾಡಬೇಕು, ಇಲ್ಲಾಂದ್ರೆ… ತುಂಬಾ ನೋವು ಕೊಟ್ಟು ಹೋಗ್ತಾರೆ, ನನ್ನ ಮಗಳು ಹಾಗಲ್ಲಪ್ಪಾ, ಅಂತ ನಿಟ್ಟುಸಿರು ಬಿಟ್ಟರು, ಅಷ್ಟರಲ್ಲಿ ರಾಯರ ಹೆಂಡತಿ…. ನೀವು ಅಪ್ಪ ಮಗಳು ಹೀಗೆ ಮಾತಾಡ್ತಾ ಇರಿ, ನನಗೆ ಸಾಕಾಯ್ತು, ಅಬ್ಬಾ….ಅಡುಗೆಗೆ ಒಂದು ಸಹಾಯ ಆದ್ರೂ ಮಾಡಬಾರದಾ…..?. ಹುಂ ಹೋಗಿ ಊಟ ಮಾಡಿ,
ಅದಕ್ಕೆ ರಾಯರು ನಿನ್ನಲ್ಲಿ ಹೇಳಿದ್ದೆ ಮನೆಕೆಲಸಕ್ಕೆ ಒಂದು ಹೆಂಗಸನ್ನು ಬರಲು ಹೇಳೋಣ ಅಂತ, ನೀನು ಕೇಳ್ಬೇಕಲ್ವೇ…?
ಹೌದು ಕೆಲಸದವಳ ಅಡುಗೆ ರುಚಿ, ನನ್ನ ಕೈ ರುಚಿಯ ಹಾಗೆ ಸಿಗುತ್ತದಾ.? ನನ್ನ ಮುದ್ದಿನ ಮಗಳಿಗೆ, ಅವಳಿಗೆ ನಾನು ತಾನೇ ಆಗ್ಬೇಕು, ಅಂತ ತುಸು ನಕ್ಕು, ಅಡುಗೆ ಮನೆಗೆ ಹೋದಳು, ಬಾಮ್ಮಾ ನಡಿ ಊಟ ಮಾಡೋಣವಂತೆ, ಅಂತ ರಾಯರು, ಮಗಳು ಡೈನಿಂಗ್ ಟೇಬಲ್ ಮುಂದೆ ಕುಳಿತರು.
ಊಟ ಮಾಡಿ ಮುಗಿಯುವಷ್ಟರಲ್ಲಿ, ಪಕ್ಕದ ಮನೆಯ ತನ್ನ ಜೊತೆ ಕಲಿಯುವ ಹುಡುಗ, ಬಂದು ಹೇಳಿದ, ನಾಳೆ ಬೆಳಗ್ಗೆ 6 ಗಂಟೆಗೆ ಸ್ಕೂಲ್ ಗೆ ಹೋಗಬೇಕಂತೆ, ನಮ್ಮ ಕಾರ್ ಸರಿ ಇಲ್ಲ, ನಿಮ್ ಜೊತೆ ನಾನು ಬರ್ತೇನೇ ಒಟ್ಟಿಗೆ ಹೋಗೋಣವೇ…?.. ಅದಕ್ಕೆ ಮಗಳು ಆಯ್ತು ಅಂದಳು, ಡ್ರೈವರ್ ಗೆ ಫೋನ್ ಮೂಲಕ 6 ಗಂಟೆಗೆ ಬರಲು ಮೆಸೇಜ್ ಮಾಡಿದಳು
ಬೆಳಗ್ಗೆ ಸರಿಯಾಗಿ 6 ಗಂಟೆಗೆ ಡ್ರೈವರ್ ಬಂದ… ಅಪ್ಪ ಅಮ್ಮನಿಗೆ ವಿಶ್ ಮಾಡಿ ಕಾರು ಹತ್ತಿದಳು, ಆಗಷ್ಟೇ ಪಕ್ಕದ ಮನೆ ಹುಡುಗನೂ ಬಂದ,,,,
ನಮ್ಮ ವಿಷಯ ಏನಾದ್ರೂ ತಂದೆಗೆ ಗೊತ್ತಾಯ್ತಾ…. ಅಂತ ಡ್ರೈವರ್ ಕೇಳೇ ಬಿಟ್ಟ ಅವಳಲ್ಲಿ … ಪಕ್ಕದ ಮನೆ ಹುಡುಗ ಏನು..?
ಅಷ್ಟರಲ್ಲಿ ಇಬ್ರೂ ಮೌನ…
ಶಾಲೆ ತಲುಪಿದ ಕೂಡಲೇ ಹುಡುಗ ಇಳಿದು ಹೋದ…!
ಮತ್ತೆ ಶುರುವಾಯಿತು ಮಾತುಗಳು
ಹೌದು ಅಪ್ಪ ಯಾರಾನ್ನಾದರೂ, ಪ್ರೀತಿಸುತ್ತಿದ್ದಿಯಾ , ಅಂತ ಕೇಳಿದ್ರು, ಇಲ್ಲ ಅಂದೆ, ಏನ್ಮಾಡೋದು ಚಂದ್ರು ಅಂದ್ಲು
ಧೈರ್ಯವಾಗಿ ಹೇಳಿಬಿಡು….
ಇಲ್ಲಪ್ಪಾ ನನ್ನ ಕೈಯಲ್ಲಿ ಆಗಲ್ಲ….
ನೋಡುವ… ಸಮಯ ಬರ್ಲಿ, ಆಮೇಲೆ ನಾನೇ ಹೇಳುವ, ಈಗ ನೀನು ಶಾಲೆಗೆ ಹೋಗು,,,,,
ಆಯ್ತು ಅಂತ ಅಪ್ಪುಗೆಯ ಬಿಸಿ ಮುತ್ತನ್ನಿತ್ತು ಶಾಲೆಗೆ ನಡೆದಳು…
ಡ್ರೈವರ್ ಮನಸಿನಲ್ಲಿಯೆ ನೆನೆಯುತ್ತಾ. .. ಇವಳನ್ನ ಕಿಡ್ನಾಪ್ ಮಾಡೋದು, ಆಮೇಲೆ ಇವಳ, ಒಡವೆಗಳನ್ನು ತರಲು ಹೇಳುವುದು,ಮದುವೆ ಆದ್ಮೇಲೆ ಒಂದು ವರ್ಷ ಬಿಟ್ಟು, ಆಸ್ತಿ,ನಮ್ ಹೆಸರಲ್ಲಿ ಬರೆಯಲು ಹೇಳೋದು,ಕಿರಿ ಕಿರಿ ಯಜಮಾನರಿಗೆ ಇದೇ ಮದ್ದು, ಸಂಬಳನೂ ಸರಿ ಕೊಡಲ್ಲ, ಇವರಿಗೆ ಹೀಗೇನೆ ಬುದ್ಧಿ ಕಲಿಸಬೇಕು, ಕೇಸ್ ಕೊಟ್ರೆ ಪರ್ವಾಗಿಲ್ಲ, ಅವಳು ನನ್ನ ಇಷ್ಟ ಅಂದ್ರೆ ಎಲ್ಲಾ ಮುಗಿದೋಯ್ತು, ಇವತ್ತು ಎಲ್ಲಾದ್ರೂ ರೂಮ್ ಮಾಡಿ, ಸಂಜೆ ಮನೆ ತಲುಪಿದರೆ ಸಾಕು,ಹುಡುಗನಿಗೆ, ಅವನಿಷ್ಟ ಫುಡ್ ಕೊಟ್ಟು ಕಾರಲ್ಲೇ ಇರಲು ಹೇಳೋಣ, ಅವಳು ನನ್ನನ್ನು ಬಿಟ್ಟಿರಬಾರದು ಆತರ ಮಾಡಿ ಬಿಡ್ಬೇಕು… ಅಂತ ಯೋಚಿಸುವಾಗಲೇ, ಅವರು ಬಂದೇ ಬಿಟ್ರು, ನೆನೆಸಿದ ಎಲ್ಲಾ ಕಾರ್ಯ ಮುಗಿಸಿ…!!!*ಸಂಜೆ ಮನೆಗೆ ಬಂದ್ರು,, ಹುಡುಗಿ ನೇರ ಮನೆ ಒಳಗೆ ಹೋದ್ಲು,,,,
ರಾಯರು ಡ್ರೈವರಲ್ಲಿ…. ನೋಡು ನನಗೆ ಗಂಡು ಮಗು ಅಂತಾ ಇಲ್ಲ ಅದರ ಕೊರತೆನೂ ಬರ್ಲಿಲ್ಲ, ಯಾಕೆಂದ್ರೆ ಆ ಪ್ರೀತಿ ನಿನ್ನಲ್ಲಿ ತೋರಿಸಿದ್ದೇನೆ, ನಿನಗೆ ಬೈದಿದ್ದೇನೆ, ಸಂಬಳನೂ, ಸರಿ ಕೊಟ್ಟಿಲ್ಲ, ಯಾಕೆ ಗೊತ್ತಾ, ನೀನು ಮಗನ ತರ ಇರುವಾಗ, ಕೆಲಸದವನೂ ಅಂತ ನಿನ್ನನ್ನು ನೋಡೋದು ಸರಿ ಅಲ್ಲ ಅಲ್ವಾ?… ನನ್ನ ಆಸ್ತಿಯ 25%, ಮತ್ತು ಬೆಂಗಳೂರು ನಲ್ಲಿರುವ ಕಟ್ಟಡ ನಿನ್ನ ಹೆಸರಲ್ಲಿ ಬರೆಯುತ್ತೇನೆ,….ನಾಳೇನೇ ವಕೀಲರನ್ನು ಬರ ಹೇಳಿದ್ದೇನೆ, ಮತ್ತು ನಾಳೆ ಎಲ್ಲಿಯೂ ಹೋಗಬೇಡ, ನನ್ನ ಕುತ್ತಿಗೆಯಲ್ಲಿರೋ, ಚಿನ್ನ ಕೂಡ, ನಿನಗೇನೆ, ಯಾಕೆಂದ್ರೆ, ನನ್ನ ಚಿನ್ನದಂತಿರುವ ಮಗಳನ್ನು ಬಹಳ ಜಾಗರೂಕತೆಯಿಂದ, ಇಷ್ಟು ವರ್ಷಗಳಿಂದ, ನೀನು ಶಾಲೆಯಿಂದ, ಮನೆಗೆ ಕರೆದುಕೊಂಡು ಬಂದಿದ್ದೀಯಾ…. ಇದಕ್ಕೆ ನಿನಗೆ ಇಷ್ಟು ಉಡುಗೊರೆ ಸಾಲದು, ನನ್ನ ಮಗಳಿಗೆ, ಒಬ್ಬ ಒಳ್ಳೆ ವರ ಹುಡುಕಬೇಕು, SSLC ಕಳೆದು ಮುಂದಿನ ವಿದ್ಯಾಭ್ಯಾಸ ಕಲಿಯಲು ಅವನು ಬಿಡಬೇಕು, ಆತರದ ಹುಡುಗ ಆಗ್ಬೇಕು, ಅದ್ದೂರಿಯಾಗಿ ಮದುವೆ ಮಾಡಿ, ಅದೇ ಚಪ್ಪರದಲ್ಲಿ, ಮರುದಿನ ನಿನ್ನ ಮದುವೆ,ಪ್ರೀತಿಸಿದ ಹುಡುಗಿ ಇದ್ರೆ ಹೇಳು ಇಲ್ಲಾಂದ್ರೆ ಎಲ್ಲಾದ್ರೂ ಹುಡುಗಿ ಇದ್ರೆ ನೋಡು, ಅಪ್ಪ ಅಮ್ಮನನ್ನು, ಬರಲು ಹೇಳು…..!
ಇದನ್ನು ಕೇಳಿ ಒಳಂಗಿದೊಳಗೆ, ಪಶ್ಚಾತಾಪ, ದುಃಖ, ನೋವು, ಸಂಕಟ, ಎಲ್ಲವನ್ನು ಸಹಿಸಿಕೊಂಡು ಹೇಳಿದ, ರಾಯರೇ, ಯಾವುದಕ್ಕೂ, ನಾಳೆ ಹೇಳ್ತಿನಿ ……,
ಓಹೋ ಹಾಗಾದ್ರೆ ಒಬ್ಬಳು ಹುಡುಗಿ ಇದ್ದಾಳೆ ಅನ್ನು ಅಂತ ತುಸು ನಕ್ಕು ಆಯ್ತು ನಾಳೆ ಹೇಳು ಅಂದರು ರಾಯರು
ಸೀದಾ ರೂಮ್ ಗೆ ಹೋದವನೇ ದುಃಖ ಕಟ್ಟೋಡೆದು ಗಳ ಗಳನೆ ಅತ್ತ…..!
ಹುಡುಗಿಗೆ ಫೋನ್ ಮಾಡಿ ವಿಷಯ ತಿಳಿಸಿದ, ಬೇಡಾ ಚಿನ್ನ, ಆದದನ್ನು ಎಲ್ಲಾ ಮರೆತು ಬಿಡು, ನನಗೆ ಮದುವೆ ಆಗಿ 2 ಮಕ್ಕಳು ಬೇರೆ ಇದೆ, ಇಷ್ಟು ವರ್ಷ, ಆಸ್ತಿಯ ಆಸೆಗೆ ಬಿದ್ದು ರಾಯರಲ್ಲಿ ಸುಳ್ಳು ಹೇಳಿದ್ದೆ, ಇನ್ನು ನಾನು ಮೋಸ ಮಾಡಿದರೆ ದೇವರು ಮೆಚ್ಚಲಾರ….!
ಅದಕ್ಕೆ ಹುಡುಗಿ ಅಯ್ಯೋ ಚಂಡಾಲಾ, ನೀನು ಮೊನ್ನೆ ನನ್ನ ದೇಹ ಮುಟ್ಟೋ ಮುಂಚೆ ಹೇಳ್ಬಾರ್ದಿತ್ತಾ..? 4 ವರ್ಷದ ಪ್ರೀತಿಯಲ್ಲಿ, ನನ್ನ ದೇಹ ಬಯಸದ ನೀನು ಮೊನ್ನೆ ಯಾಕೆ ಹಾಗೆ ಮಾಡಿದ್ದಿ ಛೆ ಅಂತ ಗಳ ಗಳ ಅತ್ತಳು
ಯಾವುದಕ್ಕೂ ಈಗ ಏನೂ ಹೇಳ್ಬೇಡಾ ಪ್ಲೀಸ್, ನಾನು ಊರಿಗೆ ಹೋಗಿ ಬರುತ್ತೇನೆ, ಆಮೇಲೆ ಎಲ್ಲಾ ಸತ್ಯ ರಾಯರಲ್ಲಿ ಹೇಳುವೆ, ಅಲ್ಲಿವರೆಗೂ ಯಾರಲ್ಲಿಯೂ, ಯಾವ ವಿಷಯವೂ ಹೇಳ್ಬೇಡಾ, ನನ್ನಾಣೆ ಚಿನ್ನ ಅಂತ ಗೊಗೇರದನು….!
ನನಗೇನು ಅನ್ಯಾಯ ಆದ್ರೆ ಬದುಕಿರಲಾರೆ ಎಂದು ಎಚ್ಚರಿಸಿ ಆಯ್ತು ಅಂದಳು.
ರಾಯರೇ ನಾನು ಅಪ್ಪ ಅಮ್ಮನಲ್ಲಿ ಹೇಳಿ ಅವರನ್ನು ಕರ್ಕೊಂಡು ಬರ್ತೀನಿ, ನನಗೆ 2 ತಿಂಗಳು ರಜಾ ಬೇಕು,…..!
ರಾಯರು ನಕ್ಕು ಓಹೋ ಹಾಗಾದ್ರೆ ಹುಡುಗಿ ಯಾರು?ಫೋಟೋ ಇದೆಯಾ, ಮದುವೆ ಆದ್ಮೇಲೆ ನೀವು ಇಲ್ಲೇ ಒಟ್ಟಿಗೆ ಇರಿ,
ನೀನು ಯಾಕೆ ಇಷ್ಟು ಸಪ್ಪೆ ಆಗಿದ್ದೀಯಾ, ನಾನು ಹೇಳಿದ್ರಲ್ಲಿ ಬೇಜಾರ್ ಆಯ್ತಾ? ಅಥವಾ ನನ್ನ ಮುದ್ದಿನ ಗಿಣಿ ಯನ್ನು ಬಿಟ್ಟು ಹೋಗಲು ಮನಸಿಲ್ವೆ, ಅಂತ ಮಗಳನ್ನು ಸವರಿ ನಕ್ಕು ಕೇಳಿದರು-
ಎಲ್ಲಾ ಬಂದು ಹೇಳ್ತೇನೆ, ಅಂತ, ಒಳ ಮನಸಿನ ದುಃಖದಲ್ಲಿ ರಾಯರ ಕಾಲಿಗೆ ನಮಸ್ಕರಿಸಿ ದೂರ ನಿಂತನು, ರಾಯರು 5 ಲಕ್ಷದ ಚೆಕ್ ನೀಡಿ ಊರಿಗೆ ಹೋಗಿ ಬಾ ಅಂದ್ರು…
ಅಯ್ಯೋ ರಾಯರೇ ನನ್ನ ಸಂಬಳ ಇಷ್ಟೊಂದು ದುಡ್ಡು ಆಗ್ಲಿಲ್ಲ.. ಯಾಕೆ ಇಷ್ಟು…?,
ಮದುವೆ ಇದೆ ಅಂತಾ ಮನೆಯನ್ನು ಸ್ವಲ್ಪ ರಿಪೇರಿ ಪೇಂಟಿಂಗ್ ಮಾಡು, ಇಲ್ಲಿ ಮಲಗೋ ತರದ ಒಂದು ಮಂಚ ತಗೋ ಮತ್ತು ಮನೆಗೆ ಬೇಕಾದ ಇನ್ನಿತರ ಸಾಮಾಗ್ರಿಗಳನ್ನು ತಗೋ…..
ಡ್ರೈವರ್ ನ ಕಣ್ಣಂಚಲ್ಲಿ ನೀರು ಜಿಮುಕಿದವು, ನಾನೆಂತ ಮೂರ್ಖ….. ದೇವರಂತಹ ಮನುಷ್ಯನಿಗೆ ದ್ರೋಹ ಬಗೆದೆನೇ.. ನಾನು ಪಾಪಿ.. ಅಂತ ಮನಸಲ್ಲೇ ಅತ್ತನು, ಅಲ್ಲಿಂದ ಒಲ್ಲದ ಮನಸಿನಿಂದ ಊರಿಗೆ ಮರಳಿದನು ಹುಡುಗಿ ತಾಯಿ ಟಾಟಾ ಮಾಡುತ್ತಾ ಬೀಳ್ಕೊಟ್ಟರು….!
ಫೋನ್ ನಲ್ಲಿ ಇದೇ ವಿಷಯದಲ್ಲಿ, ಮೆಸೇಜ್ ಗಳು, ಕರೆಗಳು ರಾಯರಿಗೆ ಗೊತ್ತಾಗದ ಹಾಗೇ ತಿಂಗಳು ಗಟ್ಟಲೆ ಬಂದು ಹೋದವು.
ಎರಡು ತಿಂಗಳು ಆಗ್ತಾ ಬಂತು, ಡ್ರೈವರ್ ಗೆ ರಾಯರು ಕರೆ ಮಾಡಿ ಬರಲು ಹೇಳಿದರು, ಆಯ್ತು ದನಿ ನಾಳೆ ಬರ್ತೀನಿ ಅಂದ ಡ್ರೈವರ್
ಏನು ಮಾಡ್ಬೇಕು ಅಂತ ಚಿಂತೆಯಲ್ಲಿ ಡ್ರೈವರ್ ಒಂದು ಕಡೆಯಾದರೆ. .. ಇತ್ತ ರಾಯರ ಮಗಳು ವಾಂತಿ ಮಾಡುತ್ತಿದ್ದಳು, ಡಾಕ್ಟರನ್ನು ಕರೆಸಿ ತೋರಿಸಿದಾಗ ರಾಯರಿಗೆ ಮತ್ತು ಹೆಂಡತಿ ಗೆ , ಸಿಡಿಲು ಬಡಿದಂತಾಯಿತು, ಏನಮ್ಮ ಇದು ಎಂದು ಕೇಳಿದರು, ಏನೂ ಮಾತನಾಡದೆ ರೂಮ್ ಒಳಗೆ ಹೋದಳು, ತಾಯಿ ಎರಡು ಬಾರಿಸಿ, ಕೇಳಿದರು, ಹೊರಗೆ ಡ್ರೈವರ್ ಬಂದು, ರಾಯರಲ್ಲಿ ಸತ್ಯವನ್ನೆಲ್ಲಾ ಬಿಚ್ಚಿ ಹೇಳುತ್ತಿದ್ದ, ಮಗಳು ಬಾಯಿ ಬಿಡ್ಲೇ ಇಲ್ಲ, ಅಷ್ಟರಲ್ಲಿ ರಾಯರು ಒಳಗೆ ಬಂದು ಹೆಂಡತಿಯಲ್ಲಿ ವಿಷಯ ಹೇಳಲು ಬಾಯಿ ತೆಗೆಯಬೇಕಾದರೆ, ಎದೆ ನೋವು ಕಾಣಿಸಿ ಕೊಂಡಿತ್ತು, ನೋವಲ್ಲೇ, ಹೇಳಿದರು, ಊರಿನವರಿಗೆ, ಗೊತ್ತಾಗೋ ಮುಂಚೆ, ಪರಿಹಾರ ಕಂಡುಹುಡುಕಿ, ನಾನು ಸತ್ರೆ, ನನ್ನ ಹೆಣದ ಜೊತೆಗೆ ಅವಳು, ನೀನೂ ಸುಟ್ಟು ಬಿಡಿ, ಅಯ್ಯೋ ಯಾಕ್ರೀ ಹೀಗೆಲ್ಲಾ,…!
ನಾಳೇನೇ ಅಬಾರ್ಸನ್ ಮಾಡಿಸೋಣ, ಅಂದಾಗ ಮಗಳು ಒಪ್ಪಲಿಲ್ಲ …. ಹಠ ಹಿಡಿದಳು….. ವಿಧಿಯಿಲ್ಲದೇ ಡ್ರೈವರ್ ಜೊತೆ ಮದುವೆಗೆ ಒಪ್ಪ ಬೇಕಾಯಿತು….
ಆದ್ರೆ ಹೇಗೆ,..? ಒಂದು ಮರ್ಯಾದೆ ಪ್ರಶ್ನೆ, ಇನ್ನೊಂದು ಅವನಿಗೆ ಬೇರೆ ಮದುವೆ ಆಗಿದೆ ಅನ್ನೋದು.. ಒಂದೂ ತಿಳಿಯದೆ ಪೇಚಾಡಿದರು
ಡ್ರೈವರ ಹೆಂಡತಿಯನ್ನು ಬರಹೇಳಿ, ವಿಷಯ ತಿಳಿಸಿದರು, ಇದಕ್ಕೆ ಪರಿಹಾರ ಅನ್ನೋದು, ನೀನೊಬ್ಬಳೇ ಅಂದರು, ಅದಕ್ಕೆ ಅವಳು ಹೇಳಿದಳು ಯಜಮಾನ್ರೇ… ನನ್ನ ಮಕ್ಕಳನ್ನು ಚೆನ್ನಾಗಿ ನೋಡಿ ಕೊಳ್ಳೋದಾದರೆ, ಈ ಮದುವೆಗೆ ಒಪ್ಪುತ್ತೇನೆ, ನಾನು ಬ್ರೈನ್ ಟ್ಯೂಮಾರ್ ರೋಗಿ 2 ತಿಂಗಳು, ಬದುಕುವ ಸಾಧ್ಯತೆ ಕಡಿಮೆ ಅಂದಿದ್ದಾರೆ ಡಾಕ್ಟರ್….!
ಎಲ್ಲಾ ಮಾತುಕತೆ ಮುಗಿದಮೇಲೆ, ಮರುದಿವಸ ವಕೀಲರನ್ನು ಬರ ಹೇಳಿ ಡ್ರೈವರ್ ನ ಮಕ್ಕಳ ಹೆಸರಿಗೆ, ಮತ್ತು, ಬಾಕಿ ಇವರ ಹೆಸರಿಗೆ ಆಸ್ತಿಯನ್ನು ಬರೆಸಿ, ಇದ್ದ ದುಡ್ಡನ್ನು ವೃದ್ದಾಶ್ರಮಕ್ಕೆ ಬರೆಸಿ, ರಾಯರು ಹೆಂಡತಿ ಅಲ್ಲೇ ಇರುವುದಾಗಿಯೂ, ಬರೆಸಿದರು,.. ಎಲ್ಲಾ ರೆಡಿ ಆದಮೇಲೆ….!
ಮಗಳನ್ನ ಕರೆದು ಹೇಳಿದರು, ನೀನು ಸುಖವಾಗಿ ಇರ್ತಿಯೋ, ಹೇಗಿರ್ತೀಯೋ ಗೊತ್ತಿಲ್ಲ, ನಾನಂತೂ, ನಿನ್ನನ್ನ ಬೊಂಬೆ ತರ ನೋಡಿದೆ, ನಿನ್ನ ಮದುವೆ, ಮೊಮ್ಮಕ್ಕಳು ಇದೆಲ್ಲಾ ಕನಸು ಕಂಡೆ, ಆದ್ರೇ….. ಗಳ ಗಳ ಅತ್ತರು….
ನಂತರ ಯಾವುದೂ ನಡೆಯದ ಹಾಗೇ ಮರುದಿವಸಕ್ಕೆ ಕಾಯುತ್ತಾ ಹಾಗೇ ಮಲಗಿದರು…
ಮರುದಿನ ಸೂರ್ಯ ಉದಯಿಸುವ ಮೊದಲು ಎಲ್ಲಾ ತಯಾರಿಯಂತೆ, ತನ್ನ ಮಗಳನ್ನು ಅಪ್ಪಿ ಮುತ್ತಿಟ್ಟು, ತನ್ನ ಕಾರಲ್ಲಿ ಕೂರಿಸಿ, ಡ್ರೈವರನ್ನು ಕರೆದು, ಅವನ ಕೈಗೆ ಕೊಟ್ಟು, ಎಲ್ಲಾದರೂ ಹೋಗಿ ರಿಜಿಸ್ಟರ್ ಮ್ಯಾರೇಜ್ ಆಗಿ,ಊರಿನವರು ಸಾವಿರ ಹೇಳ್ತಾರೆ, ಅದಕ್ಕೆ ತಲೆಕೆಡಿಸಬೇಡಿ, ನನಗೆ ನನ್ನ ಮಗಳ ಪ್ರಾಣ ಮುಖ್ಯ ಅಂದ್ರು,ಇದು ಖರ್ಚಿಗಿರಲಿ, ಇದೆಲ್ಲಾ ಯಾಕೆ ಮಾಡುತ್ತೇನೆ ಅಂದ್ರೆ ನನ್ನ ಮಗಳು ನೊಂದು ಆತ್ಮಹತ್ಯೆ ಮಾಡಿಕೊಳ್ಳೋದಕ್ಕಿಂತ, ಇದೇ ವಾಸಿ, ಎಂದರು, ಮನೆ ಬೀಗ, ಆಸ್ತಿ, ಪಾಸ್ತಿ, ಎಲ್ಲಾ, ಅವನ ಕೈಗಿತ್ತರು, ಎಂದೂ ಕೂಡ ವೃದ್ದಾಶ್ರಮಕ್ಕೆ ಬರಬಾರದು, ಎಂದು ಮಾತು ಕೊಡಲು ಹೇಳಿ, ಬೀಳ್ಕೊಟ್ಟರು, ಬಾಡಿಗೆಯ ಮತ್ತೊಂದು ಕಾರು ಅವರನ್ನು ಆಶ್ರಮಕ್ಕೆ ಕೊಂಡು ಹೋಗಲು ರೆಡಿಯಾಗಿತ್ತು … ಡ್ರೈವರ್ ನ ಹೆಂಡತಿ ಗೆ ಮಾತು ಕೊಟ್ಟಂತೆ, ಮಕ್ಕಳ ಹೆಸರಲ್ಲಿ ದುಡ್ಡು ಹಾಗೂ ಆಸ್ತಿ ಪತ್ರ ಕೈಗಿತ್ತರು,ಡ್ರೈವರ ಮಕ್ಕಳ ಮೂಕ ಮನಸ್ಸು ಮoಕಾಗಿತ್ತು
ತನ್ನ ಹೆಂಡತಿಯ ಹೆಗಲ ಮೇಲೆ ಕೈ ಹಾಕಿ, ಕಾರಿನ ಬಲಿ ಹೋಗಿ, ಒಮ್ಮೆ ಮನೆಯನ್ನು ಕಣ್ತುಂಬ ನೋಡಿದರು…..!
ಕಾರು ಚಲಿಸ ತೊಡಗಿತು, ಕಾರಿನಲ್ಲಿ “ನೀನೇ ಸಾಕಿದಾ ಗಿಣಿ, ನಿನ್ನಾ ಮುದ್ದಿನಾ ಗಿಣಿ”…..ಈ ಹಾಡು, ಪ್ಲೇ ಆಗುತ್ತಿತ್ತು……
ಅಯ್ಯೋ ದೇವರೇ ಎಲ್ಲಾ ವಿಧಿ ಅಂತ ಕಾರಿನ ಸೀಟಿಗೆ ಒರಗಿ ನಿದ್ದೆಗೆ ಜಾರಿದರು.
(ಮುಗಿಯಿತು)
🙏ಧನ್ಯವಾದಗಳು🙏
✍️ಬರಹ :- ಸ್ನೇಹಜೀವಿ ಉದಯಮಲ್ಲಿ, ಬೆದ್ರಡ್ಕ, ಸಿರಿಬಾಗಿಲು (ಅಂಚೆ),
ಕಾಸರಗೋಡು,671124
Apuestas Deportivas Caliente – sounds like I could find my new online betting spot. Does it have a wide range of sports and competitive odds? Let me know. apuestas deportivas caliente
Just loaded up epiwingame… pretty simple interface. Got some time to kill so will give it a spin! Check it out yourself: epiwingame
74bet9comlogin, here we go! Registration and login process were relatively smooth. Let’s hope the rest of the experience is good. Check it out here, maybe we’ll get lucky together: 74bet9comlogin